ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ದೇವಧಂಗ್‌ನಲ್ಲಿ ನಿಯಮ ಮೀರಿ ಕ್ರೈಸ್ತ ಧರ್ಮಕ್ಕೆ ಸಾಮೂಹಿಕ ಮತಾಂತರ ನಡೆಸಲಾ ಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜತೆಗೆ ಘರ್ಷಣೆಯೂ ಉಂಟಾಗಿದೆ.
ಶುಕ್ರವಾರ ಈ ಘಟನೆ ನಡೆದಿದೆ. ಮಿಷನರಿ ಸಂಘಟನೆಯೊಂದು ಆಯೋಜಿಸಿದ್ದ ಕ್ರೈಸ್ತ ಧರ್ಮಗುರುಗಳು ಕೂಡ ಭಾಗವಹಿಸಿದ್ದರು.
ಘಟನೆ ಸಂಬಂಧ ದೂರು ಮತ್ತು ಪ್ರತಿ ದೂರು ಪೌರಾಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ನೇಪಾಲದಿಂದ ಕೆಲಸಕ್ಕೆಂದು ಆಗಮಿಸುವ ಜನರನ್ನು ಕ್ರೈಸ್ತ ಧರ್ಮದ ಸಂಸ್ಥೆಗಳು ಆಮಿಷವೊಡ್ಡಿ ನಿರಂತರವಾಗಿ ಸಾಮೂಹಿಕ ಮತಾಂತರ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, “ಬಲವಂತದ ಮತಾಂತರದ ವಿರುದ್ಧ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಯಲ್ಲಿದೆ. ಸಾಮೂಹಿಕ ಮತಾಂತರ ಕುರಿತು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ. ಈ ಬಗ್ಗೆ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ,’ ಎಂದು ಹೇಳಿದ್ದಾರೆ.