Advertisement
ಸರ್ವೇ ನಂ: 191, 191/ಅ ಮತ್ತು 192 ರಲ್ಲಿ ಒಟ್ಟು 12 ಎಕರೆ ಜಮೀನಿನಲ್ಲಿ ಲಭ್ಯವಿರುವ ಕರ್ನಾಟಕ ನೀರಾವರಿ ನಿಗಮದ ಅಧೀನದಲ್ಲಿರುವ 3 ಎಕರೆ ಜಮೀನನ್ನು ಬಾದಾಮಿ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಕ್ಕಾಗಿ ಉಚಿತವಾಗಿ ಕಂದಾಯ ಇಲಾಖೆಗೆ ಹಸ್ತಾಂತರಿಸಿ ಸರ್ಕಾರದ ಅನುಮೋದನೆ ನೀಡಿದೆ. ಇದರಿಂದ ಬಾದಾಮಿ ಜನತೆಗೆ ಮಿನಿ ವಿಧಾನಸೌಧ ದೂರವಾಗುತ್ತಿದೆ ಎಂಬ ಸಮಸ್ಯೆ ಬಗೆಹರಿದಂತಾಗಿದೆ. ಹಾಲಿ ಯರಗೊಪ್ಪ ಕ್ರಾಸ್‌ನಲ್ಲಿರುವ ಮಿನಿವಿಧಾನಸೌಧಕ್ಕೆ ಸರ್ಕಾರಿ ಪದವಿ ಕಾಲೇಜು ಸ್ಥಳಾಂತರಮಾಡಲಾಗುತ್ತಿದೆ. ಇದರಿಂದ ಎರಡೂ ಸಮಸ್ಯೆಗಳು ಬಗೆಹರಿದಂತಾಗುತ್ತದೆ.
Advertisement
ಮಿನಿ ವಿಧಾನಸೌಧ ನಿರ್ಮಾಣಕ್ಕೆ ಜಾಗ ಮಂಜೂರು
12:22 PM Feb 03, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.