Advertisement

ಪ್ರತಿ ವಾರ್ಡ್‌ಗೆ ಸಮನಾಗಿ ಅನುದಾನ ಹಂಚಿ

09:57 AM Jun 20, 2019 | Team Udayavani |

ಮಹಾಲಿಂಗಪುರ: ಎಸ್‌ಎಫ್‌ಸಿ, 14ನೇ ಹಣಕಾಸು ಸೇರಿದಂತೆ ಸರಕಾರದಿಂದ ಪುರಸಭೆಗೆ ಬರುವ ಅನುದಾನದಲ್ಲಿ ಪಟ್ಟಣದ 23 ವಾಡ್‌‌ರ್ಗಳಿಗೆ ಸಮಾನವಾಗಿ ಹಂಚಿ, ಪುರಸಭೆ ಸದಸ್ಯರಿಂದ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಪಡೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಪುರಸಭೆ ಸಭಾಭವನದಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಬರಗಾಲದ ಹಿನ್ನ್ನೆಲೆ ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸುದೀರ್ಘ‌ ಚರ್ಚೆ ನಡೆಸಿದರು.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಪುರಸಭೆ ಕಿರಿಯ ಅಭಿಯಂತರ ಆರ್‌. ಎಸ್‌.ಚವಾಣ ಮಾತನಾಡಿ, ಪಟ್ಟಣದಲ್ಲಿ 10 ಕೈಪಂಪ್‌, 118 ಕೊಳವೆ ಬಾವಿಗಳಿವೆ. ಅವುಗಳಲ್ಲಿ ನೀರಿನ ಅಭಾವದಿಂದ ಎರಡು ಕೊಳವೆ ಬಾವಿಗಳು ಬಂದಾಗಿವೆ. ಬರಗಾಲ ಪರಿಹಾರ ನಿಧಿಯಲ್ಲಿ ಮೊದಲ ಹಂತದಲ್ಲಿನ 14ರಲ್ಲಿ 13 ಕೊಳವೆ ಬಾವಿ ಕೊರೆಸಲಾಗಿದೆ. ದ್ವಿತೀಯ ಹಂತ 4, ಮೊದಲ ಹಂತದಲ್ಲಿ ಉಳಿದ ಒಂದು ಸೇರಿ 5 ಕೊಳವೆ ಬಾವಿಗಳನ್ನು ಕೊರೆಸಿ, ಕೆಲ ವಾರ್ಡ್‌ನಲ್ಲಿರುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಪುರಸಭೆ ಸದಸ್ಯರು ಚಿಂಚಲಿ ಪ್ಲಾಟನಲ್ಲಿ ನೀರಿನ ಅಭಾವ, ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಆರೋಗ್ಯ ವಿಭಾಗದ ಅಧಿಕಾರಿಗಳ ವಿಫಲ, 2012ರಲ್ಲಿ ವಿತರಿಸಿದ ಕೆಂಗೇರಿಮಡ್ಡಿ ಹಕ್ಕುಪತ್ರಗಳಿಗೆ ಉತಾರ ಸಮಸ್ಯೆಗೆ ಶಾಸ್ವತ ಪರಿಹಾರ, ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ನಿರ್ಲಕ್ಷ್ಯ, ಹಿಂದು ಸ್ಮಶಾನಕ್ಕೆ ಪಶ್ಚಿಮ ಭಾಗದ ಕಾಂಪೌಂಡ್‌ ಗೋಡೆ ಎತ್ತರಿಸುವುದು, ವಿವಿಧ ವಾಡ್‌‌ರ್ಗಳಲ್ಲಿ ಸಿಡಿ ನಿರ್ಮಾಣ, ಪಟ್ಟಣದಲ್ಲಿ ಉಂಟಾಗುತ್ತಿರುವ ಸಾರ್ವಜನಿಕ ವಿದ್ಯುತ್‌ ದ್ವೀಪಗಳ ಸಮಸ್ಯೆಗೆ ತ್ವರಿತ ಪರಿಹಾರ, ಸಾರ್ವಜನಿಕರ ಸಮಸ್ಯೆಗೆ ಸರಿಯಾಗಿ ಸಂದಿಸದ ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಆಕ್ರೋಶ, ಚಿಮ್ಮಡ ತಾಜ್ಯ ಘಟಕದ ಸಮಸ್ಯೆ ಬಗೆಹರಿಸುವುದು, ಸಾರ್ವಜನಿಕ ಗ್ರಂಥಾಲಯಕ್ಕೆ ಜಾಗೆ ನೀಡುವುದು ಸೇರಿದಂತೆ ಸಮಸ್ಯೆಗಳನ್ನು ಶಾಸಕರ ಮುಂದೆ ತೆರೆದಿಟ್ಟರು.

