Advertisement

winter Assembly session ಬರಪರಿಸ್ಥಿತಿ ನಿಲುವಳಿ ಸೂಚನೆಗೆ ಅವಕಾಶ ನೀಡಿ: ಆರ್‌. ಅಶೋಕ್‌

12:01 AM Dec 05, 2023 | Team Udayavani |

ಬೆಳಗಾವಿ: ಬರ ಪರಿಸ್ಥಿತಿ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವಂತೆ ಮಧ್ಯಾಹ್ನದ ಭೋಜನ ವಿರಾಮದ ಬಳಿಕ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದರು.

Advertisement

ಪ್ರಶ್ನೋತ್ತರ ಕಲಾಪದ ಬಳಿಕ ಅವಕಾಶ ನೀಡುವುದಾಗಿ ಸ್ಪೀಕರ್‌ ಹೇಳಿದರು. ಆದರೆ ಪ್ರಾಸ್ತಾವಿಕವಾಗಿ ವಿಷಯ ಮಂಡನೆ ಮಾಡಲು ಅವಕಾಶ ನೀಡಿ, ಅದು ನಿಲುವಳಿ ಸೂಚನೆ ಮಂಡನೆಗೆ ಅರ್ಹತೆಯುಳ್ಳ ವಿಷಯ ಹೌದೇ? ಅಲ್ಲವೇ ಎಂಬುದನ್ನು ಸದನಕ್ಕೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಅಶೋಕ್‌ ಆಗ್ರಹಿಸಿದರು. ಇದಕ್ಕೆ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಧ್ವನಿಗೂಡಿಸಿದರು.

ಮಧ್ಯಪ್ರವೇಶಿಸಿದ ಸಚಿವ ಕೃಷ್ಣ ಬೈರೇಗೌಡ, ಪ್ರಶ್ನೋತ್ತರ ಹಾಗೂ ಶೂನ್ಯವೇಳೆಯ ಬಳಿಕವೇ ನಿಲುವಳಿ ಸೂಚನೆ ಕೈಗೆತ್ತಿಕೊಳ್ಳಬೇಕೆಂಬ ನಿಯಮವಿದೆ ಎನ್ನುತ್ತಿದ್ದಂತೆ, ಹಿಂದೆಲ್ಲ ನೀವು ವಿಪಕ್ಷದಲ್ಲಿದ್ದಾಗ ಪ್ರಸ್ತಾವಿ ಸಿಲ್ಲವೇ? ಅದಕ್ಕೆ ಅಂದಿನ ಸ್ಪೀಕರ್‌ ಅನುಮತಿ ನೀಡಿರಲಿಲ್ಲವೇ’ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು.

ಹಿಂದಿನ ಸ್ಪೀಕರ್‌ ನಮಗೆ ಯಾವ ಅವಕಾಶವನ್ನೂ ನೀಡಿರಲಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರೂ ಉತ್ತರಿಸಿದರು. ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ಪ್ರಶ್ನೋತ್ತರದ ಬಳಿಕ ಅವಕಾಶ ನೀಡಿ ಎಂದುಬಿಟ್ಟರು. ಅಷ್ಟರಲ್ಲಿ ಸ್ಪೀಕರ್‌ ಕೂಡ ನಿಲುವಳಿ ಸೂಚನೆಯನ್ನು ನಿಯಮ 69 ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next