Advertisement
ಪಾಲಿಕೆಯ 6ರೆಫರಲ್ ಹಾಗೂ 26ಪಾಲಿಕೆ ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸುವ ಎಲ್ಲ ಹೆಣ್ಣು ಮಕ್ಕಳಿಗೆ ಮಹಾಲಕ್ಷ್ಮೀ ಯೋಜನೆಯಡಿ ಒಂದು ಲಕ್ಷ ರೂ. ಬಾಂಡ್ ವಿತರಿಸುವ ಯೋಜನೆಗೆ ನಿಯಮ ರೂಪಿಸಲು ಪಾಲಿಕೆ ಮುಂದಾಗಿದೆ. ಮುಂದಿನ ಕೌನ್ಸಿಲ್ ಸಭೆಯಲ್ಲಿ ನಿಯಮಗಳಿಗೆ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆ ಇದೆ.
Related Articles
Advertisement
ಫಲಾನುಭವಿಗಳಾಗಲು ಇರುವ ನಿಬಂಧನೆಗಳು: ದೇಶದ ಯಾವುದೇ ರಾಜ್ಯದವರಾಗಿದ್ದರೂ ಈ ಸೌಲಭ್ಯ ಸಿಗಲಿದೆ. ಸಹಜ ಹೆರಿಗೆ ಆಗಿದ್ದರೆ ಪಾಲಿ ಕೆಯ ಆಸ್ಪತ್ರೆಯಲ್ಲಿ ಎರಡು ದಿನ ಹಾಗೂ ಶಸ್ತ್ರಚಿಕಿತ್ಸೆ ಆಗಿದ್ದಲ್ಲಿ ಏಳು ದಿನಗಳ ಕಾಲ ವೈದ್ಯರಿಂದ ದೃಢೀ ಕರಣ ಪತ್ರ ಪಡೆದುಕೊಳ್ಳಬೇಕು.
ಸೌಲಭ್ಯ ಪಡೆಯಲು ಮಗುವಿನ ಜನನ ಪತ್ರ, ತಾಯಿ ಕಾರ್ಡ್, ಆಧಾರ್‌ಕಾರ್ಡ್, ಗುರುತಿನ ಚೀಟಿ ಹಾಗೂ ಮಗುವಿನ ಆಧಾರ್‌ಕಾರ್ಡ್ ಕಡ್ಡಾಯ. ಮಗುವಿಗೆ ಮೂರು ವರ್ಷ ತುಂಬುತ್ತಿದ್ದಂತೆ ಕಡ್ಡಾಯವಾಗಿ ಅಂಗನವಾಡಿ ಅಥವಾ ಶಾಲೆಗೆ ಸೇರಿಸಬೇಕು. ಮಹಾಲಕ್ಷ್ಮೀ ಯೋಜನೆಯು ಈ ವರ್ಷದ ಮಾರ್ಚ್ 31ರವರೆಗೆ ಜಾರಿಯಲ್ಲಿರಲಿದೆ. ಈ ಯೋಜನೆಯನ್ನು ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದಾಯ ಪ್ರಮಾಣ ಬೇಡ: ಪಾಲಿಕೆಯ ಮಹಾಲಕ್ಷ್ಮೀ ಯೋಜನೆ ಪೋಷಕರ ಆರ್ಥಿಕತೆ ಪರಿಗಣಿಸುವುದಿಲ್ಲ. ಪಾಲಿಕೆಯ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದರೆ ಈ ಸೌಲಭ್ಯ ಪಡೆದುಕೊಳ್ಳ ಬಹುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ನಿರ್ಮಲಾ ಬುಗ್ಗಿ ತಿಳಿಸಿದರು.