Advertisement

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

12:27 AM Apr 30, 2024 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಳ್ಳಾರಿ ಚುನಾವಣ ಪ್ರಚಾರದ ವೇಳೆ ಮಾಡಿದ್ದ ಭಾಷಣದ ವೀಡಿಯೋವನ್ನು ತಮಗೆ ಇಷ್ಟ ಬಂದಂತೆ ಸೃಷ್ಟಿಸಿ ಟ್ವೀಟ್‌ ಮಾಡಿರುವ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಕ್ರಮ ಜರಗಿಸುವಂತೆ ಚುನಾವಣ ಆಯೋಗಕ್ಕೆ ರಾಜ್ಯ ಬಿಜೆಪಿ ದೂರು ನೀಡಿದೆ.

Advertisement

ರವಿವಾರ ಬಳ್ಳಾರಿಯಲ್ಲಿ ಮಾತನಾಡಿದ್ದ ಪ್ರಧಾನಿ, ತಮ್ಮ ಸರಕಾರದಿಂದ ನೀಡುತ್ತಿದ್ದ ಕಿಸಾನ್‌ ಸಮ್ಮಾನ್‌ ಯೋಜನೆಗೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದಾಗ 4 ಸಾ.ರೂ. ಕೊಡುತ್ತಿತ್ತು. ಕಾಂಗ್ರೆಸ್‌ ಸರಕಾರ ಬಂದ ಮೇಲೆ ಇದನ್ನು ನಿಲ್ಲಿಸಿತು. ಇವರು ಮಾಡಿರುವ ಪಾಪಕ್ಕೆ ಸೂಕ್ತ ಉತ್ತರ ಕೊಡಬೇಕು ಎಂದಿದ್ದರು. ಆದರೆ ಈ ವೀಡಿಯೋವನ್ನು ತಮಗೆ ಬೇಕಾದಂತೆ ಕತ್ತರಿಸಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next