Advertisement

Allahabad High Court; ಉದ್ಯೋಗಕ್ಕೆ ದಂಪತಿ ಪ್ರತ್ಯೇಕ ವಾಸ ಕ್ರೌರ್ಯವಲ್ಲ

09:54 PM Sep 24, 2024 | Team Udayavani |

ಲಕ್ನೋ: ಉದ್ಯೋಗಕ್ಕಾಗಿ ದಂಪತಿ ಬೇರೆಯಾಗಿ ವಾಸ ಮಾಡುವುದು ಕ್ರೌರ್ಯವಲ್ಲ, ಇದನ್ನು ಆಧಾರವಾಗಿಟ್ಟುಕೊಂಡು ವಿಚ್ಛೇದನ ಕೊಡಲು ಸಾಧ್ಯವಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ. ‌

Advertisement

ಪತ್ನಿ ಬೇರೆ ಊರಿನಲ್ಲಿ ವಾಸಿಸುತ್ತಿರುವುದರಿಂದ ವಿಚ್ಛೇದನ ನೀಡಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಈ ತೀರ್ಪು ನೀಡಿದೆ. ಪತಿ ಮತ್ತು ಪತ್ನಿ ಇಬ್ಬರೂ ಸರ್ಕಾರಿ ಉದ್ಯೋಗದಲ್ಲಿದ್ದು, ತಮ್ಮ ಕೆಲಸದ ದೃಷ್ಟಿಯಿಂದ ಪ್ರತ್ಯೇಕ ಊರುಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದನ್ನು ಕ್ರೌರ್ಯ ಎಂದು ಕರೆಯುವ ಮೂಲಕ ವಿಚ್ಛೇದನ ನೀಡಲಾಗದು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next