Advertisement
ಒಪ್ಪೋ, ವಿವೋ ಎರಡೂ ಒಂದೇ ಕಂಪನಿಯ ಸಹೋದರರು ಎಂದು ಈಗಾಗಲೇ ತಿಳಿದಿದೆ. ಆನ್‌ಲೈನ್ ಮಾರಾಟಕ್ಕೆಂದೇ ಇದೇ ಕಂಪನಿ ರಿಯಲ್‌ಮಿ ಎಂಬ ಬ್ರಾಂಡನ್ನು ಹೊರತಂದಿರುವುದು ಸಹ ಗೊತ್ತಿರುವಂಥದ್ದೇ. ಆನ್‌ಲೈನ್ ಎಕ್ಸ್‌ಕ್ಲೂಸಿವ್‌ಗಾಗಿ ರಿಯಲ್‌ಮಿ ಬ್ರಾಂಡ್ ಸೃಷ್ಟಿ ಮಾಡಿದ್ದರೂ, ಒಪ್ಪೋ ತನ್ನದೇ ಹೆಸರಿನಲ್ಲಿ ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್‌ನಲ್ಲಿ ಮಾರಾಟ ಮಾಡಲು ಒಂದೊಂದು ಮೊಬೈಲನ್ನು ಆಗಾಗ ಬಿಡುಗಡೆ ಮಾಡುತ್ತದೆ. ಇಂಥದ್ದೇ ಒಂದು ಹೊಸ ಮೊಬೈಲ್ “ಒಪ್ಪೋ ಕೆ1′.
ಈ ಮೊಬೈಲ್ 64 ಜಿಬಿ ಆಂತರಿಕ ಸಂಗ್ರಹ ಹಾಗೂ 4 ಜಿಬಿ RAM ಹೊಂದಿದೆ. 6.4 ಇಂಚಿನ ಅಮೋಲೆಡ್ ಪರದೆ ಹೊಂದಿದೆ. ಇತ್ತೀಚಿಗೆ ಸಾಮಾನ್ಯವಾಗಿ ಎಲ್ಲ ಮೊಬೈಲ್‌ಗಳಲ್ಲೂ ಬರುತ್ತಿರುವ ನೀರಿನ ಹನಿಯಂಥ (ವಾಟರ್‌ಡ್ರಾಪ್) ವಿನ್ಯಾಸ ಈ ಪರದೆಗಿದೆ. (2340 x 1080 ಪಿಕ್ಸೆಲ್, 402 ಪಿಪಿಐ). ಅಮೋಲೆಡ್ ಪರದೆ ಇರುವುದರಿಂದ ಪರದೆಯ ಮೇಲೆ ಚಿತ್ರಗಳು, ವಿಡಿಯೋಗಳು ಬಹಳ ಶ್ರೀಮಂತವಾಗಿ ಮೂಡಿಬರುತ್ತವೆ. ಈ ಮೊಬೈಲ್ ಮಧ್ಯಮ ವರ್ಗದ ದರ ಪಟ್ಟಿಯಲ್ಲಿ ಪರದೆಯ ಮೇಲೇ ಬೆರಳಚ್ಚು ಮೂಲಕ ಮೊಬೈಲ್ ಅನ್ನು ತೆರೆಯುವ ಅವಕಾಶ ನೀಡಿದೆ. (ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್). ಶೇ. 91ರಷ್ಟು ಪರದೆ ಮತ್ತು ದೇಹದ ಅನುಪಾತ ಇದೆ. ಜೊತೆಗೆ ಇದರಲ್ಲಿ ಇನ್ನೊಂದು ಇಷ್ಟವಾದ ಸಂಗತಿಯೆಂದರೆ, ಪರದೆ ಸುಲಭದಲ್ಲಿ ಒಡೆಯದಂತೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5ರ ರಕ್ಷಣೆ ಇದಕ್ಕಿದೆ.
Related Articles
ಒಪ್ಪೋ ಕಂಪನಿ ಈ ಮೊಬೈಲ್‌ಗೆ ಕ್ವಾಲ್‌ಕಾಂ ಸ್ನಾಪ್ ಡ್ರಾಗನ್ 660 ಪ್ರೊಸೆಸರ್ ಅಳವಡಿಸಿರುವುದು ಮೆಚ್ಚುವಂಥ ವಿಷಯ. ಈ ಪ್ರೊಸೆಸರ್ ಮಧ್ಯಮ ವರ್ಗದಲ್ಲಿ ಉತ್ತಮವಾದುದು. (1.95 ಗಿ.ಹ. ಕ್ಲಾಕ್ ಸ್ಪೀಡ್) ವೇಗವಾಗಿ ಕೆಲಸ ಮಾಡುತ್ತದೆ. ಗೇಮ್‌ಗಳನ್ನು ಸರಾಗವಾಗಿ ಆಡಬಹುದು.
Advertisement
ಓರಿಯೋ 8.1ಇದು ಅಂಡ್ರಾಯ್ಡ 8.1 ಓರಿಯೋ ಕಾರ್ಯಾಚರಣೆ ವ್ಯವಸ್ಥೆ ಹೊಂದಿದೆ. ಇದಕ್ಕೆ ಒಪ್ಪೋ ವಿವೋದ ಕಲರ್ ಓಎಸ್ 5.2 ಸ್ಕಿನ್ ಇದೆ. ಎರಡು ಸಿಮ್ ಹಾಕಿಕೊಂಡು ಒಂದು ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಸೌಲಭ್ಯ ನೀಡಲಾಗಿದೆ. ಮೆಮೊರಿ ಕಾರ್ಡ್ ಬೇಕೆನ್ನುವವರಿಗೆ ಇದೂ ಒಂದು ಪ್ಲಸ್ ಪಾಯಿಂಟ್. ಬ್ಯಾಟರಿ
ಅನೇಕ ಮೊಬೈಲ್ ಮಂದಿ ಮೊಬೈಲ್ ಖರೀದಿಸುವಾಗ, ಹೆಚ್ಚು ಪ್ರಾಶಸ್ತ್ಯ ನೀಡುವುದು ಬ್ಯಾಟರಿಗೆ. “ಒಪ್ಪೋ ಕೆ1′, 3600 ಎಂಎಎಚ್ ಬ್ಯಾಟರಿಯನ್ನು ಒಳಗೊಂಡಿದೆ. ಇದರ ದೇಹ ಪ್ಲಾಸ್ಟಿಕ್‌ನದ್ದು. ದರ ಎಷ್ಟು?
ಯಾವುದೇ ಮೊಬೈಲ್ ಅನ್ನು ಆನ್‌ಲೈನ್‌ನಲ್ಲಿ ಖರೀದಿ ಸಿದರೆ, ಶೋರೂಂ ಬೆಲೆಗಿಂತ ಕಡಿಮೆಯೇ ಸಿಗುತ್ತದೆ. “ಒಪ್ಪೋ ಕೆ1′ ದರ ಆನ್‌ಲೈನ್‌ನಲ್ಲಿ 16,990 ರೂ. ನಿಗದಿಪಡಿಸಲಾಗಿದೆ. — ಕೆ.ಎಸ್. ಬನಶಂಕರ ಆರಾಧ್ಯ