Advertisement

Allahabad: ಪ್ರವಾಸಿಗರ ಸೆಳೆಯುತ್ತಿದೆ ಸೆಂಗೋಲ್‌ ಪ್ರತಿಕೃತಿ

09:03 PM Oct 01, 2023 | Team Udayavani |

ಲಕ್ನೋ: ನೂತನ ಸಂಸತ್‌ ಭವನದಲ್ಲಿ ಪ್ರತಿಷ್ಠಾಪಿಸಿರುವ ಐತಿಹಾಸಿಕ ಸೆಂಗೋಲ್‌ನ ಪ್ರತಿಕೃತಿಯನ್ನು ಅಲಹಾಬಾದ್‌ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು, ಸೆಂಗೋಲ್‌ ಪ್ರತಿಕೃತಿಯು ಪ್ರೇಕ್ಷಕರ ಮನ ಸೆಳೆಯುತ್ತಿದೆ ಎಂದು ಮ್ಯೂಸಿಯಂ ನಿರ್ದೇಶಕರಾದ ರಾಜೇಶ್‌ ಪ್ರಸಾದ್‌ ಹೇಳಿದ್ದಾರೆ.

Advertisement

ತಮಿಳುನಾಡಿನ ಐತಿಹಾಸಿಕ ರಾಜದಂಡವಾದ ಸೆಂಗೋಲ್‌ ಅನ್ನು ಬ್ರಿಟಿಷರು ಅಧಿಕಾರ ಹಸ್ತಾಂತರದ ಪ್ರತೀಕವಾಗಿ ದೇಶದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರಿಗೆ ನೀಡಿದ್ದರು. ಅದನ್ನು ಅಲಹಾಬಾದ್‌ ವಸ್ತು ಸಂಗ್ರಹಾಲಯದಲ್ಲೇ ಇರಿಸಲಾಗಿತ್ತು. ಆದರೆ, ಇತ್ತೀಚೆಗೆ ಪ್ರಧಾನಿ ಮೋದಿ ಅವರು ನೂತನ್‌ ಸಂಸತ್‌ ಕಟ್ಟಡದಲ್ಲಿ ಸೆಂಗೋಲ್‌ ಅನ್ನು ಸ್ಥಾಪಿಸಿದರು.
ಆ ಬಳಿಕ ಸೆಂಗೋಲ್‌ನ ಆಯಾಮ, ತೂಕ ಎಲ್ಲದರಲ್ಲಿಯೂ ಒಂದೇ ರೀತಿಯ ಹೋಲಿಕೆ ಇರುವ ಚಿನ್ನದ ಲೇಪನವಿರುವ ಹಿತ್ತಾಳೆ ಸೆಂಗೋಲ್‌ ಪ್ರತಿಕೃತಿಯನ್ನು ತಯಾರಿಸಲಾಗಿತ್ತು. ಸೆ. 25ರಂದು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೇನ್‌ ಪಟೇಲ್‌ ಪ್ರತಿಕೃತಿಯನ್ನುವಸ್ತು ಸಂಗ್ರಹಾಲಯಕ್ಕೆ ಸಮರ್ಪಿಸಿದ್ದಾರೆ. ಇದೀಗ ಆ ಪ್ರತಿಕೃತಿಯನ್ನು ನೋಡಲೆಂದೇ ವೀಕ್ಷಕರು ಬರುತ್ತಿದ್ದಾರೆ ಎಂದು ರಾಜೇಶ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next