Advertisement

ಖಾಸಗಿಯವರಿಗೂ ಡ್ರೋನ್‌ ಹಾರಾಟಕ್ಕೆ ಅವಕಾಶ

06:35 AM Nov 02, 2017 | Team Udayavani |

ನವದೆಹಲಿ: ಖಾಸಗಿ ಕಂಪನಿಗಳು, ಇತರರಿಗೆ ಡ್ರೋನ್‌ಗಳ ಹಾರಾಟಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಕರಡು ನೀತಿ ರೂಪಿಸಿದೆ. ಇದು ಅಂತಿಮಗೊಂಡಲ್ಲಿ ಶೀಘ್ರದಲ್ಲೇ ಇಕಾಮರ್ಸ್‌ ತಾಣಗಳು ಸಾಮಗ್ರಿಗಳನ್ನು ಡ್ರೋನ್‌ಗಳ ಮೂಲಕ ವಿತರಣೆ ಮಾಡಬಹುದಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಆರ್‌.ಎನ್‌.ಚೌಬೆ ಹೇಳಿದ್ದಾರೆ. 250 ಗ್ರಾಮ್‌ಗಳಿಗಿಂತ ಕಡಿಮೆ ತೂಕದ ಡ್ರೋನ್‌ಗಳನ್ನು ನೋಂದಣಿ ಮಾಡಬೇಕಿಲ್ಲ ಅಥವಾ ಲೈಸೆನ್ಸ್‌ ಪಡೆಯಬೇಕಿಲ್ಲ. ಏರ್‌ ರಿಕ್ಷಾಕ್ಕೂ  ಅನುಮೋದನೆ ನೀಡಲಾಗಿದೆ. ವಿಮಾನ ನಿಲ್ದಾಣದಿಂದ 5 ಕಿ.ಮೀ ಸುತ್ತ, ಅಂ.ರಾ.ಗಡಿಯಿಂದ 50 ಕಿ.ಮೀ ವ್ಯಾಪ್ತಿ, ಕರಾವಳಿಯಲ್ಲಿ 500 ಮೀ. ವ್ಯಾಪ್ತಿಯಲ್ಲಿ  ಹಾರಾಟ ಮಾಡುವಂತಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next