Advertisement

ಕಾಪು: ಜೆಡಿಎಸ್‌ ನ ಎಲ್ಲಾ ಘಟಕಗಳು ವಿಸರ್ಜನೆ: ಯೋಗೀಶ್ ಶೆಟ್ಟಿ

07:53 PM Mar 04, 2021 | Team Udayavani |

ಕಾಪು: ಜಾತ್ಯಾತೀತ ಜನತಾದಳ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಉದ್ದೇಶವನ್ನು ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ಪಕ್ಷದ ಸೂಚನೆಯಂತೆ ಎಲ್ಲಾ ಜಿಲ್ಲೆ, ತಾಲೂಕು ಮತ್ತು ಬ್ಲಾಕ್ ಸಮಿತಿಗಳನ್ನು ವಿಸರ್ಜಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಹೇಳಿದರು.

Advertisement

ಗುರುವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಅವರ ಸೂಚನೆಯಂತೆ ಉಡುಪಿ ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕಗಳನ್ನು ಬರ್ಕಾಸ್ತುಗೊಳಿಸಲಾಗಿದೆ ಎಂದರು.

ಜೆಡಿಎಸ್ ಪಕ್ಷದ ಪುನರ್ ಸಂಘಟನೆ ಮತ್ತು ತಳಮಟ್ಟದಿಂದ ಕಾರ್ಯಕರ್ತರನ್ನು ಜೋಡಿಸುವ ಸಲುವಾಗಿ, ಮಾ. 5ರಂದು ಕಾಪು ಮಹಾಬಲ್ ಮಾಲ್ ಕಾಂಪ್ಲೆಕ್ಸ್‌ನ ಸಭಾಂಗಣದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ಮತ್ತು ಸಮಾಲೋಚನಾ ಸಭೆ ನಡೆಯಲಿದೆ. ಜನತಾ ಪರಿವಾರದ ನಾಯಕರು, ಪ್ರಸ್ತುತ ನಾಯಕರು, ಯುವ ಪೀಳಿಗೆಯ ನಾಯಕರು ಸಹಿತ ಕಾರ್ಯಕರ್ತರನ್ನು ಸಭೆಗೆ ಆಹ್ವಾನಿಸಲಾಗಿದೆ. ಮುಂದೆ ಇದೇ ಮಾದರಿಯಲ್ಲಿ ಜಿಲ್ಲೆಯಾದ್ಯಂತ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಸಭೆ ಆಯೋಜಿಸಲಾಗುವುದು ಎಂದರು.

ಇದನ್ನೂ ಓದಿ:  ಕೇರಳದಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ‘ಮೆಟ್ರೋ ಮ್ಯಾನ್’

ದಿನದಿಂದ ದಿನಕ್ಕೆ ಬೆಲೆಯೇರಿಕೆ ಹೆಚ್ಚುತ್ತಿದ್ದು ಅಗತ್ಯವಸ್ತುಗಳ ಖರೀದಿಗೆ ಜನ ಪರದಾಡುವಂತಾಗಿದೆ. ಹಿಂದೆಲ್ಲಾ ಅಗತ್ಯವಸ್ತುಗಳ ಬೆಲೆಯೇರಿಕೆಯಾದೊಡನೆ ಬೀದಿಗೆ ಬಂದ ಬಿಜೆಪಿ ಜನಪ್ರತಿನಿಧಿಗಳು, ನಾಯಕರು ಮತ್ತು ಕಾರ್ಯಕರ್ತರರು ಈಗ ಕಾಣೆಯಾಗಿದ್ದಾರೆ. ಜನರು ಕೂಡಾ ಅಂಧ ಭಕ್ತಿಯ ಸುಳಿಯೊಳಗೆ ಸಿಲುಕಿ ಬೆಲೆಯೇರಿಕೆ ಬಗ್ಗೆ ಮಾತನಾಡದೇ ಕುರುಡು ಜಾಣ್ಮೆ ಮೆರೆಯುತ್ತಿದ್ದಾರೆ. ಜನಸಾಮಾನ್ಯರು ಇದರಿಂದಾಗಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ಪಕ್ಷ ಸಂಪೂರ್ಣವಾಗಿ ಸಂಘಟನಾತ್ಮಕವಾಗಿ ಮರು ಜೋಡಣೆಯಾದ ಬಳಿಕ ಜನರ ಪರವಾಗಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದರು.

Advertisement

ಜೆಡಿಎಸ್ ಮುಖಂಡರಾದ ಸುಧಾಕರ ಶೆಟ್ಟಿ ಹೆಜಮಾಡಿ, ಜಯ ಕುಮಾರ್ ಪರ್ಕಳ, ಕೆ. ವಾಸುದೇವ ರಾವ್, ಶೇಖರ ಕೋಟ್ಯಾನ್, ಇಸ್ಮಾಯಿಲ್ ಪಡುಬಿದ್ರಿ, ಇಕ್ಬಾಲ್ ಆತ್ರಾಡಿ, ಎಸ್.ಪಿ. ಬರ್ಬೋಜ ಮುದರಂಗಡಿ ಮೊದಲಾದವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:  ತಮಿಳರ ಮತಗಳು ಮಾರಾಟಕ್ಕಿಲ್ಲ : ಕಮಲ್ ಹಾಸನ್

Advertisement

Udayavani is now on Telegram. Click here to join our channel and stay updated with the latest news.

Next