Advertisement

US; ಹತ್ಯೆಯ ಯತ್ನ ಟ್ರಂಪೇ ಮಾಡಿಸಿದ್ದು: ಆರೋಪ

12:52 AM Jul 15, 2024 | Team Udayavani |

ಶಿಕಾಗೋ: ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ಮೇಲೆ ನಡೆದ ದಾಳಿ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿ ರುವಂತೆಯೇ ಮತ್ತೂಂದೆಡೆ ಈ ದಾಳಿ ಪೂರ್ವನಿಯೋಜಿತ, ಟ್ರಂಪ್‌ ಅವರೇ ಅದನ್ನು ಮಾಡಿಸಿದ್ದಾರೆಂಬ ವಾದಗಳು ಕೇಳಿಬಂದಿವೆ. ಜತೆಗೆ ಟ್ರಂಪ್‌ ಕಿವಿಗೆ ತಾಗಿದ್ದು ಗುಂಡಲ್ಲ, ಬದಲಿಗೆ ಗಾಜು ಎಂದೂ ಹಲವರು ಆರೋಪಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರ ಮುಂದೆ ಇರಿಸಲಾಗಿದ್ದ ಟೆಲಿಪ್ರಾಮrರ್‌ಗೆ ಗುಂಡು ತಗಲಿದೆ. ಈ ವೇಳೆ ಅದರ ಗಾಜು ಚೂರಾಗಿ ಟ್ರಂಪ್‌ ಕಿವಿ ಸೋಕಿದೆ. ಹೀಗಾಗಿ ರಕ್ತ ಬಂದಿದೆ ಎಂದು ಜಾಲತಾಣಗಳಲ್ಲಿ ವೈರಲ್‌ ಆಗಿರುವ ವರದಿಗಳಲ್ಲಿ ಉಲ್ಲೇಖೀಸಲಾಗಿದೆ.

Advertisement

ದಾಳಿಯಲ್ಲಿ ಡೆಮಾಕ್ರಟಿಕ್‌ ಕೈವಾಡ: ರಿಪಬ್ಲಿಕನ್ಸ್‌ ವಾದ
ಡೊನಾಲ್ಡ್‌ ಟ್ರಂಪ್‌ ಮೇಲಿನ ದಾಳಿಯಲ್ಲಿ ಬೈಡೆನ್‌ ನೇತೃತ್ವದ ಡೆಮಾಕ್ರಟಿಕ್‌ ಪಕ್ಷದ ಕೈವಾಡವಿದೆ ರಿಪ ಬ್ಲಿಕ್‌ ಪಕ್ಷ ದ  ಸ ದ ಸ್ಯರು ಆರೋಪಿಸಿದ್ದಾರೆ. ಆ ಪಕ್ಷದ ಬಂಡವಾಳವನ್ನು ಟ್ರಂಪ್‌ ತಮ್ಮ ಭಾಷಣಗಳಲ್ಲಿ ಬಯಲು ಮಾಡುತ್ತಿದ್ದರು. ಇತ್ತೀಚೆಗಷ್ಟೇ ಸಾರ್ವ ಜನಿಕವಾಗಿಯೇ ಟ್ರಂಪ್‌ರನ್ನು ಗುರಿಯಾಗಿಸುವಂತೆ ಅಧ್ಯಕ್ಷ ಜೋ ಬೈಡೆನ್‌ ಕರೆ ನೀಡಿದ್ದರು. ಈಗ ನಡೆದ ಘಟನೆ ಅದರ ಪ್ರತಿಫ‌ಲವಾಗಿದೆ ಎಂದು ರಿಪಬ್ಲಿಕ್‌ನ ಹಲವು ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜತೆಗೆ ಈ ಘಟನೆಯನ್ನು ಎಂದೂ ಮರೆಯುವುದಿಲ್ಲ ಎಂದು ಎಚ್ಚರಿಕೆ ಹಾಕಿದ್ದಾರೆ.

ಟ್ರಂಪ್‌ ಕುಶಲ ವಿಚಾರಿಸಿದ ಅಧ್ಯಕ್ಷ ಜೋ ಬೈಡೆನ್‌
ಗುಂಡೇಟಿನಿಂದ ಸ್ವಲ್ಪದರಲ್ಲೇ ಬಚಾವಾದ ಡೊನಾಲ್ಡ್‌ ಟ್ರಂಪ್‌ಗೆ ಕರೆ ಮಾಡಿ ಅಧ್ಯಕ್ಷ ಜೋ ಬೈಡೆನ್‌ ಆರೋಗ್ಯ ವಿಚಾರಿಸಿದ್ದಾರೆ. ಟ್ರಂಪ್‌ ಹಾಗೂ ಪೆನ್ಸಿಲ್ವೇನಿಯಾ ಗವ ರ್ನರ್‌ ಜತೆಗೆ ಮಾತ ನಾಡಿ ರುವ ಬೈಡೆನ್‌ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ರವಿ ವಾರ ಶ್ವೇತಭವನಕ್ಕೆ ಘಟನೆಗೆ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಸಲ್ಲಿಸಿದ್ದಾರೆ. ಅಲ್ಲದೇ ಇದೇ ವೇಳೆ ಅಮೆರಿಕದ ಸೀಕ್ರೆಟ್‌
ಸರ್ವೀಸ್‌ನ ಏಜೆಂಟ್‌ಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಹತ್ಯೆ ಯತ್ನ ನಡೆದರೂ ಇಂದು ಟ್ರಂಪ್‌ ಪ್ರಚಾರ
ಹತ್ಯೆ ಯತ್ನ ನಡೆದಿದ್ದರೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಮಿಲ್ವಾಕಿಯಲ್ಲಿ ಆಯೋಜಿಸಲಾಗಿರುವ ಪ್ರಚಾರ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರ ಪ್ರಚಾರ ಸಮಿತಿ ಹೇಳಿಕೆ ಬಿಡುಗಡೆ ಮಾಡಿದೆ. ಈಗಾಗಲೇ ನಿಗದಿಯಾದಂತೆ ಪ್ರಚಾರ ನಡೆಯಲಿದ್ದು, ಅದರಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಭಾಗವಹಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದೆ. ಅಮೆರಿಕದ ನಾಗರಿಕರೆಲ್ಲರೂ ಅವರಿಗೆ ಬೆಂಬಲ ನೀಡಬೇಕು ಎಂದು ಟ್ರಂಪ್‌ ಅವರ ಪ್ರಚಾರ ಸಮಿತಿ ಆಗ್ರಹಿಸಿದೆ.

ಅಧ್ಯಕ್ಷರ ಮೇಲಿನ ದಾಳಿ ಅಮೆರಿಕಕ್ಕೆ ಹೊಸದಲ್ಲ!
ಡೊನಾಲ್ಡ್‌ ಟ್ರಂಪ್‌ ಮೇಲೆ ನಡೆದ ಗುಂಡಿನ ದಾಳಿ ನಡೆದ ಬಳಿಕ ಸಾಕಷ್ಟು ಚರ್ಚೆಗಳು ಶುರು ಆಗಿವೆ. ಆದರೆ ಈ ರೀತಿಯ ಗನ್‌ ಸಂಸ್ಕೃತಿ ಅಮೆರಿಕಕ್ಕೆ ಹೊಸತಲ್ಲ. ಈ ಹಿಂದೆಯೂ ಹಲವು ಬಾರಿ ಅಧ್ಯಕ್ಷರು, ಅಧ್ಯಕ್ಷೀಯ ಅಭ್ಯರ್ಥಿಗಳ ಹತ್ಯೆ ಕೃತ್ಯಗಳು ನಡೆದಿವೆ. ಈ ಹಿಂದಿನ ದಾಳಿಗಳ ಕುರಿತು ಮಾಹಿತಿ ಇಲ್ಲಿದೆ.

Advertisement

ಅಬ್ರಹಾಂ ಲಿಂಕನ್‌
16ನೇ ಅಧ್ಯಕ್ಷ ಲಿಂಕನ್‌ ಅವರ ಮೇಲೆ 1865ರಲ್ಲಿ ದಾಳಿ ನಡೆಸಲಾಯಿತು. ಈ ದಾಳಿಯಲ್ಲಿ ಲಿಂಕನ್‌ ಮೃತಪಟ್ಟರು. ಕಪ್ಪು ಜನಾಂಗಕ್ಕೆ ಬೆಂಬಲ ನೀಡಿದ್ದು, ಈ ದಾಳಿಗೆ ಕಾರಣ ಎನ್ನಲಾಗಿತ್ತು.

ಜೇಮ್ಸ್‌ ಗಾರ್‌ಫೀಲ್ಡ್‌
20ನೇ ಅಧ್ಯಕ್ಷರಾದ ಗಾರ್‌ಫೀಲ್ಡ್‌ ದುಷ್ಕರ್ಮಿಗಳ ಗುಂಡಿಗೆ ಸಾವನ್ನಪ್ಪಿದ 2ನೇ ಅಧ್ಯಕ್ಷ. ಅಧಿಕಾರ ವಹಿಸಿಕೊಂಡ 6 ತಿಂಗಳ ಬಳಿಕ ಇವರ ಮೇಲೆ 1881 ಜು.2ರಂದು ದಾಳಿ ಮಾಡಲಾಗಿತ್ತು.

ವಿಲಿಯಂ ಮೆಕಿನ್ಲ
1901ರ ಸೆ.6ರಂದು ನ್ಯೂಯಾರ್ಕ್‌ನಲ್ಲಿ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಎದೆಯ ಬಳಿಯೇ ಬಂದೂಕಿಟ್ಟು ಶೂಟ್‌ ಮಾಡಲಾಗಿತ್ತು. 1 ವಾರದ ಬಳಿಕ 25ನೇ ಅಧ್ಯಕ್ಷ ಮೆಕಿನ್ಲ ಮೃತಪಟ್ಟರು.

ಜಾನ್‌ ಎಫ್. ಕೆನಡಿ
ಡಲ್ಲಾಸ್‌ಗೆ ಭೇಟಿ ನೀಡಿದ್ದಾಗ, ಅಂದರೆ 1963ರಲ್ಲಿ 35ನೇ ಅಧ್ಯಕ್ಷ ಕೆನಡಿ ಮೇಲೆ ದಾಳಿ ನಡೆದಿತ್ತು. ತತ್‌ಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಕೆನಡಿ ಅಸುನೀಗಿದರು.

ಜಾರ್ಜ್‌ ಡಬ್ಲ್ಯು ಬುಷ್‌
43ನೇ ಅಧ್ಯಕ್ಷ ಬುಷ್‌ ಮೇಲೆ 2005ರಲ್ಲಿ ದಾಳಿ ನಡೆದಿತ್ತು. ಹ್ಯಾಂಡ್‌ ಗ್ರೆನೇಡ್‌ ಎಸೆಯುವ ಮೂಲಕ ಹತ್ಯೆಗೆ ಯತ್ನಿಸಲಾಗಿತ್ತು.

ರಾಬರ್ಟ್‌ ಎಫ್. ಕೆನಡಿ
ಅಧ್ಯಕ್ಷೀಯ ಅಭ್ಯರ್ಥಿಯಾದ ಕೆನಡಿ ಮೇಲೆ 1968ರಲ್ಲಿ ದಾಳಿ ನಡೆದಿತ್ತು. ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾದ ಇವರ ಮೇಲೆ ನಡೆದ ದಾಳಿಯಲ್ಲಿ ಕೆನಡಿ ಮೃತರಾದರು.

ಜಾರ್ಜ್‌ ಸಿ. ವಲಾಸ್‌
ಚುನಾವಣ ಪ್ರಚಾರ ಮಾಡುತ್ತಿದ್ದ ಸಮಯದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ವಲಾಸ್‌ ಮೇಲೆ 1972ರಲ್ಲಿ ದಾಳಿ ನಡೆದಿತ್ತು. ಇದರಿಂದ ವಲಾಸ್‌ ಪ್ಯಾರಲೈಸ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next