Advertisement

ಅಭಿವೃದ್ಧಿಗಾಗಿ ಜನರಿಂದ ಮತ್ತೂಮ್ಮೆ ಅವಕಾಶ: ಪ್ರಮೋದ್‌

06:50 AM May 05, 2018 | Team Udayavani |

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿ ಸಚಿವನಾಗಿ 2026 ಕೋ.ರೂ.ಗೂ ಮಿಕ್ಕಿ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದೇನೆ. 

Advertisement

ಕಳೆದೈದು ವರ್ಷ ಅವಧಿಯಲ್ಲಿ 21,000 ಕುಟುಂಬಗಳಿಗೆ ಬಿಪಿಎಲ್‌ ಪಡಿತರ ಚೀಟಿ ವಿತರಣೆ, ತಾಂತ್ರಿಕ ಅಡಚಣೆ ಹೊರತುಪಡಿಸಿ 24 ಗಂಟೆಗಳ ನಿರಂತರ ವಿದ್ಯುತ್‌ ಒದಗಿಸಿದ್ದೇನೆ. ಈ ನೆಲೆಯಲ್ಲಿ ಮತ್ತೂಮ್ಮೆ ನನಗೆ ಮತದಾನ ಮಾಡುವುದರೊಂದಿಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಮತದಾರರಲ್ಲಿ ವಿನಂತಿಸಿದರು.

ಮೂಡುಬೆಟ್ಟು, ನಿಟ್ಟೂರು, ಪೆರಂಪಳ್ಳಿ ಹಾಗೂ ಇಂದಿರಾನಗರದ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರಗಳ ವಿತರಣೆ, ಹಳ್ಳಿಯ ಮೂಲೆ ಮೂಲೆಗಳಿಗೂ ಜೆ-ನರ್ಮ್ ಸರಕಾರಿ ಬಸ್‌ ಸೌಕರ್ಯ, ಸಂಪರ್ಕ ಸೇತುವೆಗಳ ನಿರ್ಮಾಣ, ಪ್ರವಾಸ ತಾಣ, ಬಂದರು ಅಭಿವೃದ್ಧಿ, ಸಮುದ್ರ ತೀರದಲ್ಲಿ ತಡೆಗೋಡೆ ನಿರ್ಮಾಣ, ಕ್ರೀಡಾಂಗಣ, ಬಡ ಕುಟುಂಬಗಳಿಗೆ ದಾನಿಗಳ ನೆರವಿನೊಂದಿಗೆ ಮನೆಗಳ ನಿರ್ಮಾಣ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಿ ಉಡುಪಿ ಕ್ಷೇತ್ರವನ್ನು ನಂ. 1 ಕ್ಷೇತ್ರವನ್ನಾಗಿಸಿದ ಸಂತೃಪ್ತಿ ನನಗಿದೆ ಎಂದರು. 

ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎ. ಗಪೂರ್‌, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮುನಿಯಾಲು, ಎಐಸಿಸಿ ಸದಸ್ಯ ಅಮೃತ್‌ ಶೆಣೈ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ, ನಗರಸಭೆ ಅಧ್ಯಕ್ಷೆ ಮೀನಾಕ್ಷೀ ಮಾಧವ ಬನ್ನಂಜೆ, ಪಕ್ಷದ ಮುಖಂಡರಾದ ದಿವಾಕರ ಕುಂದರ್‌, ಭಾಸ್ಕರ ರಾವ್‌ ಕಿದಿಯೂರು, ಕೀರ್ತಿ ಶೆಟ್ಟಿ, ಜನಾರ್ದನ ಭಂಡಾರ್ಕಾರ್‌, ಹಾರ್ಮಿಸ್‌ ನೊರೋನ್ಹಾ, ಯುವರಾಜ್‌, ಸಂಧ್ಯಾ ತಿಲಕ್‌ರಾಜ್‌, ಪ್ರಶಾಂತ್‌ ಭಟ್‌, ಚಂದ್ರಿಕಾ ಶೆಟ್ಟಿ, ಜ್ಯೋತಿ ಹೆಬ್ಟಾರ್‌, ಪೃಥ್ವಿರಾಜ್‌ ಶೆಟ್ಟಿ, ಯತೀಶ್‌ ಕರ್ಕೇರ, ಹಸನ್‌, ಸುಜಯ ಪೂಜಾರಿ, ಗಣೇಶ್‌ ನೇರ್ಗಿ, ಗಣಪತಿ ಶೆಟ್ಟಿಗಾರ್‌, ಸಂಜೀವ ಜತ್ತನ್ನ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next