Advertisement
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ರಾಜ್ಯದ ನಗರ ಪ್ರದೇಶ ವ್ಯಾಪ್ತಿಯಲ್ಲಿನ ಭೂ ಪರಿವರ್ತನೆ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನಿಯಮದಲ್ಲಿ ಸರಳ ಮತ್ತು ಪಾರದರ್ಶಕತೆ ತರಲಾಗಿದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ ತಮ್ಮ ಜಮೀನನ್ನು ಪರಿವರ್ತನೆ ಮಾಡಿಸಿಕೊಳ್ಳಲು ಆನ್‌ಲೈನ್ ಮೂಲಕ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ 10 ದಿನಗಳಲ್ಲಿ ವಿಲೇವಾರಿಯಾಗಲಿದೆ ಎಂದು ಹೇಳಿದರು.
Related Articles
Advertisement
ಪರಿವರ್ತನೆಗೆ ಒಳಪಡುವ ಜಮೀನು ಸ್ಥಳಿಯ ಯೋಜನಾ ಪ್ರದೇಶದ ಒಳಗಿದ್ದು, ಭೂ ಪರಿವರ್ತನೆ ಉದ್ದೇಶವು 1961ರ ಕರ್ನಾಟಕ ಪಟ್ಟಣ ಮತ್ತು ಗ್ರಮಾಂತರ ಯೋಜನಾ ಅಧಿನಿಯಮದಡಿ ಸರ್ಕಾರ ಪ್ರಕಟಿಸಿರುವ ಮಾಸ್ಟರ್ ಪ್ಲಾನ್‌ಗೆ ಅನುಗುವಾಗಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಶೀಲಿಸಲಾಗುವುದು. ಪ್ರಸ್ತಾಪಿತ ಭೂ ಪರಿವರ್ತನೆ ಉದ್ದೇಶವು ಮೇಲ್ಕಂಡ ಅಧಿಕನಿಯಮದ ಉಪಬಂಧದಡಿ ಪ್ರಕಟಪಡಿಸಿದ ಮಾಸ್ಟರ್ ಪ್ಲ್ರಾನ್‌ನಲ್ಲಿ ನಿರ್ದಿಷ್ಟ ಉದ್ದೇಶಕ್ಕೆ ಅನುಗುನವಾಗಿಯೂ ಇರಬೇಕಾಗುತ್ತದೆ ಎಂದು ಹೇಳಿದರು.
ಈ ಮುಂಚೆ ಭೂ ಪರಿವರ್ತನೆಗಾಗಿ ಅರ್ಜಿದಾರರು 10-15 ನಮೂನೆಯ ಅರ್ಜಿಗಳನ್ನು ಸಲ್ಲಿಸಬೇಕಿತ್ತು, ಇದೀಗ ಸಂಬಂಧಪಟ್ಟ ಜಮೀನಿನ ಸರ್ವೆ ನಂಬರ್ ಹಾಗೂ ಅಗತ್ಯ ವಿವರಗಳನ್ನು ಒಳಗೊಂಡ ಪ್ರಮಾಣಪತ್ರದ ಮನವಿ ಸಲ್ಲಿಸಿದರೆ ಸಾಕು ಎಂದರು.
ಗಡುವು ವಿಸ್ತರಣೆಬಗರ್ಹುಕುಂನಡಿ ಕಂದಾಯ ಭೂಮಿ ಸಾಗುವಳಿ ಮಾಡುತ್ತಿರುವ ಹಿಡುವಳಿದಾರರು ಹಕ್ಕುಪತ್ರ ಪಡೆದುಕೊಳ್ಳಲು ಸರ್ಕಾರ ಮತ್ತೂಮ್ಮೆ ಅವಕಾಶ ಕಲ್ಪಿಸಲು ತೀರ್ಮಾನಿಸಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು. ಈ ಹಿಂದೆ ಜನವರಿ 1, 2014ರ ವರೆಗೆ ಇದ್ದ ಗಡುವು ಇದೀಗ 16, ಮಾರ್ಚ್ 2019 ರವರೆಗೂ ವಿಸ್ತರಿಸಲಾಗಿದೆ. ನಮೂನೆ 57 ಸಲ್ಲಿಸಿ ಎರಡು ಹೆಕ್ಟೇರ್‌ವರೆಗೆ ಸಕ್ರಮ ಮಾಡಿಸಿಕೊಳ್ಳಬಹುದು ಎಂದರು.