ಪ್ರಶ್ನೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದೆ ಮೋದಿ ಅಲೆ ಕೈಹಿಡಿಯುತ್ತಾ ?
ಉತ್ತರ: ಬೆಳಗಾವಿ ಜಿಲ್ಲೆಯಲ್ಲಿ ಅದರಲ್ಲೂ ನಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈತ್ರಿಯ ವಾತಾವರಣವೇ ಕಾಣುತ್ತಿಲ್ಲ. ಈ ಭಾಗದಲ್ಲಿ ಜೆಡಿಎಸ್ ತನ್ನ ಅಸ್ತಿತ್ವವನ್ನೇ ಕಳೆದು ಕೊಂಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಇದೆ ಎಂಬುದು ಬಹುತೇಕ ಹಳ್ಳಿಗಳಲ್ಲಿ ಗೊತ್ತೇ ಇಲ್ಲ. ಇಲ್ಲಿ ಏನೇ ಇದ್ದರೂ ಅದು ಮೋದಿ ಅಲೆ ಮಾತ್ರ.
ಉತ್ತರ: ಬೆಳಗಾವಿ ನಗರದಲ್ಲಿ ವಾಹನ ಸಂಚಾರ ಸಮಸ್ಯೆಗೆ ಮುಕ್ತಿ ಹಾಡಲು ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೂರು ರೈಲ್ವೆ ಮೇಲು ಸೇತುವೆಗಳ ನಿರ್ಮಾಣ ಮಾಡಲಾಗಿದೆ. ಇಲ್ಲಿಯ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಹೊರದೇಶಗಳಿಗೆ ರಪ್ತು ಮಾಡಲು ಅನುಕೂಲವಾಗುವಂತೆ ಡಿಐಎಫ್‌ಟಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ವಿದ್ಯಾವಂತ ಯುವ ಸಮುದಾಯಕ್ಕೆ ಸಹಾಯವಾಗಲು ಪಾಸ್‌ಪೋರ್ಟ್ ಸೇವಾ ಕೇಂದ್ರ ತರಲಾಗಿದೆ. ಬೆಳಗಾವಿ ವಿಮಾನ ನಿಲ್ದಾಣವನ್ನು ಸಂಪೂರ್ಣ ಅಭಿವೃದ್ಧಿಪಡಿಸಿ ಉಡಾನ್ ಯೋಜನೆಯಡಿ ಆಯ್ಕೆಯಾಗುವಂತೆ ಮಾಡಲಾಗಿದೆ. ಲೋಂಡಾ- ಮೀರಜ್ ದ್ವಿಪಥ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರದಿಂದ ಅನುದಾನ ಮಂಜೂರು ಮಾಡಿಸಲಾಗಿದೆ.
ಪ್ರಶ್ನೆ; ರಾಜ್ಯ ಸರಕಾರದ ಅಬ್ಬರ ಎದುರಿಸಲು ಪ್ರಚಾರದ ವೈಖರಿ ಹಾಗೂ ತಂತ್ರಗಾರಿಕೆ ಹೇಗಿದೆ ?
ಉತ್ತರ: ಕ್ಷೇತ್ರದ ಯಾವ ಭಾಗದಲ್ಲೂ ರಾಜ್ಯ ಸರಕಾರದ ಅಬ್ಬರ ಇಲ್ಲ. ಮೈತ್ರಿ ಸರಕಾರದ ಭರವಸೆಗಳು ಬರೀ ಸುಳ್ಳು ಎಂಬುದು ಜನರಿಗೆ ಗೊತ್ತಾಗಿದೆ. ನಾವು ಮನೆ ಮನೆಗೆ ಹೋಗಿದ್ದೇವೆ. ಜನರಿಗೆ ಮನವಿ ಮಾಡಿದ್ದೇವೆ. ಜನರಿಗೆ ಬಳಿಗೆ ಹೋಗುವುದು. ಅವರ ಬೇಕು ಬೇಡಿಕೆಗಳಿಗೆ ಸ್ಪಂದಿಸುವುದು. ಅವರ ಸ್ಪಂದನೆಯೇ ನಮಗೆ ಶ್ರೀರಕ್ಷೆ. ಕೆಲವು ಕಡೆ ನೀವು ನಮ್ಮ ಹಳ್ಳಿಗೆ ಬಂದೇ ಇಲ್ಲ ಎಂದು ಹೇಳಿದರು. ಅಸಮಾಧಾನ ವ್ಯಕ್ತಪಡಿಸಿದರು. ಆದರೂ ನಿಮಗೆ ಬೆಂಬಲ ನೀಡುತ್ತೇವೆ ಎಂದರು. ಅದೂ ಸಹ ನಮಗೆ ಆಶೀರ್ವಾದವೇ. ಹೀಗಿರುವಾಗ ಈ ಸರಕಾರವನ್ನು ಎದುರಿಸಲು ಹೊಸ ತಂತ್ರಗಾರಿಕೆಯ ಅಗತ್ಯವಿಲ್ಲ.
Advertisement
ಪ್ರಶ್ನೆ: ರಾಷ್ಟ್ರೀಯವಾದ, ಸೈನಿಕರ ಸಾಧನೆ ಹೊರತುಪಡಿಸಿ ಸ್ಥಳೀಯವಾಗಿ ನಿಮ್ಮ ಸಾಧನೆ ಏನು..?
Related Articles
Advertisement
ಪ್ರಶ್ನೆ: ಪ್ರತ್ಯೇಕ ಲಿಂಗಾಯತ ಧರ್ಮ ಈ ಬಾರಿಯ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ ?
ಉತ್ತರ: ಯಾವುದೇ ಕಾರಣಕ್ಕೂ ಇಲ್ಲ. ಭಾರತದಲ್ಲಿ ಹಿಂದೂ ಧರ್ಮ ಬಿಟ್ಟರೆ ಉಳಿದೆಲ್ಲವೂ ಗೌಣ. ನಮ್ಮದು ಅಖಂಡ ಹಿಂದೂ ರಾಷ್ಟ್ರ. ಯಾವುದೇ ಧರ್ಮದ ವಿಷಯ ಅವರವರಿಗೆ ಬಿಟ್ಟಿದ್ದು. ಅದು ಚುನಾವಣೆಯಲ್ಲಿ ಬರುವುದೇ ಇಲ್ಲ.
ಪ್ರಶ್ನೆ; ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿಮ್ಮ ನೀಲನಕ್ಷೆ ಏನು ?
ಉತ್ತರ: ಮಹದಾಯಿ ನೀರನ್ನು ತ್ವರಿತವಾಗಿ ತರಬೇಕು ಎಂಬ ಆಲೋಚನೆ ಇದೆ. ಇದರಿಂದ ಸವದತ್ತಿ ಹಾಗೂ ರಾಮದುರ್ಗದ ಜನರಿಗೆ ಬಹಳ ಅನುಕೂಲವಾಗಲಿದೆ. ಇದಲ್ಲದೇ ಬೆಳಗಾವಿ ನಗರಕ್ಕೆ ವರ್ಷದ 12 ತಿಂಗಳೂ ನಿರಂತರವಾಗಿ ನೀರು ಸಿಗುವಂತೆ ಮಾಡಲು ಮಹಾರಾಷ್ಟ್ರದ ತಿಲಾರಿ ಡ್ಯಾಮ್‌ದಿಂದ ನೀರು ತರುವ ಯೋಜನೆ ಇದೆ.