Advertisement

ಇ-ಸ್ವತ್ತು ದಾಖಲೆ ರಹಿತ ನೋಂದಣಿ ಆರೋಪ  

03:39 PM Jun 09, 2023 | Team Udayavani |

ಚನ್ನರಾಯಪಟ್ಟಣ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ನಂತರ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಇದೆ. ಹೀಗಿರುವಾಗ ಅಧಿಕಾರಿ ಗಳು ಸಹ ತಮ್ಮ ಮೂಲ ಕರ್ತವ್ಯವನ್ನು ಮರೆತು, ಅಗತ್ಯ ದಾಖಲೆಗಳಿಲ್ಲದಿದ್ದರೂ ಉಳ್ಳವರ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

Advertisement

ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮದ ಟಿ.ಅಗ್ರಹಾರ ಗ್ರಾಮದಲ್ಲಿನ ಸರ್ವೆ ನಂ.50 ಜಮೀನಿಗೆ ಸಂಬಂಧಿಸಿದಂತೆ, ಒಟ್ಟು 3 ಎಕರೆಯಷ್ಟು ಜಾಗವನ್ನು 2004-05ರಲ್ಲಿ ವಾಸದ ಉದ್ದೇಶಕ್ಕೆಂದು ಖಾಸಗಿಯವರು ಭೂಪರಿವರ್ತನೆ ಮಾಡಿಸಿಕೊಂಡಿರುತ್ತಾರೆ. ಗ್ರಾಪಂ ವ್ಯಾಪ್ತಿಗೆ ಒಳಪಡುವುದರಿಂದ ಸ್ಥಳೀಯವಾಗಿ ಗ್ರಾಪಂನಲ್ಲಿ ಇ-ಖಾತೆ ಮಾಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹುಂಡಿ ಖಾತೆಯನ್ನು 2022ರಲ್ಲಿ ಮಾಡಿರುವುದು ಸರಿಯಷ್ಟೇ. ಆದರೆ, ಭೂ ಪರಿವರ್ತನೆಯಾದ ಭೂಮಿ ಯನ್ನು ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮೋದನೆಯನ್ನು ಪಡೆ ಯದೆಯೇ ಆಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಪಂಚಾಯಿತಿಯಲ್ಲಿ ಜಮೀನಿಗೆ ನಕ್ಷೆ ಅನು ಮೋದನೆ ಮಾಡಿಕೊಟ್ಟಿರುತ್ತಾರೆ.

ವಾಸಕ್ಕಾಗಿ ಭೂಪರಿವರ್ತನೆಯಾದ ಭೂಮಿಯನ್ನು ಬಡಾವಣೆ ಯನ್ನಾಗಿ ನಿರ್ಮಾಣ ಮಾಡಲು ಅಕ್ರಮವಾಗಿ ಸಾಮಾನ್ಯ ರಶೀದಿಯನ್ನು ಪಡೆದು ಉಳ್ಳವರು ಬಡಾವಣೆ ನಿರ್ಮಾಣಕ್ಕೆ ಕಾಮಗಾರಿಯನ್ನು ಕೈಗೆತ್ತಿ ಕೊಂಡಿರುತ್ತಾರೆ. ಇದನ್ನು ಪ್ರಶ್ನಿಸಿ, ದಲಿತ ಸಂಘರ್ಷ ಸಮಿತಿ (ಭೀಮ ಶಕ್ತಿ‰) ಸಂಘಟನೆಯು ಚನ್ನಹಳ್ಳಿ ಗ್ರಾಪಂ ಪಿಡಿಒಗೆ ಫೆ.27, 2023ರಂದು ಅನಧಿ ಕೃತವಾಗಿ ನಿರ್ಮಾಣವಾಗುತ್ತಿರುವ ಬಡಾವಣೆ ಯನ್ನು ನಿಲ್ಲಿಸಲು ಅರ್ಜಿ ಸಲ್ಲಿಸಿದ್ದಾರೆ.

ಆದರೆ, ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾಗಲೀ, ಅಧ್ಯಕ್ಷರಾಗಲೀ ಕ್ರಮಕ್ಕೆ ಮುಂದಾಗದೆ, ಅರ್ಜಿಗೆ ಯಾವುದೇ ದಾಖಲಾತಿ, ಅನುಮತಿ ದಾಖಲಾತಿಗಳನ್ನು ನೀಡಿರುವುದಿಲ್ಲವೆಂದು ಹಿಂಬರಹದ ಮೂಲಕ ಸಮಜಾಯಿಷಿ ನೀಡಿರುತ್ತಾರೆ. ಇದರ ಭಾಗವಾಗಿ ತಾಪಂ ಕಾರ್ಯನಿರ್ವ ಹಣಾಧಿಕಾರಿಗಳ ಗಮನಕ್ಕೆ ತಂದು, ಅನಧಿಕೃತ ಬಡಾವಣೆಯನ್ನು ತೆರವು ಗೊಳಿಸುವಂತೆ ಏ.1, 2023ರಂದು ಅರ್ಜಿ ಸಲ್ಲಿಸಿದಾಗ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಚನ್ನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒಗೆ ಪತ್ರ ವ್ಯವಹಾರದ ಮೂಲಕ ಅನಧಿಕೃತ ಬಡಾ ವಣೆಯ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಲು ಸೂಚಿಸಿರುತ್ತಾರೆ. ಆದರೆ, ಮೇಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ, ಯಾವುದೇ ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಡಿಎಸ್‌ಎಸ್‌ (ಭೀಮಸೇನೆ) ಸಂಘಟನೆ ಆಕ್ರೋಶ : ಕಾನೂನಿನಡಿಯಲ್ಲಿ ಇ-ಸ್ವತ್ತು ಇಲ್ಲದೆ, ನೊಂದಣಿ ಮಾಡಲು ಬರುವುದಿಲ್ಲವಾದರೂ, ಸಬ್‌ರಿಜಿಸ್ಟ್ರಾರ್‌ನ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ, ಡಿಎಸ್‌ಎಸ್‌ ಸಂಘಟನೆ ಸಲ್ಲಿಸಿದ ಅರ್ಜಿಗೆ ಹಿಂಬರಹ ನೀಡುವುದರ ಮೂಲಕ ಜಾರಿಕೊಳ್ಳುತ್ತಿದ್ದಾರೆ. ಹುಂಡಿ ಖಾತೆಯ ದಾಖಲೆ ಯನ್ನು ಬಳಸಿಕೊಂಡು ಇಸ್ವತ್ತು ದಾಖಲೆ ರಹಿತ ಬಡಾವಣೆಯ ನಿವೇಶನಗಳ ನೊಂದಣಿ ಕಾರ್ಯವನ್ನು ಮುಂದುವರೆಸಿದ್ದು, ಈಗಾಗಲೇ ಅಕ್ರಮವಾಗಿ 62 ನಿವೇಶನಗಳ ನೊಂದಣಿ ಮಾಡುವುದರ ಮೂಲಕ ಸಂಘಟನೆ ಸಲ್ಲಿಸಿದ ಅರ್ಜಿಗೆ ಹಿಂಬರಹದಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಸಮಜಾಯಿಷಿ ದೃಢೀಕೃತ ನೀಡಿರುವು ಸರಿಯಾದ ಕ್ರಮವಲ್ಲ ವೆಂದು ದಲಿತ ಸಂಘರ್ಷ ಸಮಿತಿ (ಭೀಮಶಕ್ತಿ) ಖಂಡಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next