Advertisement

ಅಲಹಾಬಾದ್‌ಗೆ ಹೊಸ ಹೆಸರು ಪ್ರಯಾಗರಾಜ್‌

06:00 AM Oct 16, 2018 | Team Udayavani |

ಲಕ್ನೋ: ಉತ್ತರ ಪ್ರದೇಶದ ಅಲಹಾಬಾದ್‌ ನಗರದ ಹೆಸರನ್ನು ಪ್ರಯಾಗರಾಜ್‌ ಎಂದು ಬದಲಿಸಲು ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ಎಲ್ಲರೂ ಒಪ್ಪಿದರೆ ಈ ಬಗ್ಗೆ ಮುಂದುವರಿಯಲಾಗುತ್ತದೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಮೂಲಗಳ ಪ್ರಕಾರ ಕುಂಭ ಮೇಳಕ್ಕೂ ಮುನ್ನ ಅಲಹಾಬಾದ್‌ಗೆ ನಾಮಕರಣ ಮಾಡಲು ನಿರ್ಧರಿಸಲಾಗಿದೆ.  ಕಾಂಗ್ರೆಸ್‌ ಅದಕ್ಕೆ ಆಕ್ಷೇಪ ಮಾಡಿದ್ದು, ಸರ್ಕಾರಕ್ಕೆ ಪ್ರಯಾಗರಾಜ್‌ ನಿರ್ಮಿಸಿಬೇಕೆಂದಿದ್ದರೆ, ಇಡೀ ನಗರದ ಹೆಸರು ಬದಲಾವಣೆ ಮಾಡುವುದರ ಬದಲಿಗೆ ಪ್ರತ್ಯೇಕ ನಗರವನ್ನು ನಿರ್ಮಿಸಬಹುದು ಎಂದು ಹೇಳಿದೆ.  ಪ್ರಯಾಗ ಎಂಬುದು ಅಲಹಾಬಾದ್‌ನ ಹಳೆಯ ಹೆಸರಾಗಿತ್ತು. ಮುಘಲರ ಆಡಳಿತಾವಧಿಯಲ್ಲಿ ನಗರಕ್ಕೆ ಅಲಹಾಬಾದ್‌ ಎಂದು ಮರುನಾಮಕರಣ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next