Advertisement

ಹಿಂದೂಯೇತರರಿಗೂ ಅವಕಾಶ

06:55 AM Oct 26, 2017 | Team Udayavani |

ತಿರುವನಂತಪುರ: ಕೇರಳದ ದೇಗುಲಗಳಲ್ಲಿ ಬ್ರಾಹ್ಮಣೇತರರನ್ನು ಅರ್ಚರನ್ನಾಗಿ ನೇಮಿಸುವ ಕ್ರಮ ಜಾರಿಯಾಗಿರುವಂತೆಯೇ ಗುರುವಾಯೂರಿನ ಕೃಷ್ಣ ದೇಗುಲಕ್ಕೆ ಹಿಂದೂಯೇತರರಿಗೆ ಪ್ರವೇಶ ನೀಡುವ ಬಗ್ಗೆ ಚಿಂತನೆ ನಡೆದಿದೆ. ಹಿಂದೂ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಆಚರಿಸುವ ಈ ದೇಗುಲದಲ್ಲಿ ಇದುವರೆಗೆ ಹಿಂದೂ ಧರ್ಮದವರನ್ನು ಹೊರತಾಗಿ ಇತರ ರಿಗೆ ಪ್ರವೇಶಾವಕಾಶವಿಲ್ಲ. ಈ ಬಗ್ಗೆ ದೇಗುಲದ ಪ್ರಧಾನ ಅರ್ಚಕರೇ ಹೇಳಿಕೆ ನೀಡಿದ್ದಾರೆ. ಹಿಂದೂಯೇತರರಿಗೆ ಪ್ರವೇಶ ನೀಡುವ ಬಗ್ಗೆ ಕೇರಳ ಸರಕಾರ‌ವೇ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕ ಕೆ.ಜೆ.ಯೇಸುದಾಸ್‌ಗೆ ಇದುವರೆಗೆ ಗುರುವಾಯೂರಿಗೆ ಪ್ರವೇಶಾವಕಾಶ ಸಿಕ್ಕಿಯೇ ಇಲ್ಲ. ಇನ್ನೊಂದೆಡೆ ಬ್ರಾಹ್ಮಣೇತರರನ್ನು ಅರ್ಚಕರನ್ನಾಗಿ ದೇಗುಲಗಳಿಗೆ ನೇಮಿಸಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಹಿಂದೂ ಸಂಘಟನೆ ಹಿಂದೂ ಐಕ್ಯ ವೇದಿ ಬೆಂಬಲ ನೀಡಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next