Advertisement
ಸೀರೆಯಿಂದ ಸಿನಿಮಾ ಪ್ರಚಾರವಸ್ತ್ರ ವಿನ್ಯಾಸಕಿ ಮಸಾಬ ಗುಪ್ತಾ ಈ ರೀತಿಯ ಸೀರೆಯ ವಿನ್ಯಾಸ ಮಾಡುವುದಲ್ಲದೆ ಅವುಗಳನ್ನು ಉಟ್ಟು ಅವುಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದ್ದಾರೆ. ಇವರ ವಿನ್ಯಾಸದ ಆಲ್ಫಾಬೆಟ್ ಪ್ರಿಂಟ್ ಸೀರೆಯೊಂದನ್ನು ಬಾಲಿವುಡ್ ನಟಿ ಸೋನಂ ಕಪೂರ್ ಉಟ್ಟು ತನ್ನ ಚಿತ್ರದ ಪ್ರಮೋಷನ್ ವೇಳೆ ಅದೇ ಸೀರೆಯಲ್ಲಿ ಕಾಣಿಸಿಕೊಂಡಿಲ್ಲೇ ತಡ, ಅಭಿಮಾನಿಗಳಲ್ಲಿ ಮತ್ತು ಫ್ಯಾಷನ್‌ಲೋಕದಲ್ಲಿ ದೊಡ್ಡ ಸುದ್ದಿ ಮಾಡಿತು. ಮೈಬಣ್ಣಕ್ಕೆ ಹೋಲುವ ಸೀರೆಯ ಮೇಲೆ ತಮಿಳು ಅಕ್ಷರಗಳಲ್ಲಿ ವಿನ್ಯಾಸಕಿಯ ಹೆಸರು, ನಟಿಯ ಹೆಸರು ಮತ್ತು ಚಿತ್ರದ ಹೆಸರನ್ನು ತಮಿಳು ಲಿಪಿಯ ಆ ಪದಗಳನ್ನು ಸೀರೆಯ ತುಂಬಾ ಬರೆಯಲಾಗಿತ್ತು.
ಉದ್ಯಮಿ ನೀತಾ ಅಂಬಾನಿ ತನ್ನ ಮಗನ ಮದುವೆಗೆ ತೊಟ್ಟ ಲೆಹೆಂಗಾ ಚೋಲಿ (ಶಾಲು, ರವಿಕೆ ಮತ್ತು ಲಂಗದ ಸೆಟ್)ಯಲ್ಲೂ ಈ ಶೈಲಿಯನ್ನು ಅಳವಡಿಸಲಾಗಿತ್ತು. ಹಿಂದಿಯ “ಶುಭಾರಂಭ’ ಎಂಬ ಪದವನ್ನು ರವಿಕೆಯ ಬೆನ್ನಲ್ಲಿ ಮೂಡಿಸಲಾಗಿತ್ತು. ಭಾರತೀಯ ಮಸಾಲೆಗಳಿಂದ ಪ್ರೇರಣೆ ಪಡೆದು ವಸ್ತ್ರ ವಿನ್ಯಾಸಕ ಸತ್ಯ ಪೌಲ್ ಹಿಂದಿಯ “ಮಿರ್ಚಿ’ (ಮೆಣಸು) ಎಂಬ ಪದವನ್ನು ಕೈಯಿಂದಲೇ ಬರೆದ ಸೀರೆಯನ್ನು ಹಿಂದಿ ನಟಿ ಕರಿಷ್ಮಾ ಕಪೂರ್ ಉಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಟ್ರೆಂಡ್ ಆಗುವಂತೆ ಮಾಡಿದ್ದಾರೆ. ಸೀರೆಯುಟ್ಟ ಬಾಲಿವುಡ್ ನೀರೆಯರು
