Advertisement

ಅಫ್ಘಾನ್ ಮಹಿಳೆಯರಿಗೆ ಉದ್ಯೋಗ, ಶಿಕ್ಷಣ ನೀಡಲು ಯುರೋಪ್‌ ಪ್ರತಿನಿಧಿಯ ಒತ್ತಾಯ

04:36 PM Dec 11, 2021 | Team Udayavani |

ಕಾಬೂಲ್ (ಅಫ್ಘಾನಿಸ್ತಾನ): ಮಹಿಳೆಯರಿಗೆ ಉದ್ಯೋಗ ಮಾಡಲು ಮತ್ತು ಹುಡುಗಿಯರು ಶಾಲೆಗೆ ಹೋಗಲು ಅವಕಾಶ ನೀಡುವಂತೆ ಶುಕ್ರವಾರ ಯುರೋಪಿಯನ್ ಒಕ್ಕೂಟದ ವಿಶೇಷ ಪ್ರತಿನಿಧಿ ತೋಮಸ್ ನಿಕ್ಲಾಸ್ಸನ್ ಅಫ್ಘಾನಿಸ್ತಾನದ ತಾಲಿಬಾನ್‌ಗೆ ಒತ್ತಾಯಿಸಿದ್ದಾರೆ.

Advertisement

ನಿಕ್ಲಾಸನ್ ಅಫ್ಘಾನಿಸ್ತಾನದ ಉದ್ಯೋಗ ಮಾಡದ ಮತ್ತು ಶಿಕ್ಷಣ ಪಡೆಯದ ಅಫ್ಘಾನ್ ಹುಡುಗಿಯರು ಅನುಪಯುಕ್ತ ಆಸ್ತಿಯಂತೆ ಆಗುವರು  ಎಂದು‌ (Tomas Niklasson) ಥೋಮಸ್ ನಿಕ್ಲಾಸನ್ ಹೇಳಿರಿವುದಾಗಿ (Pajhwok Afghan News) ಪಾಜ್ವೋಕ್ ಆಫ್ಘನ್ ನ್ಯೂಸ್ ವರದಿ ಮಾಡಿದೆ.

ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, “ಅಫ್ಘಾನಿಸ್ತಾನದ ಹೆಪ್ಪುಗಟ್ಟಿದ ಆರ್ಥಿಕ ಆಸ್ತಿಗಳ ಬಗ್ಗೆ ನಾನು ತೀವ್ರ ಕಳವಳವನ್ನು ಹೊಂದಿದ್ದೇನೆ. ಆದರೆ ಹುಡುಗಿಯರು ಶಾಲೆಗೆ ಹೋಗದಿರುವುದು, ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡದಿರುವುದು, ಎನ್‌ಜಿಒಗಳ ಮೂಲಕ ಸೇವೆಗಳನ್ನು ಒದಗಿಸಲು ಅಥವಾ ಉದ್ಯೋಗಗಳನ್ನು ಒದಗಿಸುವ ವ್ಯವಹಾರಗಳನ್ನು ಪ್ರಾರಂಭಿಸಲು ಅವಕಾಶ ನೀಡದಿರುವುದರಿಂದ ಅಫ್ಘಾನ್‌ನ ಆಸ್ತಿಗಳು ಘನೀಕರಿಸಲ್ಪಟ್ಟಂತೆ ಆಗಿದೆ ಎಂದಿದ್ದಾರೆ.

 

Advertisement

ಇನ್ನು ಮುಂದುವರಿದು ಹೇಳಿರುವ ಯುರೋಪಿಯನ್‌ ಒಕ್ಕೂಟದ ವಿಶೇಷ ಪ್ರತಿನಿಧಿ, ಯುರೋಪಿಯನ್‌ ಒಕ್ಕೂಟವು  ಮಾನವ ಹಕ್ಕುಗಳ ಸಾರ್ವತ್ರಿಕತೆಯನ್ನು ಎತ್ತಿಹಿಡಿಯುತ್ತದೆ ಮತ್ತು ಅಂತರಾಷ್ಟ್ರೀಯ ಬದ್ಧತೆಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನದ ವಿರುದ್ಧ ಜಾಗೃತಿ ಮೂಡಿಸುತ್ತದೆ” ಎಂದು ನಿಕ್ಲಾಸನ್ ಬರೆದುಕೊಂಡಿದ್ದಾರೆ.

ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಅಫ್ಘಾನ್ ದೇಶದ ಮೇಲೆ ಹಿಡಿತ ಸಾಧಿಸಿದ ನಂತರ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ತಮ್ಮ ಮನೆಗಳಿಗೆ ಮಾತ್ರ ಸೀಮಿತವಾಯಿತು. ಶಾಲೆಗಳನ್ನು ಮುಚ್ಚಲಾಯಿತು, ಇದು ಅಂತರರಾಷ್ಟ್ರೀಯ ಸಮುದಾಯದಿಂದ ಟೀಕೆಗೂ ಗುರಿಯಾಯಿತು.

ಈ ತಾಲಿಬಾನ್ ಸ್ವಾಧೀನವು ಅಫ್ಘಾನಿಸ್ತಾನದ ಉದ್ಯಮಿಗಳಿಗೆ ಉದ್ಯೋಗ ನಷ್ಟವನ್ನು ಉಂಟುಮಾಡಿದೆ. ಅವರ ಷರಿಯಾ ಕಾನೂನಿನ ಕಠಿಣ ಜಾರಿಯಿಂದಾಗಿ ಅವರು ತಮ್ಮ ಮನೆಗಳಿಗೆ ಸೀಮಿತರಾಗಿದ್ದಾರೆ. ಒಟ್ಟಾರೆಯಾಗಿ ಅಫ್ಘಾನ್‌ ತನ್ನ ದೇಶದ ಸ್ತ್ರೀಯರಿಗೆ ಔದ್ಯೋಗಿಕ ಮತ್ತು ಶೈಕ್ಷಣಿಕ ಸ್ವಾತಂತ್ರ್ಯ ನೀಡದ ಹೊರತು ದೇಶ ಮತ್ತೆ ಉದಯಿಸಲು ಸಾಧ್ಯವಿಲ್ಲ ಎಂದು ತೋಮಸ್ ನಿಕ್ಲಾಸ್ಸನ್ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next