Advertisement

ಎಲ್ಲ ಸಮಸ್ಯೆಗೂ ಪರಿಹಾರವಿದೆ

12:35 AM Jan 20, 2019 | Team Udayavani |

ಮುಂಬಯಿ: ದೇಶದಲ್ಲಿ ಸಿನಿಮಾ ಮತ್ತು ಸಮಾಜವು ಪರಸ್ಪರ ಕನ್ನಡಿಯಾಗಿದೆ. ಸಿನಿಮಾ ರೀತಿಯಲ್ಲೇ ಭಾರತ ಕೂಡ ಕಾಲಕಾಲಕ್ಕೆ ಬದಲಾಗುತ್ತಿದೆ ಎಂದು ಪ್ರಧಾನಿ ಮೋದಿ ಭಾರತೀಯ ಸಿನಿಮಾದ ರಾಷ್ಟ್ರೀಯ ಮ್ಯೂಸಿಯಂ ಉದ್ಘಾಟಿಸಿ ಹೇಳಿದ್ದಾರೆ. 

Advertisement

ದೇಶ ಬದಲಾಗುತ್ತಿದ್ದು, ಸ್ವತಃ ಪರಿಹಾರ ಕಂಡುಕೊಳ್ಳುತ್ತಿದೆ. ಲಕ್ಷಾಂತರ ಸಮಸ್ಯೆಗಳಿದ್ದರೆ, ಕೋಟ್ಯಂತರ ಪರಿಹಾರಗಳೂ ಇವೆ. ಭಾರತದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿನಿಮಾ ಕೊಡುಗೆ ನೀಡುತ್ತದೆ. ಪ್ರವಾಸೋದ್ಯಮವು ಅತ್ಯಂತ ಬಡವನಿಗೂ ಆದಾಯ ತಂದುಕೊಡುತ್ತದೆ. ಒಬ್ಬ ಚಹಾ ಮಾರಾಟಗಾರ ನಿಗೂ ಅದರಿಂದ ಗಳಿಕೆಯಾಗುತ್ತದೆ ಎಂದಿದ್ದಾರೆ. ಸಿನಿಮೋದ್ಯಮವನ್ನು ಬಾಧಿಸುತ್ತಿರುವ ಪೈರಸಿ, ಕ್ಯಾಮ್‌ಕಾರ್ಡಿಂಗ್‌ ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೋದಿ ಭರವಸೆ ನೀಡಿದ್ದಾರೆ. 

ಶೂಟಿಂಗ್‌, ಇತರ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಶೀಘ್ರ ಚಾಲನೆಗೊಳ್ಳಲಿದೆ. ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಶೃಂಗ ನಡೆಯುವಂತೆ ಭಾರತದಲ್ಲಿ ವಿಶ್ವ ಜಾಗತಿಕ ಸಿನಿಮಾ ಸಮ್ಮೇಳನ ನಡೆಯಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮೋದಿ “ಉರಿ’ ಸಿನಿಮಾದ ಶೈಲಿಯಲ್ಲಿ “ಹೌ ಈಸ್‌ ದಿ ಜೋಷ್‌’ ಎಂದು ಪ್ರಶ್ನಿಸಿದ್ದೂ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next