Advertisement

ಗಣ್ಯಾತಿಗಣ್ಯರ ಸಮ್ಮುಖದಲ್ಲೇ ಕತ್ರಿನಾಗೆ ಮುತ್ತಿಟ್ಟ ಸಲ್ಲು!

11:58 AM Jul 15, 2017 | Team Udayavani |

ಬ್ರೇಕಪ್ ಆಗಿದ್ದ ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಪ್ರೇಮ ಪ್ರಸಂಗಕ್ಕೆ ಮರುಜೀವ ಸಿಕ್ಕಿದೆ ಎಂಬ ಮಾತುಗಳು ಬೀಟೌನ್ ನಲ್ಲಿ  ಹರಿದಾಡುತ್ತಲಿವೆ. ಇದು ಕೇವಲ ಅಂತೆಕಂತೆಗಳ ಗಾಸಿಪ್ ಎಂದುಕೊಂಡವರೇ ಹೆಚ್ಚುಮಂದಿ. ಆದರೆ ಇದು ಸತ್ಯ ಎಂದವರು ಅನೇಕರು. ಈ ಲವ್ ಕಥೆಗೆ ಪುಷ್ಟಿ ನೀಡುವ ಪ್ರಸಂಗವೊಂದಕ್ಕೆ ಮುಂಬೈ ಸಾಕ್ಷಿಯಾಯಿತು. 

Advertisement

ಭಾನುವಾರ ಮುಂಬೈನಲ್ಲಿ ನಡೆದ ನಟಿ ಕತ್ರಿನಾ ಕೈಫ್ ಅವರ 34ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಬಾಲಿವುಡ್ ಗಣ್ಯರೇನೇಕರು ಪಾಲ್ಗೊಂಡು ಕೈಫ್ ಗೆ ವಿಶ್ ಮಾಡಿದರು. ನಟ ಸಲ್ಮಾನ್ ಖಾನ್ ಕೂಡಾ ತನ್ನ ಮಾಜಿ ಪ್ರೇಯಸಿಯ ಸಮಾರಂಭದಲ್ಲಿ ಪಾಲ್ಗೊಂಡು ಶುಭಹಾರೈಸಿದರು. ಅದೆಂಥಾ ವಿಶ್ ಅಂತೀರಾ? ಬಾಲಿವುಡ್ ಗಣ್ಯಾತಿಗಣ್ಯರ ಸಮ್ಮುಖದಲ್ಲೇ ಸಲ್ಮಾನ್ ಅವರು ಕತ್ರಿನಾರ ಎರಡೂ ಕೆನ್ನೆಗೆ ಮುತ್ತಿಟ್ಟರು.

ಸಲ್ಮಾನ್ ಅವರ ಈ ರೀತಿಯ ವಿಶ್ ಗೆ ಕತ್ರಿನಾ ಕೂಡಾ ನಯವಾಗಿಯೇ ಸ್ಪಂದಿಸಿ ಮುಗುಳುನಗೆ ಬೀರಿದರು. ಈ ತಾರಾ ಜೋಡಿ ನಡುವೆ ಮತ್ತೆ ಪ್ರೇಮಾಯಣ ಆರಂಭವಾಗಿದೆ ಎಂಬ ಸುದ್ದಿಗಳಿಗೆ ಈ ಪ್ರಸಂಗ ಸಾಕ್ಷಿಯಾಯಿತು. 

ಕೆಲ ದಿನಗಳ ಹಿಂದೆ ಐಫಾ 2017 ಪ್ರಶಸ್ತಿ ಕಾರ್ಯಕ್ರಮದಲ್ಲಿ ಕತ್ರಿನಾ ಹಾಗೂ ಸಲ್ಮಾನ್ ಖಾನ್  ಒಟ್ಟಾಗಿ ಕಾಣಿಸಿಕೊಂಡು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರು. ಆಗಲೇ ಇವರಿಬ್ಬರ ಪ್ರೇಮ ಪ್ರಸಂಗ ಬಗ್ಗೆ ಸುದ್ದಿಯಾಯಿತು. ಇದೀಗ ಸಲ್ಮಾನ್ ಅವರಿತ್ತ ಮುತ್ತು ಈ ಸುದ್ದಿಗೆ ಗುದ್ದು ಕೊಟ್ಟಂತಿದೆ. 

Advertisement

Udayavani is now on Telegram. Click here to join our channel and stay updated with the latest news.

Next