ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ನಡೆಸಿಕೊಡುವ ಬಿಗ್‌ಬಾಸ್ ಕನ್ನಡ -11 (Bigg Boss Kannada-11) ಕಾರ್ಯಕ್ರಮ ಆರಂಭವಾಗಿ ಎರಡು ವಾರದಲ್ಲೇ ಪೊಲೀಸರು ಆಯೋಜಕರಿಗೆ ಶಾಕ್ ನೀಡಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಸ್ವರ್ಗ- ನರಕದ ಕಾನ್ಸೆಪ್ಟ್‌ನೊಂದಿಗೆ ಆರಂಭವಾಗಿತ್ತು. ಆರಂಭದಿಂದಲೇ ಕೆಲ ಸ್ಪರ್ಧಿಗಳನ್ನು ಸ್ವರ್ಗಕ್ಕೆ ಹಾಗೂ ನರಕಕ್ಕೆ ಕಳುಹಿಸಲಾಗಿತ್ತು. ನರಕದ ಮನೆಯಲ್ಲಿನ ನಿವಾಸಿಗಳಿಗೆ ಪ್ರತಿನಿತ್ಯ ಗಂಜಿ ಊಟವನ್ನು ಮಾತ್ರ ನೀಡಲಾಗುತ್ತಿತ್ತು. ಕುಡಿಯುವ ನೀರನ್ನು ಮಡಿಕೆಯಲ್ಲಿ ಇಡಲಾಗಿತ್ತು. ಇದಲ್ಲದೆ ವಾಶ್ ರೂಮ್ ಹೋಗುವುದಕ್ಕೂ ಸ್ವರ್ಗ ನಿವಾಸಿಗಳ ಬಳಿ ಅನುಮತಿ ಕೇಳಬೇಕಿತ್ತು.
ಇದನ್ನೂ ಓದಿ: BBK11: ಈ ವಾರ ಮನೆಯಿಂದ ಯಾರು ಹೋಗಲ್ಲ.. ಕಾರಣವೇನು?
ಈ ಕುರಿತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು, ಮಾನವಕ ಹಕ್ಕು ಆಯೋಗಕ್ಕೆ ಪತ್ರ ಬರೆದು ಬಿಗ್‌ಬಾಸ್ ಮನೆಯಲ್ಲಿ ಮಾನವ ಹಕ್ಕಿನ ಉಲ್ಲಂಘನೆ ಆಗುತ್ತಿದೆ ಎಂದು ದೂರು ನೀಡಿದ್ದರು.
ಪೌಷ್ಟಿಕ ಆಹಾರ, ಶೌಚಾಲಯ ವ್ಯವಸ್ಥೆಯನ್ನು ಸಹ ನೀಡದೆ ಮಾನವ ಹಕ್ಕು ಉಲ್ಲಂಘನೆ ಮಾಡಲಾಗಿದೆ ಎಂದು ನಾಗಲಕ್ಷ್ಮಿ ಆರೋಪ ಮಾಡಿದ್ದರು.
ಕೆಲ ಸ್ಪರ್ಧಿಗಳು ಪರಸ್ಪರ ಜಗಳವಾಡುವ ಭರದಲ್ಲಿ ಮಹಿಳಾ ಸ್ಪರ್ಧಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಈ ಕಾರಣದಿಂದ ಮಹಿಳಾ ಆಯೋಗದ ಅಧ್ಯಕ್ಷೆ ಪೊಲೀಸರಿಗೂ ಪತ್ರ ಬರೆದಿದ್ದರು.
ಪೊಲೀಸರಿಂದ ನೋಟಿಸ್:
ಇದೀಗ ಮಹಿಳಾ ಆಯೋಗ ನೀಡಿದ ದೂರಿನ ಮೇರೆಗೆ ಕುಂಬಳಗೋಡು ಠಾಣೆ ಪೊಲೀಸರು ಬಿಗ್ ಬಾಸ್ ಆಯೋಜಕರಿಗೆ ನೊಟೀಸ್ ನೀಡಿದ್ದಾರೆ.
ʼಬಿಗ್‌ಬಾಸ್’ ಸೆಟ್‌ಗೆ ತೆರಳಿ ಇನ್‌ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ನೋಟಿಸ್ ನೀಡಿದ್ದಾರೆ. ಸ್ವರ್ಗ ನರಕ ವಿಚಾರವಾಗಿ ನಡೆದ ಸಂಭಾಷಣೆಯ ರಾ ಫುಟೇಜ್ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.
ಸ್ವರ್ಗ – ನರಕದ ಮನೆ ಧ್ವಂಸ..: ಇನ್ನು ಇದೇ ವಾರದಲ್ಲಿ ಬಿಗ್‌ಬಾಸ್‌ನಲ್ಲಿ ಈ ಬಾರಿ ಇದ್ದ ಸ್ವರ್ಗ – ನರಕದ ಮನೆ ಧ್ವಂಸ ಮಾಡಲಾಗಿದೆ. ನಿಜವಾದ ಸ್ವರ್ಗ ನರಕ ನೀವು ಬದುಕುವ ರೀತಿಯಲ್ಲಿದೆ. ನಿಮ್ಮ ದೃಷ್ಟಿಕೋನದಲ್ಲಿ. ಈ ಮನೆ ಒಂದಾಗುವ ಸಮಯ ಬಂದಿದೆ. ಒಂದಾದ ಮನೆ ಸ್ವರ್ಗವಾಗಿ ಇರುತ್ತಾ, ನರಕವಾಗಿ ಉಳಿಯುತ್ತದೆ ಎನ್ನುವುದು ನಿಮ್ಮ ಕೈಯಲ್ಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ .