Advertisement

ಕುಡಿಯಲು ಖಾಸಗಿ ಬೋರ್‌ವೆಲ್‌ ಬಳಕೆಗೆ ಅವಕಾಶ

06:00 AM Dec 20, 2018 | |

ವಿಧಾನಸಭೆ: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಖಾಸಗಿ ಬೋರ್‌ವೆಲ್‌ಗ‌ಳಿಂದ ನೀರು ಖರೀದಿಗೆ ಅವಕಾಶವಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಶಾಸಕರ ನೇತೃತ್ವದ ಟಾಸ್ಕ್ಫೋರ್ಸ್‌ ರಚಿಸಲಾಗಿದೆ. ಈ ಬಗೆಗಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಸಿದಟಛಿವಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

ಬರದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಟ್ಯಾಂಕರ್‌ ಮೂಲಕ ನೀರು ಸಾಗಿಸುವುದು ಅಥವಾ ಬೋರ್‌ವೆಲ್‌ ಕೊರೆಸುವುದು ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ಖಾಸಗಿ ಬೋರ್‌ಬೇಲ್‌ ಮೂಲಕ ನೀರು ಖರೀದಿಗೆ ಬೇಕಾದ ಕ್ರಮ ತೆಗೆದುಕೊಳ್ಳಬಹುದು. ಇದರಿಂದ ಎದುರಾಗಬಹುದಾದ ಇಂಧನ ಇಲಾಖೆಯ ಸಮಸ್ಯೆಯನ್ನು ಸರಿಪಡಿಸುತ್ತೇವೆ. ಈಗಾಗಲೇ ತಾಲೂಕಿಗೆ 1 ಕೋಟಿ ರೂ. ಮಂಜೂರು ಮಾಡಿದ್ದೇವೆ. ಅಗತ್ಯಬಿದ್ದರೆ ಮಾರ್ಚ್‌ 31ರ ನಂತರ ಮತ್ತೆ ಅನುದಾನ ಬಿಡುಗಡೆ ಮಾಡಲಿದ್ದೇವೆ. ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಿರುವ ಹಣವನ್ನು ಪೈಪ್‌ಲೈನ್‌ಗೆ ಬಳಸುವುದು ಸರಿಯಲ್ಲ ಎಂದು ಹೇಳಿದರು.

ಬರ ಘೋಷಣೆಯಾಗದ ತಾಲೂಕುಗಳಿಗೂ ಕುಡಿಯುವ ನೀರು ಪೂರೈಕೆಗೆ 25 ಲಕ್ಷ ರೂ.ಬಿಡುಗಡೆ ಮಾಡಿದ್ದೇವೆ. ನೀರಿನ ಟ್ಯಾಂಕ್‌
ಅಥವಾ ಕೊಳವೆ ಬಾವಿ ಕೊರೆಸಿರುವುದು ಸೇರಿದಂತೆ ಕುಡಿಯುವ ನೀರಿನ ಪೂರೈಕೆಗೆ ತೆಗೆದುಕೊಂಡ ಕಾಮಗಾರಿಯ ಬಿಲ್‌ನ್ನು 15 ದಿನದೊಳಗೆ ನೀಡಿದರೆ ಮುಂದಿನ 15 ದಿನದಲ್ಲಿ ಹಣ ಪಾವತಿಗೆ ಕ್ರಮ ತೆಗೆದುಕೊಳ್ಳಲಿದ್ದೇವೆ. ಜಿಲ್ಲಾ ಕಚೇರಿಗಳಲ್ಲಿ 1700 ಕೋಟಿ ರೂ.ಕುಡಿಯುವ ನೀರಿಗಾಗಿ ಲಭ್ಯವಿದೆ. ಅದನ್ನು ಕೂಡ ಸದುಪಯೋಗ ಮಾಡಿಕೊಳ್ಳಬಹುದು ಎಂದರು.

ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಖಾಸಗಿ ಬೋರ್‌ವೆಲ್‌ಗ‌ಳಿಂದ ನೀರು ಖರೀದಿಸಿದರೆ ಅವರಿಗೆ ವಿದ್ಯುತ್‌ ಬಿಲ್‌ನ ಸಮಸ್ಯೆ ಎದುರಾಗಲಿದೆ. ಇದಕ್ಕೊಂದು ಮುಕ್ತಿ ನೀಡಬೇಕು ಎಂದು ಕೋರಿಕೊಂಡರು. ಬಿಜೆಪಿಯ ಬಸವರಾಜ ಬೊಮ್ಮಾಯಿ, ಬೋರ್‌ವೆಲ್‌ನಿಂದ ನೀರು ಪೂರೈಸಲು ಪೈಪ್‌ಲೈನ್‌ ಬೇಕಾಗುತ್ತದೆ. ಪೈಪ್‌ಲೈನ್‌ ಗಾಗಿ ಯಾವ ಹಣ ಬಳಕೆ ಮಾಡಬೇಕು ಎಂಬ ಬಗ್ಗೆ
ಸ್ಪಷ್ಟ ಸುತ್ತೋಲೆ ಹೊರಡಿಸಬೇಕು ಎಂದು ಮನವಿ ಮಾಡಿದರು.

ನಂತರ, ಮಾತು ಮುಂದುವರಿಸಿದ ಸಚಿವರು, ತಾಲೂಕು ಮಟ್ಟದ ಟಾಸ್ಕ್ಫೋರ್ಸ್‌ಗೆ ಎಲ್ಲ ರೀತಿಯ ಅಧಿಕಾರ ಇದೆ. ಇದಕ್ಕಾಗಿ 1700 ಕೋಟಿ ರೂ.ಮೀಸಲಿದ್ದು, ಅದನ್ನು ಬಳಸಿಕೊಳ್ಳಬಹುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಲಧಾರೆ ಯೋಜನೆಯೊಳಗೆ ವಿಲೀನಗೊಳಿಸಲು
ಚಿಂತನೆ ನಡೆಸುತ್ತಿದ್ದೇವೆ ಎಂದರು. ಈ ವೇಳೆ, ಅರವಿಂದ ಲಿಂಬಾವಳಿ ಮಾತನಾಡಿ, ಎಷ್ಟು ಹಣ ಮಂಜೂರು ಮಾಡಲಾಗಿದೆ
ಮತ್ತು ಜಿಲ್ಲಾವಾರು ಖರ್ಚಾಗಿರುವ ಹಣದ ಬಗ್ಗೆ ಪರಿಶೀಲನಾ ಸಭೆ ನಡೆಸಿ ಎಂದು ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next