Advertisement

ಅಲೋಶಿಯಸ್‌ ಕೌಶಲಾಭಿವೃದ್ಧಿ ಕೇಂದ್ರ ಉದ್ಘಾಟನೆ

12:59 PM Oct 27, 2017 | |

ಮಹಾನಗರ: ದೇಶದಲ್ಲಿ ಕೈಗಾರಿಕ ವಲಯಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕೆಸಿಸಿಸಿ ಕಾರ್ಯದರ್ಶಿ ಮಮತಾ ಗಟ್ಟಿ ತಿಳಿಸಿದರು.

Advertisement

ಸಂತ ಅಲೋಶಿಯಸ್‌ ಕೈಗಾರಿಕ ತರಬೇತಿ ಸಂಸ್ಥೆಯು ಜಾಗ್ವಾರ್‌ ಗ್ರೂಪ್‌ ಸಹಭಾಗಿತ್ವದಲ್ಲಿ ಗುರುವಾರ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂತ ಅಲೋಶಿಯಸ್‌ ಕೌಶಲಾಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಮಾನವ ಸಂಪನ್ಮೂಲಗಳಿದ್ದರೂ, ಅದನ್ನು ಉಪಯೋಗಿಸುವ ಶಕ್ತಿ ನಮ್ಮಲ್ಲಿಲ್ಲ. ಅನುದಾನಗಳು ಕಡಿಮೆ ಇದ್ದು, ಬುದ್ಧಿವಂತರು ಹೆಚ್ಚಿದ್ದಾರೆ. ಅವರನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಮಾರ್ಗದರ್ಶನ ನೀಡುವವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದರು.

ಶಾಲಾ ಕಾಲೇಜುಗಳಲ್ಲಿ ಉತ್ತಮ ಶಿಕ್ಷಕರ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರೆ ಅವರ ಜೀವನ ರೂಪಿಸಲು ಸಹಾಯ ಮಾಡಿದಂತಾಗುತ್ತದೆ. ಪದವಿ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಮಾತ್ರ ಕೆಲಸ ಎನ್ನುವ ಕೆಲ ಕಾಲೇಜುಗಳ ಪೈಕಿ, 8ನೇ ತರಗತಿಯಲ್ಲಿ ಅನುತ್ತೀರ್ಣರಾದೂ ಅವರಿಗೆ ತರಬೇತಿ ನೀಡುವ ಅಲೋಶಿಯಸ್‌ ಕೈಗಾರಿಕ ಸಂಸ್ಥೆ ಮಾದರಿಯಾಗಿದೆ ಎಂದು ತಿಳಿಸಿದರು.

ಸಮಾಜಕ್ಕೆ ಕೊಡುಗೆ ನೀಡಿ
ಎನ್‌ಎಂಪಿಟಿ ಟ್ರಸ್ಟಿ ಶೇಖರ ಪೂಜಾರಿ ಮಾತನಾಡಿ, ಒಳ್ಳೆಯ ಕೆಲಸವನ್ನು ನಿರ್ವಹಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಕೈಗಾರಿಕ ಸಂಸ್ಥೆಗಳಲ್ಲಿ ಕಡಿಮೆ ಅವಧಿಯ ಕೋರ್ಸ್‌ ಮಾಡಿ, ಉತ್ತಮ ಕೆಲಸ ನಿರ್ವಹಿಸುತ್ತಿರುವ ಅನೇಕ ಉದಾಹರಣೆಗಳಿವೆ. ಕೆಲಸದ ಮೇಲೆ ಶ್ರದ್ಧೆ ಇರಬೇಕೇ ವಿನಾ ಎಂದಿಗೂ ಹಣದ ಹಿಂದೆ ಹೋಗಬಾರದು ಎಂದು ಕಿವಿಮಾತು ಹೇಳಿದರು.

Advertisement

ಜಾಗ್ವಾರ್‌ ಸಂಸ್ಥೆಯ ಗ್ಲೋಬಲ್‌ ಹೆಡ್‌ ಅಜಯ್‌ ಮಹಾಜನ್‌ ಮಾತನಾಡಿ, ಭಾರತ ಅಭಿವೃದ್ಧಿ ಹೊಂದುತ್ತಿದ್ದು, ಆರ್ಥಿಕ ಪರಿಸ್ಥಿತಿಯೂ ಚೇತರಿಕೆ ಕಾಣುತ್ತಿದೆ. ಇಂದು ವಿಜ್ಞಾನ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳಾಗಿದೆ. ಹೊಸ ತಂತ್ರಜ್ಞಾನದ ಯಂತ್ರಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಮಾನವನ ದೈಹಿಕ ಕೆಲಸ ಕಡಿಮೆಯಾಗುತ್ತಿದೆ ಎಂದು ವಿವರಿಸಿದರು.

ಸಂತ ಅಲೋಶಿಯಸ್‌ ಸಮೂಹ ಸಂಸ್ಥೆಯ ರೆಕ್ಟರ್‌ ರೆ| ಫಾ| ಡೈನೀಶಿಯಸ್‌ ವಾಸ್‌, ಜಾಗ್ವಾರ್‌ ಸಂಸ್ಥೆಯ ದಕ್ಷಿಣ ವಿಭಾಗದ ಮುಖ್ಯಸ್ಥ ದೇವನಾಯಂಗಮ್‌, ಕರ್ನಾಟಕ ಬ್ರ್ಯಾಂಚ್‌ ಮುಖ್ಯಸ್ಥ ಸತ್ಯರಾಜನ್‌ ಬಿಸ್ವಾಲ್‌, ಜಾಗ್ವಾರ್‌ ಕಂಪೆನಿ ಏರಿಯಾ ಸೇಲ್ಸ್‌ ಮ್ಯಾನೇಜರ್‌ಲಕ್ಷ್ಮೀಕಾಂತ್‌ ಪೂಜಾರಿ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next