Advertisement
ಬೆಳ್ತಂಗಡಿ ತಾ|ನ ನಿಡಿಗಲ್, ಚಾರ್ಮಾಡಿ ಹಳ್ಳ, ಬಂಟ್ವಾಳ ತಾ|ನ ಮಣಿಹಳ್ಳ ಹೀಗೆ 3 ಕಡೆ ಹೊಸ ಸೇತುವೆ ಮಂಜೂರಾಗಿತ್ತು. ಈ ಹಿಂದೆ ಇಲ್ಲಿ ಸೇತುವೆಗಳಿದ್ದರೂ ಕಿರಿದಾದ ಸೇತುವೆಯಲ್ಲಿ ಏಕಕಾಲದಲ್ಲಿ ಎರಡು ಘನ ವಾಹನಗಳ ಸಂಚಾರ ಅಸಾಧ್ಯ ಹಾಗೂ ಸೇತುವೆಗಳು ಹಳೆಯದಾದ ಹಿನ್ನೆಲೆಯಲ್ಲಿ ಹೊಸ ಸೇತುವೆಗಳಿಗೆ ಅನುದಾನ ಮಂಜೂರಾಗಿತ್ತು.
Related Articles
Advertisement
ಈ ಭಾಗಗಳಲ್ಲಿ ಹೊಸ ಸೇತುವೆ ನಿರ್ಮಾಣವಾಗಿದ್ದರೂ ಹಳೆ ಸೇತುವೆಗಳೂ ಪ್ರಸ್ತುತ ಸಂಚಾರಕ್ಕೆ ಯೋಗ್ಯ ಸ್ಥಿತಿಯಲ್ಲಿರುವ ಕಾರಣ ಸೇತುವೆಯಲ್ಲಿ ಏಕಮುಖ ಸಂಚಾರ ನಡೆಯುವ ಸಾಧ್ಯತೆ ಇದೆ. ಈ ಮೂರು ಸೇತುವೆಗಳ ನಿರ್ಮಾಣದ ನಡುವೆಯೇ ಬಂಟ್ವಾಳ ಭಂಡಾರಿಬೆಟ್ಟು ಬಳಿ ಕಿರುಸೇತುವೆಯೊಂದು ನಿರ್ಮಾಣ ಗೊಂಡು ಸಂಚಾರಕ್ಕೆ ಮುಕ್ತಗೊಂಡಿದೆ.
ಸೇತುವೆಗಳ ಉದ್ದಗಲಮಂಜೂರಾಗಿರುವ ಮೂರು ಸೇತುವೆಗಳಲ್ಲಿ ನಿಡಿಗಲ್ ಸೇತುವೆಯು ಉದ್ದದ ಸೇತುವೆಯಾಗಿದ್ದು, ನೇತ್ರಾವತಿ ನದಿಗೆ ಸುಮಾರು 140 ಮೀ. ಉದ್ದಕ್ಕೆ ನಿರ್ಮಾಣ ಗೊಂಡಿದೆ. ಮಣಿಹಳ್ಳದಲ್ಲಿ ಬೃಹತ್ ತೋಡಿಗೆ 40 ಮೀ. ಉದ್ದದ ಸೇತುವೆ ನಿರ್ಮಾಣವಾಗಿದೆ. ಚಾರ್ಮಾಡಿ ಹಳ್ಳದಲ್ಲಿ ಸುಮಾರು 10 ಮೀ. ಉದ್ದದ ಕಿರುಸೇತುವೆ ನಿರ್ಮಾಣವಾಗಿದೆ. ಎಲ್ಲ್ಲ 3 ಸೇತುವೆಗಳೂ ಫುಟ್ಪಾತ್ ಸಹಿತ 16 ಮೀ. ಅಗಲವನ್ನು ಹೊಂದಿದೆ.
ನಿಡಿಗಲ್ ಸಂಪರ್ಕ ರಸ್ತೆ ಆಗಿದೆ
ಪ್ರಾರಂಭದಲ್ಲಿ ಮಂಜೂರಾದ 3 ಸೇತುವೆಗಳು ಬಹುತೇಕ ಪೂರ್ಣ ಗೊಂಡಿದ್ದು, ಚಾರ್ಮಾಡಿ ಹಳ್ಳ ಈಗಾಗಲೇ ಸಂಚಾರಕ್ಕೆ ಮುಕ್ತ ಗೊಂಡಿದೆ. ನಿಡಿಗಲ್ ಸೇತುವೆ ಸಂಪರ್ಕ ರಸ್ತೆಯೂ ಆಗಿದ್ದು, ಮಳೆ ಸ್ಥಿತಿ ನೋಡಿಕೊಂಡು ಸಂಚಾರಕ್ಕೆ ಮುಕ್ತಗೊಳ್ಳ ಲಿದೆ. ಮಣಿಹಳ್ಳ ದಲ್ಲಿ ಸಂಪರ್ಕ ರಸ್ತೆ ಹೆದ್ದಾರಿ ಕಾಮಗಾರಿ ಜತೆಗೆ ಆಗಲಿದೆ. ಬಿ.ಸಿ. ರೋಡ್-ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿಯೂ ಮಳೆಗಾಲ ಮುಗಿದ ತತ್‌ಕ್ಷಣ ವೇಗ ಪಡೆಯಲಿದೆ.
– ರಮೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾ.ಹೆ. ಇಲಾಖೆ, ಮಂಗಳೂರು
ಕಿರಣ್ ಸರಪಾಡಿ