Advertisement

ಬಿಜೆಪಿಯಲ್ಲಿ ಶೇ.90 ರಷ್ಟು ಮಂದಿ ಬೇರೆ ಪಕ್ಷಗಳಿಂದ ಬಂದವರೇ ಇರುವುದು: ಸಚಿವ ಬಿ.ಸಿ.ಪಾಟೀಲ್

02:11 PM Jun 08, 2021 | Team Udayavani |

ದಾವಣಗೆರೆ: ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರು ಎಂಬ ಯಾವುದೇ ಭಾವನೆಯೇ ಇಲ್ಲ. ಹಾಗೆ ನೋಡಿದರೆ ಬಿಜೆಪಿಯಲ್ಲಿ ಇರುವರಲ್ಲಿ ಶೇ. 90 ರಷ್ಟು ಹಿಂದೆ ಜನತಾದಳ ಹೀಗೆ ಬೇರೆ ಬೇರೆ ಪಕ್ಷದಲ್ಲಿ ಇದ್ದವರೇ. ಬಿಜೆಪಿಗೆ ಬಂದ ಮೇಲೆ ಎಲ್ಲರೂ ಬಿಜೆಪಿಯವರೇ. ನಾವೆಲ್ಲರೂ ಸೊಸೆಯಾಗಿ ಮನೆ ಬಾಗಿಲಿಗೆ ಬಂದು, ಮಗಳಾದವರು. ನಮ್ಮಲ್ಲಿ ಮೂಲ ಮತ್ತು ವಲಸಿಗರು ಎಂಬುದೇ ಇಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಕೇಳಿದರೆ ರಾಜೀನಾಮೆ ಕೊಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿಕೆ ನೀಡಿರುವುದಲ್ಲಿ ತಪ್ಪೇನು ಇಲ್ಲ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೇಳಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲವೇ ಇಲ್ಲ ಎಂದರು.

ಕಳೆದ ಮೂರು ತಿಂಗಳನಿಂದ ನಾಯಕತ್ವ ಬದಲಾವಣೆ ಕುರಿತಂತೆ ಕೇಳಿ ಬರುತ್ತಿದ್ದ ಮಾತುಗಳಿಂದ ತಲೆ ರೋಸಿ ಹೋಗಿ ಆ ರೀತಿ ಹೇಳಿಕೆ ನೀಡಿರಬಹುದು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಜಾರಕಿಹೊಳಿ ಕೇಸ್ ಗೆ ಹೊಸ ತಿರುವು: ಸರ್ಕಾರ, ಪೊಲೀಸ್ ಆಯುಕ್ತರಿಗೆ‌ ಹೈಕೋರ್ಟ್ ನೋಟಿಸ್

ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿರುವಂತಹ 17 ಶಾಸಕರಿಗೆ ಯಾವುದೇ ಅಭದ್ರತೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರ ನಾಯಕತ್ವ ನಂಬಿಕೊಂಡು ಬಂದಿದ್ದೇವೆ. ನಮ್ಮ ಎಲ್ಲರಿಗೂ ಒಳ್ಳೆಯ ಗೌರವ, ಸ್ಥಾನಮಾನ ನೀಡಲಾಗಿದೆ. ಹಾಗಾಗಿ ಯಾವುದೇ ಅಭದ್ರತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಯಾರ ಕೈಯಲ್ಲಿನ ಐದು ಬೆರಳುಗಳು ಒಂದೇ ಸಮವಾಗಿ ಇರುವುದಿಲ್ಲ. ಒಂದು ಮನೆ ಎಂದರೆ ಆಣ್ಣ-ತಮ್ಮಂದಿರ ನಡುವೆ ವ್ಯತ್ಯಾಸ ಇರುತ್ತದೆ. ಹಿರಿಯರು ಎಲ್ಲವನ್ನೂ ಬಗೆಹರಿಸುತ್ತಾರೆ. ಅದೇ ರೀತಿ ನಮ್ಮ ಪಕ್ಷದ ಹಿರಿಯರು ಸಹ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಪಕ್ಷ ಸುಸ್ಥಿತಿಯಲ್ಲಿದೆ. ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: ಕೆಲವು ಅಭಿಪ್ರಾಯಗಳು ಎಲ್ಲರ ಅಭಿಪ್ರಾಯವಲ್ಲ,ನಮಗೆ ಪ್ರತ್ಯೇಕ ವ್ಯವಸ್ಥೆ ಮಾಡಿ: ಸುನೀಲ್ ಕುಮಾರ್

ಬಿಜೆಪಿಯ ಆಂತರಿಕ ವಿಷಯದ ಬಗ್ಗೆ ಮಾತನಾಡಲಿಕ್ಕೆ ಡಿ.ಕೆ. ಶಿವಕುಮಾರ್ ಅವರೇನು ಬಿಜೆಪಿಯವರ ಎಂದು ಪ್ರಶ್ನಿಸಿದ ಅವರು ಡಿ.ಕೆ. ಶಿವಕುಮಾರ್ ಏನು ಹೇಳಿದ್ದಾರೋ ಗೊತ್ತಿಲ್ಲ. ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಕೆಲವರು ಟಿವಿಯಲ್ಲಿ, ಪೇಪರ್‌ನಲ್ಲಿ ಬರುವ ಆಸೆ, ಆಕಾಂಕ್ಷೆಯಿಂದ ಹೇಳಿಕೆ ನೀಡಿರಬಹುದು. ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಸುಳ್ಳು ವದಂತಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next