Advertisement

ನಗರ ಆಯುಕ್ತರಾಗಿ ಅಲೋಕ್‌ ಅಧಿಕಾರ ಸ್ವೀಕಾರ

01:31 AM Jun 18, 2019 | Lakshmi GovindaRaj |

ಬೆಂಗಳೂರು: ನಗರ ಪೊಲೀಸ್‌ ಆಯುಕ್ತರಾಗಿ ಹಿರಿಯ ಐಪಿಎಸ್‌ ಆಧಿಕಾರಿ ಅಲೋಕ್‌ಕುಮಾರ್‌ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ನಿರ್ಗಮಿತ ಆಯುಕ್ತ ಸುನೀಲ್‌ ಕುಮಾರ್‌ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಅಲೋಕ್‌ಕುಮಾರ್‌, ಬೆಂಗಳೂರಿನಲ್ಲಿನ ಭೂ ಕಬಳಿಕೆ, ಅಪರಾಧ ಕೃತ್ಯಗಳನ್ನು ಎಸಗುವವರು, ಕಾನೂನು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಬಿಹಾರ ಮೂಲದ 1994ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಲೋಕ್‌ಕುಮಾರ್‌, ಈ ಹಿಂದೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ, ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಆಯುಕ್ತ, ಸಿಸಿಬಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ನಕ್ಸಲ್‌ ನಿಗ್ರಹದ (ಎಎನ್‌ಎಫ್) ಮುಖ್ಯಸ್ಥ ಹಾಗೂ ಭಾರೀ ಸದ್ದು ಮಾಡಿದ್ದ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ನಡೆಸಿದ ಹೆಗ್ಗಳಿಕೆಯನ್ನು ಅಲೋಕ್‌ಕುಮಾರ್‌ ಹೊಂದಿದ್ದಾರೆ.

ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ ರಾವ್‌, ಎಡಿಜಿಪಿಗಳಾದ ಪ್ರತಾಪ್‌ ರೆಡ್ಡಿ, ಸುನೀಲ್‌ ಅಗರ್‌ವಾಲ್‌, ಆರ್‌.ಪಿ ಶರ್ಮಾ ಸೇರಿದಂತೆ ಹಲವು ಮಂದಿ ಹಿರಿಯ ಐಪಿಎಸ್‌ ಅಧಿಕಾರಿಗಳ ಹೆಸರು ನಗರ ಪೊಲೀಸ್‌ ಆಯುಕ್ತರ ಹುದ್ದೆಯ ರೇಸ್‌ನಲ್ಲಿದ್ದರು.

Advertisement

ಆದರೆ, ಐಜಿಪಿಯಿಂದ ಎಡಿಜಿಪಿ ಹುದ್ದೆಗೆ ಮುಂಬಡ್ತಿ ಪಡೆದ ತಕ್ಷಣವೇ ರಾಜಧಾನಿಯ ಪೊಲೀಸ್‌ ಮುಖ್ಯಸ್ಥರಾಗಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಅಲೋಕ್‌ಕುಮಾರ್‌ ಯಶಸ್ವಿಯಾಗಿದ್ದಾರೆ.

ಎರಡು ವರ್ಷ ಸೇವೆ ಮಾಡಿದ್ದು ತೃಪ್ತಿ ಇದೆ. ಹೆಮ್ಮೆ ಇದೆ. ಅಪರಾಧ ಪ್ರಕರಣಗಳನ್ನು. ಈ ಕಾನೂನು ಸುವ್ಯವಸ್ಥೆ ಕಾಪಾಡಿದ್ದು ಹೆಮ್ಮೆ ಇದೆ. ಧನ್ಯವಾದ ಹೊಸ ವರ್ಷಾಚರಣೆ ಬೆಂಗಳೂರು ಕಾನೂನು ಸುವ್ಯವಸ್ಥೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next