Advertisement

ಶ್ರದ್ಧೆಯಿದ್ದರೆ ಎಲ್ಲ ಕೆಲಸವೂ ಶ್ರೇಷ್ಠ

04:42 AM Jun 30, 2020 | Lakshmi GovindaRaj |

ಬೆಳಗ್ಗೆ ಎದ್ದು ಯೋಗ ಮಾಡಬೇಕು ಅಂದುಕೊಳ್ಳೋರು ನೇರವಾಗಿ ಯೋಗಕ್ಕೆ ಇಳಿಯಬೇಡಿ. ಈಗ ಯಾರೂ ಯೋಗ ಹೇಳಿಕೊಡೋದಿಲ್ಲ. ಹೇಳಿಕೊಡುವ ಸಂಸ್ಥೆಗಳು ಕೂಡ ಕೊರೊನಾದಿಂದಾಗಿ ಸುಮ್ಮನಾಗಿವೆ. ಇಂಥ ಸಂದರ್ಭದಲ್ಲಿ  ನಿಮ್ಮಲ್ಲಿ ಯೋಗ ಮಾಡುವ ಉಮೇದು ಹುಟ್ಟಿತು ಅಂತಾದರೆ ಅದಕ್ಕಿಂತ ಬೇರೆ ಖುಷಿ ಬೇಕೆ? ಬೆಳಗ್ಗೆ ಎದ್ದಾಕ್ಷಣ, ನೀವು ಮಾಡಬೇಕಾದದ್ದು ಸುಖಾಸನವನ್ನು.

Advertisement

ಸಾಮಾನ್ಯವಾಗಿ ಚಕ್ಕಮಕ್ಕಳ ಹಾಕಿ ಕುಳಿತುಕೊಳ್ತೀವಲ್ಲ, ಅದೇ ಸುಖಾಸನ. ಈ  ಆಸನದಲ್ಲಿ ಕೂತು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ. ಹೀಗೇ ಎರಡು ನಿಮಿಷ ಇದ್ದರೆ ಉಸಿರಾಟ ಸರಾಗವಾಗುತ್ತದೆ. ಇಷ್ಟಾದಮೇಲೆ, ಎರಡೂ ಕಾಲನ್ನು ಚಾಚಿ. ಸೊಂಟವನ್ನು ಬಾಗಿಸಿ, ಎರಡೂ ಕೈಯನ್ನು ಕಾಲಿನತನಕ ಮುಟ್ಟಿಸುವ ಪ್ರಯತ್ನ  ಮಾಡಿ. ಇದರಿಂದ ಮಂಡಿ, ಕಾಲು, ಪಾದ, ಸೊಂಟದ ಮಾಂಸ ಖಂಡಗಳು ಕ್ರಿಯಾಶೀಲವಾಗುತ್ತವೆ. ಹಾಗೇ, ನಿಧಾನಕ್ಕೆ ಮೇಲಕ್ಕೆ ಎದ್ದು ತಾಡಾಸನದಲ್ಲಿ ನಿಂತು ಕೊಳ್ಳಿ. ಅಂದರೆ, ನೇರವಾಗಿ ನಿಲ್ಲುವುದು. ಎರಡೂ ಕೈಗಳನ್ನು ಸೊಂಟದ ಪಕ್ಕ ಇಟ್ಟುಕೊಳ್ಳಿ.

ಇದರಿಂದ ಎದೆ, ಸೊಂಟ, ಬೆನ್ನಿನ ಭಾಗದಲ್ಲಿ ರಕ್ತ ಸಂಚಾರ ಸುಗಮವಾ ಗುತ್ತದೆ. ನಂತರ ಊಧ್ವ ಹಸ್ತಾಸನ ಅಂದರೆ, ನಮಸ್ಕಾರದ ರೀತಿ ಎರಡೂ ಕೈಗಳನ್ನು ಎದೆಯ ಭಾಗದಿಂದ ಮೇಲಕ್ಕೆ ತಂದು,  ತಲೆಯಿಂದ ಒಂದು ಅಡಿಯಷ್ಟು ಮೇಲಕ್ಕೆ ಎತ್ತಿ ಇಟ್ಟುಕೊಳ್ಳಿ. ಬಲಗಾಲನ್ನು ಮುಂದೆ ಇಟ್ಟು, ಎಡಗಾಲನ್ನು ಹಿಂದೆ ಇಡಿ. ಎರಡೂ ಕೈಯನ್ನು ಮೇಲಕ್ಕೆ ಎತ್ತಿ, ಒಮ್ಮೆ ಬಲಭಾಗಕ್ಕೂ, ಇನ್ನೊಮ್ಮೆ ಎಡಭಾಗಕ್ಕೂ ತಿರುಗಿ ಸುತ್ತಿರಿ. ಇದೆಲ್ಲ  ಮುಗಿದ ಮೇಲೆ, ಕೆಲ ನಿಮಿಷಗಳ ನಂತರ ಶವಾಸನ ಹಾಕಿ.

Advertisement

Udayavani is now on Telegram. Click here to join our channel and stay updated with the latest news.

Next