Advertisement

ಆರುಷಿಯನ್ನು ಕೊಂದದ್ದು ಹೆತ್ತವರೇ ? ಇಂದು ಹೈಕೋರ್ಟ್‌ ತೀರ್ಪು

10:56 AM Oct 12, 2017 | Team Udayavani |

ಹೊಸದಿಲ್ಲಿ : ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ 14 ವರ್ಷ ಪ್ರಾಯದ ಆರುಷಿ ತಲ್ವಾರ್‌ ಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಲಹಾಬಾದ್‌ ಹೈಕೋರ್ಟ್‌ ಇಂದು ಗುರುವಾರ ತೀರ್ಪು ನೀಡುವ ಸಂಭವವಿದೆ. 2008ರಲ್ಲಿ ನೋಯ್ಡಾದಲ್ಲಿನ ತನ್ನ ನಿವಾಸದಲ್ಲಿ ಆರುಷಿ ಸತ್ತು ಬಿದ್ದಿರುವುದು ಪತ್ತೆಯಾಗಿತ್ತು.

Advertisement

ಆರುಷಿ ಮತ್ತು ಮನೆ ಕೆಲಸದಾಳು ಹೇಮರಾಜ್‌ನನ್ನು ಹತ್ಯೆಗೈದ ಅಪರಾಧಕ್ಕಾಗಿ ಉತ್ತರ ಪ್ರದೇಶ ನ್ಯಾಯಾಲಯ ಆರುಷಿಯ ಹೆತ್ತವರಾದ ರಾಜೇಶ್‌ ಮತ್ತು ನೂಪುರ್‌ ತಲ್ವಾರ್‌ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

ಗಾಜಿಯಾಬಾದ್‌ನ ಸಿಬಿಐ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಆರುಷಿ ಹೆತ್ತವರು ಅಲಹಾಬಾದ್‌ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ಸೆಪ್ಟಂಬರ್‌ನಲ್ಲಿ ಜಸ್ಟಿಸ್‌ ಬಿ ಕೆ ನಾರಾಯಣ ಮತ್ತು ಜಸ್ಟಿಸ್‌ ಎ ಕೆ ಮಿಶ್ರಾ ಅವರನ್ನು ಒಳಗೊಂಡ ಪೀಠವು ಈ ಪ್ರಕರಣದ ಮೇಲಿನ ತೀರ್ಪನ್ನು ಕಾದಿರಿಸಿತ್ತು.

2013ರ ನವೆಂಬರ್‌ 26ರಂದು ಸಿಬಿಐ ನ್ಯಾಯಾಲಯ ಆರುಷಿ ದಂಪತಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಆ ತೀರ್ಪನ್ನು ಪ್ರಶ್ನಿಸಿ ದಂಪತಿ ಸಲ್ಲಿಸಿದ್ದ ಮೇಲ್ಮನವಿಯು ನಾಳೆ (ಗುರುವಾರ) ವಿಚಾರಣೆಗೆ ಬರಲಿದೆ; ಅವರಿಗೆ ನ್ಯಾಯ ಸಿಕ್ಕೀತು ಎಂದು “ಏಕ್‌ ಥೀ ಆರುಷಿ’ ಕೃತಿಯ ಲೇಖಕ ಸುನೀಲ್‌ ಮೌರ್ಯ ನಿನ್ನೆ ಬುಧವಾರ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next