Advertisement

ಬೆಳಕಿನ ಜೊತೆಜೊತೆಗೇ ಬೆರಗಿನ ಹಾಡೂ ಇದೆ!

08:10 PM Nov 08, 2019 | Lakshmi GovindaRaju |

ಪ್ರತಿದಿನವೂ ಒಂದಿಲ್ಲೊಂದು ಹೊಸತನ್ನು ಸೃಜಿಸುವ ಪ್ರಕೃತಿ ಬಹಳ ದೊಡ್ಡ ಕಲೆಗಾರ. ಅನಂತ ಬಣ್ಣಗಳು ಇದರ ಜೋಳಿಗೆಯಲ್ಲಿ ಅಡಗಿದೆ. ಪ್ರಕೃತಿಯೆಂಬ ಈ ಕಿಲಾಡಿ, ಭೂಮಿ- ಆಕಾಶವನ್ನೇ ಕ್ಯಾನ್ವಾಸ್‌ ಮಾಡಿಕೊಂಡು ಅಪ್ರತಿಮ ಕಲಾಕೃತಿಗಳನ್ನು ನಮ್ಮ ಮುಂದಿಡುತ್ತದೆ ಮತ್ತು ನಮ್ಮೆಲ್ಲಾ ಹುಂಬತನ ಗಳನ್ನು, ಸೊಕ್ಕುಗಳನ್ನು, ಕ್ಷುಲ್ಲಕ ಎನ್ನಿಸುವಂತೆ ಮಾಡುತ್ತದೆ.

Advertisement

ಸಕಲ ಜೀವಾತ್ಮಗಳಿಗೆ ಆಶ್ರಯ ಕೊಟ್ಟು ಸಲಹುವ ತಾಯಿ, ಪ್ರತಿದಿನವೂ ಹೊಸತನ್ನು ಕಲಿಸುವ ಗುರು, ಬೇಸರಗಳನ್ನು ನುಂಗುವ ಸ್ನೇಹಿತ, ಎದೆ ಭಾರವನ್ನು ಕರಗಿಸಬಲ್ಲ ಆತ್ಮಸಖೀ ಎಲ್ಲವೂ ಆಗಿರುತ್ತದೆ. ದೂರದಿಂದ ಬರುವ ಬೆಳಕು ಕೇವಲ ಬಣ್ಣಗಳನ್ನು ಮಾತ್ರ ಹೊತ್ತು ತರುವುದಿಲ್ಲ . ಇಡೀ ಜೀವ ಸಂಕುಲಕ್ಕೆ ಚೈತನ್ಯವನ್ನು, ಲವಲವಿಕೆಯನ್ನು, ಬದುಕಿನ ನಂಬಿಕೆ ಯನ್ನೂ ತರುತ್ತದೆ.

ಬೆಳಕಿಲ್ಲದ ಜಗತ್ತನ್ನು ಊಹಿಸುವುದೂ ಅಸಾಧ್ಯ. ಸಂಜೆ ಮುಂಜಾವುಗಳಲ್ಲಂತೂ ಬೆಳಕೆಂಬುದು ಮಾಯೆಯಂತೆ, ಮಾಯಾವಿಯಂತೆ ದರ್ಶನ ಕೊಡುತ್ತದೆ. ಸ್ವರ್ಗಸೀಮೆ ಅಂದರೆ ಇದೇ ಏನೋ ಎಂಬಂಥ ದೃಶ್ಯ ವೈಭವವನ್ನು ತೆರೆದಿಡುತ್ತದೆ. ನಮ್ಮ ಎದೆ ಬಡಿತವನ್ನು ನಮ್ಮದೇ ಕಿವಿಗೆ ಕೇಳಿಸುವಂತೆ ಮಾಡುತ್ತದೆ.

ಅಲ್ಲೆಲ್ಲೋ ದೂರದಲ್ಲಿ ಹುಟ್ಟುತ್ತಿರುವಂತೆ, ಮುಳುಗುತ್ತಿರುವಂತೆ ಕಾಣಿಸುವ ಸೂರ್ಯನ ಹಳದಿ ಮಿಶ್ರಿತ ಕೆಂಪು ಕಿರಣ ಗಳು ಮೋಡ, ಮರ, ನೆಲ ನೀರನ್ನು ತಾಕಿ ದಾಗಿನ ದೃಶ್ಯಗಳನ್ನು ಸೆರೆ ಹಿಡಿಯಲು ಫೋಟೊಗ್ರಾಫ‌ರ್‌ಗಳು ಕಾದು ಕುಳಿತಿರು ತ್ತಾರೆ. ಒಂದು ಸುಂದರ ಸಂಜೆ- ಮುಂಜಾವುಗಳನ್ನು ಕ್ಲಿಕ್ಕಿಸುವ ಕನಸು ಪ್ರತೀ ಫೋಟೊಗ್ರಾಫ‌ರ್‌ನಿಗೆ ಇದ್ದೇ ಇರುತ್ತದೆ.

* ಪ್ರವರ ಕೊಟ್ಟೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next