Advertisement

ಕೇಸರಿ ರಾಷ್ಟ್ರಧ್ವಜದ ಬಗ್ಗೆ ಹೇಳಿಕೆ ಕೊಡುವವರೆಲ್ಲಾ ರಾಷ್ಟ್ರ ದ್ರೋಹಿಗಳು: ಡಿ.ಕೆ.ಶಿವಕುಮಾರ್

05:02 PM Mar 20, 2022 | Team Udayavani |

ಮೈಸೂರು: ಕೇಸರಿ ರಾಷ್ಟ್ರ ಧ್ವಜ ಆಗಬೇಕು ಎಂಬ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹಿನ್ನೆಲೆ ಏನು ಅಂತ ನನಗೆ ಗೊತ್ತಿಲ್ಲ. ಅವರು ಬಿಜೆಪಿಯವರೋ, ಆರ್‌ಎಸ್‌ಎಸ್‌ನವರೋ ಗೊತ್ತಿಲ್ಲ. ಒಬ್ಬ ಮಂತ್ರಿ ಹೇಳಿಕೆ ಕೊಟ್ಟಾಗ ನಾವೆಲ್ಲಾ ಸದನದಲ್ಲಿ ಪ್ರತಿಭಟಿಸಿದೆವು. ಇದಕ್ಕೆ ಅವರ ಪಕ್ಷದ ರಾಷ್ರೀಯ ಅಧ್ಯಕ್ಷ ನಡ್ಡಾ ಪ್ರತಿಕ್ರಿಯೆ ನೀಡಿದ್ದರು. ಇದಾದ ಮೇಲೆ ಕಲ್ಲಡ್ಕ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಇಂತಹ ಹೇಳಿಕೆ ಕೊಡುವ ಅವರೆಲ್ಲಾ ರಾಷ್ಟ್ರ ದ್ರೋಹಿಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

Advertisement

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರ ಸಿದ್ದಾಂತದ ಮೇಲೆ ಸಾಗುತ್ತಿದೆ.ನಾವು ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಜನರ ಸಮಸ್ಯೆ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ. ಇಂದು ಕಬ್ಬಿಣದ ಬೆಲೆ ಟನ್‌ಗೆ 1 ಲಕ್ಷ, ಸಿಮೆಂಟ್ ದರ 450 ರೂ ಆಗಿದೆ. ಕಂಟ್ರಾಕ್ಟರ್ಸ್, ಬಿಲ್ಡರ್ಸ್‌ಗೆಲ್ಲಾ ಬಿಲ್ ಬರುತ್ತದೆ, ಆದರೆ ಸಾಮನ್ಯ ಜನ ಮನೆ ಕಟ್ಟುವುದು ಹೇಗೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಪ್ರತಿ ತಾಲೂಕಿನಲ್ಲೂ ‌ಮಹಿಳಾ ಸಹಕಾರಿ ಸಂಘ ಪ್ರಾರಂಭ; ಸರ್ಕಾರದಿಂದಲೇ ಬಂಡವಾಳ:ಸಿಎಂ ಬೊಮ್ಮಾಯಿ‌

ಅತಿ ಸಂತೋಷವಾಗಿರುವ ದೇಶಗಳಲ್ಲಿ ನಮ್ಮ ದೇಶ 144 ಸ್ಥಾನದಲ್ಲಿದೆ. ಜನತೆ ಎಲ್ಲಿ ಖುಷಿಯಾಗಿದ್ದಾರೆ? ನಮ್ಮ ಶೋಭಕ್ಕ ನೋಡಿದರೆ ಏನೇನೋ ಹೇಳಿಕೆ ಕೊಟ್ಟಿದ್ದಾರೆ. ಮೊದಲು ರೈತರಿಗೆ ಬೆಂಬಲ‌ ಬೆಲೆ ಕೊಡಕ್ಕ. ರಾಗಿ ಖರೀದಿ ಮಾಡಿಸು, ಮೊದಲು ರೈತರನ್ನು ಉಳಿಸಕ್ಕ‌ ಎಂದು ಶೋಭ ಕರಂದ್ಲಾಜೆ ವಿರುದ್ದ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next