ಪುರಸಭೆ ಸದಸ್ಯರಿಂದ ಸಮಸ್ಯೆಗಳನ್ನು ಆಲಿಸಿ, ಅಧಿಕಾರಿಗಳಿಂದ ಎಲ್ಲ ವಿಷಯಗಳ ಸಮಗ್ರ ಮಾಹಿತಿ ಪಡೆದುಕೊಂಡ ಶಾಸಕ ಸಿದ್ದು ಸವದಿ ಮಾತನಾಡಿ, ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಯಾವುದೇ ಲಂಚವನ್ನು ಸ್ವೀಕರಿಸದೇ ತತಕ್ಷಣ ಸಾರ್ವಜನಿಕರ ಕೆಲಸ ಮಾಡಿಕೊಂಡುವದು, ಆಯಾ ವಾರ್ಡಿನ ಸದಸ್ಯರೊಂದಿಗೆ ಚರ್ಚಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಕಡ್ಡಾಯ ಹಾಜರಾತಿ, ಆರೋಗ್ಯ ವಿಭಾಗದವರು ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

Advertisement

ಪುರಸಭೆ ಮುಖ್ಯಾಧಿಕಾರಿ ಎ.ಬಿ.ಕಲಾಲ, ಸದಸ್ಯರಾದ ಬಸವರಾಜ ಹಿಟ್ಟಿನಮಠ, ರಾಜು ಚಮಕೇರಿ, ಪ್ರಹ್ಲಾದ ಸಣ್ಣಕ್ಕಿ, ಚನಬಸು ಯರಗಟ್ಟಿ, ಸವಿತಾ ಕೋಳಿಗುಡ್ಡ, ಶೇಖರ ಅಂಗಡಿ, ಪುರಸಭೆ ಅಧಿಕಾರಿಗಳಾದ ಎ.ಎಂ.ಮುಜಾವರ, ವಿ.ಜಿ. ಕುಲಕರ್ಣಿ, ರಾಘು ನಡುವಿನಮನಿ, ಎಸ್‌.ಎನ್‌.ಪಾಟೀಲ, ಬಿ.ವೈ.ಮರ್ದಿ, ಇರ್ಫಾನ್‌ ಜಾರೆ ಇದ್ದರು.

ಇಬ್ಬರು ಸಿಬ್ಬಂದಿ ಅಮಾನತುಗೆ ಆದೇಶ:

ಕರ ಪಾವತಿಸಲು ಬಂದ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸದೇ ಇರುವು‌ದು ಮತ್ತು ಮನೆಯ ಉತಾರನೀಡಲು, ಖಾತಾ ಬದಲಾವಣೆಗಾಗಿ ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುರಸಭೆ ಕಂದಾಯ ವಿಭಾಗದ ಹುಣಸಿಗಿಡದ, ದಳವಾಯಿ ಎಂಬುವರನ್ನು ಅಮಾನತುಗೊಳಿಸಬೇಕೆಂದು ಶಾಸಕ ಸಿದ್ದು ಸವದಿ ಪುರಸಭೆ ಮುಖ್ಯಾಧಿಕಾರಿ ಎ.ಬಿ.ಕಲಾಲ ಅವರಿಗೆ ಆದೇಶಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next