Advertisement

ಮೈತ್ರಿ ಸರ್ಕಾರ ಸಿಎಂ ರೆಸಾರ್ಟ್‌ನಲ್ಲಿ ಗಾಢ ನಿದ್ರೆ

09:46 AM May 11, 2019 | Team Udayavani |

ಕುಂದಗೋಳ: ಜನರ ವಿಶ್ವಾಸ ಕಳೆದುಕೊಂಡ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಪರ ಮತಕೇಳಿ ಸುಸ್ತಾಗಿ ರೆಸಾರ್ಟ್‌ನಲ್ಲಿ ಗಾಢ ನಿದ್ರೆಗೆ ಜಾರಿದ್ದು, ಮುಂಬರುವ ದಿನಗಳಲ್ಲಿ ಮೈತ್ರಿ ಸರ್ಕಾರ ಪತನವಾಗುವುದು ಗ್ಯಾರಂಟಿ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಪರ ಶುಕ್ರವಾರ ಕುಂದಗೋಳ, ಶಿರೂರು, ಪಶುಪತಿಹಾಳ, ಹಿರೇಗುಂಜಳ ಮತ್ತು ಬರದ್ವಾಡ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿಯಲ್ಲಿ ಮನೆ ಮಾಡಿ ಮತಬ್ಯಾಂಕ್‌ಗೆ ಕೈ ಹಾಕಿದರೋ ಅಥವಾ ಇಲ್ಲಿನ ಜನರ ನೋವಿಗಾಗಿ ಮಾಡಿದರೋ ಅದು ಸ್ಪಷ್ಟವಾಗಲಿಲ್ಲ. ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಜನ ಮತ ನೀಡಲಿಲ್ಲ ಎಂದು ಇಲ್ಲಿ ನಿರ್ಲಕ್ಷ್ಯ ವಹಿಸಿದರು. ಆದರೆ ಮಂಡ್ಯ, ಮೈಸೂರು, ತುಮಕೂರು, ಹಾಸನ ಜಿಲ್ಲೆಗೆ ಮಾತ್ರ ಸಿಎಂ ಆಗಿ ಕಾರ್ಯ ಮಾಡುತ್ತಿದ್ದಾರೆ ಎಂದರು.

ಮಲ್ಲಿಕಾರ್ಜುನ ಕಿರೇಸೂರ, ಪ್ರಕಾಶ ಶಟ್ಟಿ, ರುದ್ರಣ್ಣ ಗಾಣಿಗೇರ, ರಾಘವೇಮದ್ರ ಮಿರೇಜಕರ, ಈಶ್ವರ ಗಂಗಾಯಿ, ಶಂಕ್ರಣ್ಣ ಒಡಕಣ್ಣವರ, ಸಿದ್ದು ನಾಗರಳ್ಳಿ, ಇದ್ದರು.

ಇದೇ ವೇಳೆ ಹಿರೇಹರಕುಣಿ ಗ್ರಾಮದಲ್ಲೂ ಪ್ರಚಾರ ನಡೆಸಿ ಮತಯಾಚಿಸಿದರು.

ಮೈತ್ರಿ ಸರ್ಕಾರದ ಪಾಪದ ಕೊಡ ತುಂಬಿದೆ:

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರದ ಪಾಪದ ಕೊಡ ತುಂಬಿದೆ. ಚುನಾವಣೆ ಫಲಿತಾಂಶದ ನಂತರ ರಾಜ್ಯ ಸರ್ಕಾರ ತನ್ನಿಂದ ತಾನೇ ಬೀಳುತ್ತದೆ. ಕಾಂಗ್ರೆಸ್‌ ಪಕ್ಷ ಆಪರೇಷನ್‌ ಮಾಡಲು ಹೋದರೇ ಅವರನ್ನು ನಮ್ಮ ಕಾರ್ಯಕರ್ತರೆ ನೋಡಿಕೊಳ್ಳಲಿದ್ದಾರೆ. ಇನ್ನು ನಾವು ಯಾವುದೇ ಆಪರೇಷನ್‌ ಮಾಡಲ್ಲಾ ಎಂದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಶುಕ್ರವಾರ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಪ್ರಚಾರ ವೇಳೆ ಮಾತನಾಡಿದ ಅವರು, ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷದಿಂದ ಹಣ ಬಲ, ತೋಳ ಬಲದಿಂದ ಚುನಾವಣೆ ನಡೆಸಲಾಗುತ್ತಿದೆ. ಕಾಂಗ್ರೆಸ್‌-ಜೆಡಿಎಸ್‌ ವಾಹನ, ಟೈಯರ್‌ಗಳಲ್ಲಿ ಹಣ ಸಿಕ್ಕಿರುವುದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಈ ಭಾಗದಲ್ಲಿ ಸಂಚರಿಸುವ ಕಾಂಗ್ರೆಸ್‌ ವಾಹನಗಳ ಟೈಯರ್‌ ಮೊದಲು ಮಾಡಿ ಎಲ್ಲವನ್ನೂ ಪರಿಶೀಲನೆ ಮಾಡಬೇಕು. ಸಚಿವ ಡಿ.ಕೆ.ಶಿವಕುಮಾರ ಎಲ್ಲಿಗೆ ಹೋದರು ಕಂತೆ ಕಂತೆ ಹಣದ ಚೀಲ ಹಿಡಿದುಕೊಂಡು ಹೋಗುತ್ತಾರೆ. ನಿಮ್ಮ ದುಡ್ಡು ಮತ್ತು ಅಹಂಕಾರ ಇಲ್ಲಿ ನಡೆಯುವುದಿಲ್ಲ. ಈಗಾಗಲೇ ಕ್ಷೇತ್ರದಾದ್ಯಂತ ಡಿ.ಕೆ. ಶಿವಕುಮಾರ ಅವರ ಹಣದ ಚೀಲ ಹರಿದಾಡುತ್ತಿವೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next