Advertisement

Vijayapura; ಜಾತಿ ನಿಂದನೆ ಆರೋಪ: ಮುದ್ದೇಬಿಹಾಳ ಠಾಣೆ ಎದುರು ಪಿಎಸ್‍ಐ ವಿರುದ್ಧ ಧರಣಿ

05:36 PM Aug 22, 2024 | keerthan |

ವಿಜಯಪುರ: ಕರ್ತವ್ಯ ನಿರತ ಪಿಎಸ್‍ಐ ಇಸ್ಪಿಟ್ ಅಡ್ಡೆಯ ಮೇಲೆ ದಾಳಿ ನಡೆಸಿದ ವೇಳೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕೋಳೂರು ತಾಂಡಾ ನಿವಾಸಿಗಳು ಠಾಣೆ ಎದುರು ಪ್ರತಿಭಟನೆ ನಡೆಸಿರುವ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

Advertisement

ಗುರುವಾರ ಮುದ್ದೇಬಿಹಾಳ ಪೊಲೀಸ್ ಠಾಣೆಯ ಎದುರು ಪಿಎಸ್‍ಐ ವಿರುದ್ದ ಮಹಿಳೆಯರ ಸಮೇತ ಆಗಮಿಸಿ ಪ್ರತಿಭಟನೆಗೆ ಮುಂದಾದ ಕೋಳೂರು ತಾಂಡಾ ನಿವಾಸಿಗಳು, ಬಂಜಾರಾ ಸಮುದಾಯದ ಜಾತಿ ನಿಂದನೆ ಮಾಡಿದ್ದಾಗಿ ಆರೋಪಿಸಿದರು.

ಮುದ್ದೇಬಿಹಾಳ ಠಾಣೆ ಪಿಎಸೈ ಸಂಜಯ್ ತಿಪ್ಪರಡ್ಡಿ ವಿರುದ್ದ ಜಾತಿ ನಿಂದನೆ ಆರೋಪ ಮಾಡಿ ಪ್ರತಿಭಟನೆಗೆ ಮುಂದಾದ ಮಹಿಳೆಯರು, ಲಂಬಾಣಿ ಸಮಾಜದ ವಿರುದ್ದ ಜಾತಿ ನಿಂದನೆ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಪಿಎಸ್‍ಐ ಸಂಜಯ್ ಕೆಲ ದಿನಗಳ ಹಿಂದೆ ತಮ್ಮ ತಾಂಡಾದ ಇಸ್ಪಿಟ್ ಆಟವಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ್ದು, ಆಗ ತಮ್ಮ ಜಾತಿ ನಿಂದನೆ ಮಾಡಿ, ಅಶ್ಲೀಲವಾಗಿ ನಿಂದಿಸಿದ್ದಾಗಿ ಆರೋಪಿಸಿದರು.

Advertisement

ಈ ಹಂತದಲ್ಲಿ ಸ್ಥಳಕ್ಕೆ ಆಗಮಿಸಿದ ಡಿಎಸ್‍ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗಿರಿ ಅವರು ಪ್ರತಿಭಟನಾ ನಿರತ ಮುಖಂಡರೊಂದಿಗೆ ಮಾತುಕತೆ ನಡೆಸಿ, ಸದರಿ ಘಟನೆಯ ಕುರಿತು ಪರಿಶೀಲನೆ ನಡೆಸಲಿದ್ದೇವೆ. ಬರುವ 15 ದಿನಗಳಲ್ಲಿ ಸಿಪಿಐ ಅವರಿಂದ ವರದಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದಕ್ಕೂ ಜಗ್ಗದಾದಾಗ ಮಹಿಳೆಯರೊಂಗೆ ನೂರಾರು ಸಂಖ್ಯೆಯಲ್ಲಿ ಜನರು ಜಮೆಯಾಗಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದು ಕಾನೂನು ಪ್ರಕಾರ ಸರಿಯಲ್ಲ. ಒಂದೊಮ್ಮೆ ಲೋಪವಾಗಿದ್ದರೆ, ಕಾನೂನು ಮಾರ್ಗದಲ್ಲಿ ಸಮಸ್ಯೆ ಕುರಿತು ಪ್ರಶ್ನಿಸುವಂತೆ ಪ್ರತಿಭಟನಾಕಾರರಿಗೆ ಡಿಎಸ್‍ಪಿ ಸಲಹೆ ನೀಡಿದ ಬಳಿಕ ಧರಣಿ ನಿರತರು ಪ್ರತಿಭಟನೆ ಹಿಂಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next