Advertisement
ದೇಹ ತೂಕ ಇಳಕೆಅಲೋವೆರಾ ಜ್ಯೂಸ್ ದಿನದಲ್ಲಿ ಒಂದು ಬಾರಿ ಕುಡಿದರೆ ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ನಿಂದ ದೇಹದ ಅನಗತ್ಯ ಅಂಶಗಳನ್ನು ಶುದ್ಧಿಸಲು ಸಹಕಾರಿಯಾಗಿದೆ. ಇದರಲ್ಲಿರುವ ಪೌಷ್ಟಿಕಾಂಶಗಳು ದೇಹದ ಬೊಜ್ಜನ್ನು ಕಡಿಮೆ ಮಾಡಿ ದೇಹವನ್ನು ಸಮಸ್ಥಿತಿಯಲ್ಲಿರುವಂತೆ ಮಾಡುತ್ತದೆ. ಬೆಳಗ್ಗೆ ಜಾಗಿಂಗ್ ಅಥವಾ ಯಾವುದೇ ವಿಧವಾದ ದೇಹ ಕಸರತ್ತನ್ನು ಮಾಡುವವರ ದೇಹವನ್ನು ಫಿಟ್ ಆಗಿರುವಂತೆ ನೋಡಿಕೊಳ್ಳಲು ಕೆಲಸ ಮಾಡುತ್ತದೆ.
ಸಾಮಾನ್ಯವಾಗಿ ಯಾರೊಂದಿಗಾದರೂ ವ್ಯವಹರಿಸುವಾಗ ಬಾಯಿಯ ದುರ್ವಾಸನೆಯೂ ನಮ್ಮನ್ನು ಹಲವಾರು ಬಾರಿ ಮುಜುಗರಕ್ಕೆ ಹೀಡುಮಾಡಿರುವುದನ್ನು ನೀವು ಕಾಣಬಹುದು. ಇಂತಹ ಸಮಸ್ಯೆಗಳ ನಿವಾರಣೆಗೆ ಅಲೋವೆರಾ ಜ್ಯೂಸ್ ಅನ್ನು ಮೌತ್ ಪ್ರಶ್‌ನರ್ ನಂತೆಯೇ ಬಳಸಬಹುದಾಗಿದೆ. ಅಷ್ಟೇ ಅಲ್ಲದೇ ವಸುಡಿನ ರಕ್ತ ಸ್ರಾವ ಮತ್ತು ಬಯಿ ಹುಣ್ಣಿನ ಸಮಸ್ಯೆಗಳಿಗೆ ಇದರ ಸೇವನೆ ಉಪಯುಕ್ತವಾಗಿದೆ. ಸುಂದರ ಕೂದಲ ಆರೈಕೆ
ಕೂದಲು ಉದುರುವಿಕೆ, ತಲೆ ಹೊಟ್ಟು, ಸೀಳು ಕೂದಲು ಹೀಗೆ ಹಲವಾರು ಸಮಸ್ಯೆಗಳಿಗೆ ಪರಿಹಾರವೆಂಬಂತೆ ಬಹುತೇಕರು ಅಲೋವೆರಾ ಮೊರೆ ಹೋಗುತ್ತಾರೆ. ಇದನ್ನು ನುಣ್ಣಗೆ ಪೆಸ್ಟ್ ಮಾಡಿ ಕೂದಲಿಗೆ ಮಸಾಜ್ ಮಾಡಿ ಒಂದುಗಂಟೆ ಅನಂತರ ಸ್ನಾನ ಮಾಡಬೇಕು ಅಲೋವೆರಾದಲ್ಲಿರುವ ನೈಸರ್ಗಿಕ ಲೋಳೆ ಅಂಶವು ಕೂದಲನ್ನು ಹೆಚ್ಚು ಮೃದುವಾಗಿಸಿ ಹೊಟ್ಟಿನ ಸಮಸ್ಯೆಗಳನ್ನೂ ಸಹ ನಿವಾರಿಸುತ್ತದೆ.
Related Articles
ನೈಸರ್ಗಿಕ ಸೌಂದರ್ಯ ಪಡೆಯಲಿಚ್ಛಿಸುವ ಬಹುತೇಕರಿಗೆ ಅಲೋವೆರಾ ಸಹಾಯಕವಾಗಿದೆ. ಇದನ್ನು ಪೇಸ್ಟ್ ಮಾಡಿ ಚರ್ಮಕ್ಕೆ ಲೇಪಿಸಿ ಉಗುರು ಬೆಚ್ಚನೆ ನೀರಿನಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಪ್ರಕಾಶಿಸುತ್ತದೆ. ಇದರೊಂದಿಗೆ ವಯಸ್ಸಾದ ಮೇಲೆ ಕಂಡು ಬರುವ ಚರ್ಮದ ನೀರಿಗೆ ಬೀಳುವುದು, ಸುಕ್ಕು ಮುಂತಾದ ಸಮಸ್ಯೆಗಳ ನಿವಾರಣೆಗೆ ಇದರ ಜ್ಯೂಸ್ ಸೇವಿಸಬೇಕು.
Advertisement
-ರಾಧಿಕಾ ಕುಂದಾಪುರ