Advertisement

Almatti; ಗುತ್ತಿಗೆದಾರರಿಂದ 5 ಲಕ್ಷ ರೂ. ಲಂಚ ಪಡೆದ ಎಇಇ ಲೋಕಾಯುಕ್ತ ಬಲೆಗೆ

03:59 PM Nov 18, 2023 | Team Udayavani |

ಆಲಮಟ್ಟಿ : ಇಲ್ಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಕಚೇರಿಯಲ್ಲಿ ಪ್ರಭಾರಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಒಬ್ಬರು ಗುತ್ತಿಗೆದಾರರಿಂದ 5 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

Advertisement

ವಿಜಯಪುರ ಲೋಕಾಯುಕ್ತ ಎಸ್ಪಿ ಹಣಂಮತರಾಯ ಅವರ ಮಾರ್ಗದರ್ಶನಲ್ಲಿ ಬಾಗಲಕೋಟೆ ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿ ಎಂ.ಎಸ್. ಹಾಗೂ ಸಿಬಂದಿ, ಶುಕ್ರವಾರ ತಡರಾತ್ರಿ ದಾಳಿ ನಡೆಸಿ, ನಾರಾಯಣಪುರ ಯೋಜನೆಯ ಎಇಇ, ಯುಕೆಪಿ ಕಚೇರಿಯ ಪ್ರಭಾರಿ ಎಇಇ ಶಿವಪ್ಪ ಮಂಜ್ಯಾಳ ಹಾಗೂ ಅವರ ಕಾರು ಚಾಲಕ ಬಸನಗೌಡ ಗೌಡರ ಅವರನ್ನು ವಶಕ್ಕೆ ಪಡೆದು, 5 ಲಕ್ಷ ನಗದು ಹಾಗೂ ವಿವಿಧ ಕಡತ ವಶಕ್ಕೆ ಪಡೆದಿದ್ದಾರೆ.

ಎಇಇ ಶಿವಪ್ಪ ಗಂಜಾಳ, ಗುತ್ತಿಗೆದಾರರೊಬ್ಬರ 5 ಕೋಟಿ ಮೊತ್ತದ ಒಟ್ಟು ಬಿಲ್ ನಲ್ಲಿ ಮೊದಲ ಕಂತು 32 ಲಕ್ಷ ಬಿಲ್ ಪಾಸ್ ಮಾಡಬೇಕಿತ್ತು. ಈ ಬಿಲ್ ಕೊಡಲು ಮೊದಲಿಗೆ‌ 16 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಬಳಿಕ 6 ಲಕ್ಷಕ್ಕೆ ಮಾತುಕತೆ ಮಾಡಿಕೊಂಡಿದ್ದರು. ಶುಕ್ರವಾರ ಸಂಜೆ‌ ಲಂಚದ ಹಣ 5 ಲಕ್ಷ ನಗದು ಹಣವನ್ನು ಗುತ್ತಿಗೆದಾರರು ಕೊಡಲು ಬಂದಾಗ, ಆಲಮಟ್ಟಿಯ ಟೂರಿಸ್ಟ ಹೊಟೇಲ್ ಎದುರಿಗೆ‌ ಕಾರು ಚಾಲಕ ಬಸನಗೌಡ ಗೌಡರ ಬಳಿಗೆ ಕೊಡಲು ಹೇಳಿದ್ದರು. ಕಾರು ಚಾಲಕ ಲಂಚದ ಹಣದೊಂದಿಗೆ ಎಇಇ ತಂಗಿದ್ದ‌‌ ಚಿಮ್ಮಲಗಿ ಬ್ಲಾಕ್ ನ ವಿಶ್ರಾಂತಿ ಗೃಹಕ್ಕೆ ತೆರಳಿದ್ದ. ಈ ವೇಳೆ ಲೋಕಾಯುಕ್ತ ಡಿವೈಎಸ್ ಪಿ ಸುರೇಶ ರೆಡ್ಡಿ ಎಂ.ಎಸ್, ಸಿಪಿಐಗಳಾ ಆನಂದ ಡೋಣಿ, ಆನಂದ ತೆಕ್ಕೆನ್ನವರ ಹಾಗೂ ಸಿಬ್ಬಂದಿ ದಾಳಿ ಮಾಡಿ, ಹಣದ‌ ಸಮೇತ ವಶಕ್ಕೆ ಪಡೆದಿದ್ದಾರೆ.

ಅಲ್ಲದೇ ಎಇಇ ತಮ್ಮ ವಿಶ್ರಾಂತಿ ಕೊಠಡಿಯಲ್ಲಿ ಇಟ್ಟುಕೊಂಡಿದ್ದ ಗುತ್ತಿಗೆದಾರರ ಬಾಕಿ ಕಡತಗಳ ಫೈಲ್ ಕೂಡ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next