Advertisement

ಪಂಚ ತತ್ತ್ವ‌ ದರ್ಶನ ವೇದಂ

11:20 PM Jul 29, 2020 | Karthik A |

ಕ್ರಿಶ್‌ ಅವರ ನಿರ್ದೇಶನದ ಎರಡನೇ ಚಿತ್ರ ತೆಲುಗಿನ “ವೇದಂ’. ಅಲ್ಲು ಅರ್ಜುನ್‌, ಅನುಷ್ಕಾ ಶೆಟ್ಟಿ, ಮನೋಜ್‌ ಮಂಚು, ಮನೋಜ್‌ ವಾಜಪೇಯಿ, ಶರಣ್ಯಾ, ದೀಕ್ಷಾ ಸೇಥ್‌ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Advertisement

“ವೇದಂ’ ಹೈಪರ್‌ಲಿಂಕ್‌ ಸ್ಟೋರಿ ಟೆಲ್ಲಿಂಗ್‌ ಅಥವಾ ಅಂತೋಲಜಿ ಶೈಲಿಯ ಚಲನಚಿತ್ರ. ಐದು ಪ್ರಮುಖ ವ್ಯಕ್ತಿಗಳ ಬೇರೆ ಬೇರೆ ಕಥೆ ಕೊನೆಯಲ್ಲಿ ಬೆಸೆದುಕೊಳ್ಳುವುದು ಈ ಚಿತ್ರದ ವಿಶೇಷತೆ.

ವೇದಗಳಿರುವುದು ನಾಲ್ಕು. ಆದರೆ ಈ ಸಿನೆಮಾದಲ್ಲಿ ಐದನೇ ವೇದ ಯಾವುದೆಂದು ಹೇಳಿದ್ದಾರೆ ನಿರ್ದೇಶಕ. ಈ ಸಿನೆಮಾದಲ್ಲಿ ಚಿತ್ರಕಥೆ, ವಿಶಿಷ್ಟ ಪಾತ್ರಗಳು, ಭಾವನೆಗಳು, ತತ್ತÌಗಳು ನೋಡುಗರ ಮೇಲೆ ಪ್ರಭಾವ ಬೀರುತ್ತವೆ. ಈ ಸಿನೆಮಾದ ಪ್ರಮುಖ ಐದು ಪಾತ್ರಗಳನ್ನು ಪಂಚಭೂತಗಳ ಗುಣಗಳಿಗೆ ಹೋಲಿಕೆಯಾಗುವಂತೆ ಸೃಷ್ಟಿಸಲಾಗಿದೆ. ಸರೋಜಾ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಗಮನ ಸೆಳೆಯುತ್ತಾರೆ.

ಸರೋಜಾ ವೇಶ್ಯೆಯಾಗಿದ್ದು, ಈಕೆ ಒಂದು ಸ್ಥಳದಲ್ಲಿ ನಿಲ್ಲದೇ ನೀರಿನಂತೆ ಚಲನಶೀಲರಾಗಿರುತ್ತಾಳೆ. ಮನೋಜ್‌ ವಾಜಪೇಯಿ ನಿರ್ವಹಿಸಿರುವ ರಹೀಮುದ್ದೀನ್‌ ಪಾತ್ರ ಅಗ್ನಿಗೆ, ಮಂಚು ಮನೋಜ್‌ ನಿರ್ವಹಿಸಿರುವ ರಾಕ್‌ ಸ್ಟಾರ್‌ ವಿವೇಕ್‌ ಚಕ್ರವರ್ತಿ ಪಾತ್ರವನ್ನು ಗಾಳಿ, ರಾಮುಲು ಪಾತ್ರವನ್ನು ಭೂಮಿಗೆ ಹೋಲಿಸಿ ಪಾತ್ರಗಳನ್ನು ಸೃಷ್ಟಿಸಲಾಗಿದೆ.

ಅಲ್ಲು ಅರ್ಜುನ್‌ ಅವರದ್ದು ಈ ಚಿತ್ರದಲ್ಲಿ ವಿಶೇಷ ಪಾತ್ರ. ಕೇಬಲ್‌ ರಾಜು ಎಂಬ ಪಾತ್ರ ನಿರ್ವಹಿಸಿರುವ ಈತ ಶ್ರೀಮಂತ ಮನೆಯೊಂದರ ಹುಡುಗಿಯನ್ನು ಪ್ರೀತಿಸುತ್ತಾನೆ. ಇವನದು ಆಕಾಶಕ್ಕೆ ಏಣಿ ಹಾಕುವ ಕನಸು. ಈ ಪಾತ್ರ ಆಕಾಶವನ್ನು ಪ್ರತಿನಿಧಿಸುತ್ತದೆ. ಸರಿಯಾಗಿ ಸಾಯಬೇಕೆಂದರೂ ಹಣವಿರಬೇಕು ಎನ್ನುವ ಸಿದ್ಧಾಂತವನ್ನು ನಂಬುವ ಪಾತ್ರ ಇದಾಗಿದೆ. ಐದು ಪಾತ್ರಗಳು ಸಮಾನಾಂತರವಾಗಿ ಸಾಗುತ್ತವೆ. ಪ್ರತಿಯೊಂದು ಪಾತ್ರಕ್ಕೂ ಜೀವನ ಸಂಘರ್ಷವಿದೆ. ಹಣ, ಮಹತ್ವಕಾಂಕ್ಷೆಯ ಕನಸು ಕಾಣುವ ಪಾತ್ರಗಳು ಇವಾಗಿವೆ.

Advertisement

ಅಂತಿಮವಾಗಿ ಪಾತ್ರಗಳು ರೂಪಾಂತರಗೊಳ್ಳುತ್ತ ನೀತಿ ಬೋಧನೆ ಮಾಡುತ್ತವೆ. ಧರ್ಮ ಇರುವುದು ರಕ್ಷಣೆಗೆ ವಿನಃ ಸಾಯಿಸುವುದಕ್ಕಲ್ಲ ಎಂಬ ರಾಜನೀತಿಯನ್ನು “ವೇದಂ’ ಸಾರಿ ಹೇಳುತ್ತದೆ.

-ಆರ್‌.ಕೆ. ಪ್ರೀತೇಶ್‌ ಕುಮಾರ್‌, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next