ಬಾದಾಮಿ ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರವಾಗಿದ್ದು, ಬಾದಾಮಿಯನ್ನು ಹಲವು ವಿಧಗಳಲ್ಲಿ ಬಳಕೆ ಮಾಡುತ್ತಾರೆ.
Advertisement
ಬಾದಾಮಿ ಸೇವನೆ ಹೇಗೆ?1 ಬಾದಾಮಿಯನ್ನು ಹಲವು ರೂಪಗಳಲ್ಲಿ ಸೇವಿಸಬಹುದು. ಬಾದಾಮಿ ತಿನ್ನುವಾಗ ಅದರ ಸಿಪ್ಪೆಯೊಡನೆ ತಿನ್ನುವುದು ಹೆಚ್ಚು ಸೂಕ್ತ. ಬಾದಾಮಿ ಸಿಪ್ಪೆಯಲ್ಲೂ ಹೆಚ್ಚು ಪೌಷ್ಟಿಕಾಂಶವಿದೆ.
2 ಹುರಿದು ಕೂಡ ಸೇವಿಸಬಹುದು. ಹೆಚ್ಚಿನವರಲ್ಲಿ ಬಾದಾಮಿ ಹುರಿದು ಸೇವಿಸಿದರೆ ಅದರ ಪೌಷ್ಟಿಕಾಂಶ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಹುರಿದರೆ ನೀರಿನಾಂಶ ಕಡಿಮೆಯಾಗುವುದರ ಜತೆಗೆ ಪ್ರೊಟೀನ್ ಹೆಚ್ಚಾಗುತ್ತದೆ.
3 ನೀರಿನಲ್ಲಿ ನೆನೆಸಿಟ್ಟು ಬಾದಾಮಿ ಸೇವನೆ ಮಾಡಬಹುದು. ಇದರಿಂದ ಪೌಷ್ಟಿಕಾಂಶ ಪ್ರಮಾಣ ಹೆಚ್ಚಾಗುತ್ತದೆ. ಇದು ಕೂದಲು ಮತ್ತು ಚರ್ಮದ ಸಮಸ್ಯೆಗೂ ಹೆಚ್ಚು ಉಪಯುಕ್ತಕಾರಿ. ದಿನನಿತ್ಯ ಬಾದಾಮಿ ಸೇವನೆ ಮಾಡುವುದರಿಂದ ಕೂದಲಿನ ಬೆಳವಣೆಗೆ ಮತ್ತು ಚರ್ಮದ ಕಾಂತಿ ಹೆಚ್ಚಾಗುತ್ತದೆ.
1 ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಬಾದಾಮಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣ ಸಾಧ್ಯ.
2 ಬಾದಾಮಿ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವ ಶಕ್ತಿ ಹೊಂದಿದೆ.
3 2015ರಲ್ಲಿ ಮಾಡಿದ ಗೈನೋಕಾಲಜಿಕ್ ಮತ್ತು ಒಬ್‌ಸ್ಟೇಟ್ರಿಕ್ ಎಂಬ ಅಧ್ಯಯನದ ಪ್ರಕಾರ ಬಾದಾಮಿ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.
4 ಹೃದಯ ಸಂಬಂಧಿ ಸಮಸ್ಯೆ ಕಡಿಮೆಯಾಗುತ್ತದೆ.
5 ಬಾದಾಮಿಯಲ್ಲಿ ಕಡಿಮೆ ಕಾಬೋìಹೈಡ್ರೆಟ್ಸ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರೊಟೀನ್ ಮತ್ತು ಫೈಬರ್ ಇರುವುದರಿಂದ ತೂಕ ಇಳಿಕೆಗೆ ಸಹಕಾರಿ. ಒಂದು ಕಪ್ ಬಾದಾಮಿಯಲ್ಲಿ
ಶಕ್ತಿ 6.31 ಗ್ರಾಂ
ಪ್ರೊಟೀನ್ 30.24 ಗ್ರಾಂ
ಕೊಬ್ಬು 71.40 ಗ್ರಾಂ
ಫೈಬರ್ 17.9 ಗ್ರಾಂ
ಕಬ್ಬಿಣಾಂಶ 5.31 ಮಿಲಿ ಗ್ರಾಂ
ಕ್ಯಾಲ್ಸಿಯಮ್ 385 ಮಿ.ಗ್ರಾಂ.
Related Articles
Advertisement