ಹಿಂದಿ ನಟಿಯರಾದ ವಿದ್ಯಾ ಬಾಲನ್, ನೀನಾ ಗುಪ್ತಾ, ಬಿಪಾಶಾ ಬಸು, ರಾಣಿ ಮುಖರ್ಜಿ, ಸುಶ್ಮಿತಾ ಸೇನ್, ಸೋಹಾ ಅಲಿ ಖಾನ್ ಮುಂತಾದವರು ಈ ಶೈಲಿಯ ಸೀರೆಗಳನ್ನು ಉಟ್ಟಿದ್ದಾರೆ. ಹಿಂದಿ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಕೂಡ ಈ ಆಲ್ಫಾಬೆಟ್ ಪ್ರಿಂಟ್ ಉಳ್ಳ ಸೀರೆ ತೊಟ್ಟಿದ್ದು ಟ್ರೆಂಡ್ ಆಗಿತ್ತು. ಮಾರುಕಟ್ಟೆಯ ಅಂಗಡಿಗಳಲ್ಲಿ ಈ ಬಗೆಯ ಸೀರೆ ಕೊಳ್ಳುವುದಾದರೆ, ಆಲ್ಫಾಬೆಟ್ ಪ್ರಿಂಟ್ ಎಂದು ಕೇಳಬಹುದು. ಈ ಸೀರೆಗಳು ಆನ್‌ಲೈನ್‌ನಲ್ಲೂ ಲಭ್ಯ. ಎಲ್ಲರಿಗಿಂತ ಭಿನ್ನವಾಗಿ ಕಾಣಬಯಸುವಿರಾದರೆ ನೀವೂ ಇಂಥ ಆಲ್ಫಾಬೆಟ್ ಪ್ರಿಂಟ್ ಸೀರೆಗಳನ್ನು ಉಟ್ಟು ಟ್ರೆಂಡ್ ಸೆಟ್ ಮಾಡಿ!
Related Articles
ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆಯೂ ತನ್ನ ಮದುವೆಗೆ ಉಟ್ಟ ಸೀರೆಯ ಸೆರಗಿನ ಜರಿಯಲ್ಲಿ ಹಿಂದಿಯಲ್ಲಿ ಬರೆಯಲಾಗಿತ್ತು. ವಸ್ತ್ರ ವಿನ್ಯಾಸಕ ಸಬ್ಯಸಾಚಿ, “ಸದಾ ಸೌಭಾಗ್ಯವತೀ ಭವ’ ಎಂಬ ಪದಗಳನ್ನು ಸ್ವರ್ಣ ವರ್ಣದಲ್ಲಿ ಈಕೆಯ ಉಡುಗೆಯಲ್ಲಿ ಮೂಡಿಸಿದ್ದರು.
Advertisement
ಬಹಳ ಹಿಂದೆಯೇ ಉಟ್ಟಿದ್ದರುಈ ಆಲ್ಫಾಬೆಟ್ ಪ್ರಿಂಟ್ ಟ್ರೆಂಡ್ ಆಗುವ ಅದೆಷ್ಟೋ ವರ್ಷಗಳ ಹಿಂದಿನಿಂದಲೇ ಜನಪ್ರಿಯ ಪಾಪ್ ಗಾಯಕಿ ಉಷಾ ಉತುಪ್ ಇಂಥ ಶೈಲಿಯ ಸೀರೆ ಉಡುತ್ತಿದ್ದಾರೆ. ಬೆಂಗಾಲಿ ಅಥವಾ ತಮಿಳು ಭಾಷೆಗಳ ಅಕ್ಷರಗಳನ್ನು ಮೂಡಿಸಿರುವ ಸೀರೆ ಮತ್ತು ರವಿಕೆಯನ್ನು ಇವರು ಬಹಳಷ್ಟು ಸಂದರ್ಭಗಳಲ್ಲಿ ಉಟ್ಟಿದ್ದಾರೆ. ಅದಿತಿಮಾನಸ ಟಿ. ಎಸ್.