ಬೆಳ್ತಂಗಡಿ : ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಕಾಲಕ್ಕನುಗುಣವಾಗಿ ಧರ್ಮಗಳು ಒಂದು ಚೌಕಟ್ಟನ್ನು ಕಾಪಾಡಿಕೊಂಡು ಬದಲಾಗಬೇಕಾಗಿದೆ. ಸಮಾಜದ ಸರ್ವ ಜಾತಿ, ಸಮುದಾಯಗಳ ಜನರನ್ನು ಸೌಹಾರ್ದಯುತವಾಗಿ ಒಗ್ಗೂಡಿಸಿಕೊಂಡು ಸಾಗಿದಾಗ ಮಾತ್ರ ದೇವಾಲಯಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಿ. ಯದುಪತಿ ಗೌಡ ಹೇಳಿದರು.
ಅವರು ಗುರುವಾರ ರಾತ್ರಿ ಬಂದಾರು ಸಮೀಪದ ಕುರಾಯ ಶ್ರೀ ಸದಾಶಿವ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾಷ್ಟಬಂಧ
ಬ್ರಹ್ಮಕಲಶಾಭಿಷೇಕ ಮಹೋತ್ಸವ ಮತ್ತು ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಉಪ್ಪಿನಂಗಡಿಯ ಹಿರಿಯ ಉದ್ಯಮಿ ಸಾಹುಕಾರ ಯು. ವೆಂಕಟೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜ, ಗೌರವಾಧ್ಯಕ್ಷ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ, ಮಾಜಿ ಶಾಸಕ ಕೆ ಪ್ರಭಾಕರ ಬಂಗೇರ, ಮಾಜಿ ಜಿ. ಪಂ. ಸದಸ್ಯ ಬಿ. ರಾಜಶೇಖರ್ ಅಜ್ರಿ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ, ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕುಕ್ಕಪ್ಪ ಗೌಡ, ಸಾವಯವ ಕೃಷಿಕ ದಿನಕರ ಗೌಡ ಕಡಮಾಜೆ, ಗ್ರಾ.ಪಂ. ಸದಸ್ಯೆ ರೂಪಾ ವಿಶ್ವಕರ್ಮ, ತಾ.ಪಂ. ಮಾಜಿ ಸದಸ್ಯೆ ಗೀತಾ ರಾಮಣ್ಣ ಗೌಡ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ಗೌಡ, ಜತೆ ಕಾರ್ಯದರ್ಶಿ ಶಿವಣ್ಣ ಗೌಡ ಕುಂಬುಡಂಗೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ಹೊಳ್ಳ, ಸಂಚಾಲಕ ವೆಂಕಟ್ರಮಣ ಗೌಡ ಬಾಳೆಹಿತ್ತಿಲು, ಭಜನಾ ಸಮಿತಿ ಸಹಸಂಚಾಲಕ ಧನಂಜಯ ಗೌಡ ಪಿಲಿಂಗುಡೇಲು, ಚಪ್ಪರ ಸಮಿತಿ ಸಂಚಾಲಕ ಕೊರಗಪ್ಪ ಮಾಲೆಸರ, ಕಲಶ ಸಮಿತಿ ಸಂಚಾಲಕ ಸೂರ್ಯಪ್ರಕಾಶ ನೆಡ್ಲ, ಸಹಸಂಚಾಲಕ ಗೋಪಾಲಕೃಷ್ಣ ನೆಡ್ಲ ಉಪಸ್ಥಿತರಿದ್ದರು.
ಕುಂಟಾಲಪಲ್ಕೆ ಸ. ಹಿ. ಪ್ರಾ. ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಮಾಚಾರ್ ಮತ್ತು ಮೈರೋಳ್ತಡ್ಕ ಸ. ಹಿ. ಪ್ರಾ. ಶಾಲಾ ಶಿಕ್ಷಕ ಮಾಧವ ನಿರೂಪಿಸಿ, ಬಂದಾರು ಗ್ರಾ.ಪಂ.ಅಧ್ಯಕ್ಷ ಉದಯ ಕುಮಾರ್ ಬಿ.ಕೆ. ಸ್ವಾಗತಿಸಿ, ಕೊಪ್ಪದಡ್ಕ ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯದರ್ಶಿ ಭವ್ಯಾ ವಂದಿಸಿದರು.