Advertisement

ಎಲ್ಲದ್ದಕ್ಕೂ ರೈತ, ಕಾರ್ಮಿಕರ ಸಂಘಟಿತ ಹೋರಾಟವೇ ಪರಿಹಾರ

06:42 AM May 02, 2019 | Lakshmi GovindaRaj |

ಹುಣಸೂರು: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಬುಧವಾರ ನಗರದಲ್ಲಿ ಸಿಐಟಿಯು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಜಾಗೃತಿ ಜಾಥಾ ನಡೆಸಿ, ಸಾರ್ವಜನಿಕರ ಗಮನ ಸೆಳೆದವು.

Advertisement

ನಗರದ ಕಲ್ಕುಣಿಕೆ ವೃತ್ತದಿಂದ ಆರಂಭಗೊಂಡ ರೈತ-ಕಾರ್ಮಿಕರ ಮೆರೆವಣಿಗೆಯು ಹಳೇ ಸೇತುವೆ, ರೋಟರಿ ವೃತ್ತ, ಕಲ್ಪತರು ವೃತ್ತದ ಮೂಲಕ ತೆರಳಿ ಮುನೇಶ್ವರ ಕಾವಲ್‌ ಮೈದಾನದಲ್ಲಿ ಸಮಾವೇಶಗೊಂಡಿತು.

ಬೇಡಿಕೆ ಈಡೇರಿಸಿ: ಮೆರವಣಿಗೆ ಉದ್ದಕ್ಕೂ ಕಾರ್ಮಿಕ ದಿನಾಚರಣೆ ಜಿಂದಾಬಾದ್‌, ರೈತ-ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ಗುತ್ತಿಗೆ ಪದ್ಧತಿ ರದ್ದಾಗಲಿ, ಕನಿಷ್ಠ ವೇತನ 18 ಸಾವಿರ ರೂ. ನಿಗದಿಗೊಳಿಸಬೇಕು. ಡಾ.ಸ್ವಾಮಿನಾಥನ್‌ ಆಯೋಗದ ವರದಿ ಜಾರಿಯಾಗಲಿ ಎಂಬಿತ್ಯಾದಿ ಘೋಷಣೆ ಮೊಳಗಿಸಲಾಯಿತು.

ಹೋರಾಟದ ಫ‌ಲ: ಮುನೇಶ್ವರ ಕಾವಲ್‌ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಮಿಕರ ಸಭೆಯಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ಮಾತನಾಡಿ, 1886ರ ಮೇ 1ರಂದು ಎಂಟು ಗಂಟೆಗಳ ಕೆಲಸದ ಅವಧಿಗಾಗಿ ಹಾಗೂ ಸಂಘ ಕಟ್ಟಿಕೊಳ್ಳುವ ಹಕ್ಕಿಗಾಗಿ ನಡೆದ ಹೋರಾಟದ ಫಲವಾಗಿ ಇಂದು ವಿಶ್ವಾದ್ಯಂತ‌ ಕಾರ್ಮಿಕರು ಈ ದಿನವನ್ನು ಕಾರ್ಮಿಕ ದಿನವಾಗಿ ಆಚರಿಸುತ್ತಿದ್ದಾರೆ ಎಂದು ಸ್ಮರಿಸಿದರು.

ಮಾಲೀಕರ ಪರ ಕಾನೂನು: ಹಿಂದೆ ನಿರಂತರ ಹೋರಾಟದ ಫಲವಾಗಿ ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಯಿತು. ಆದರೆ, ಇಂದು ಕಾರ್ಮಿಕರ ಹಿತಾಸಕ್ತಿಯನ್ನು ಕಾಯಬೇಕಾದ ಸರ್ಕಾರಗಳೇ ಶ್ರೀಮಂತರ ಪರವಾಗಿ ನಿಂತು ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರ ತಿದ್ದುಪಡಿ ಮಾಡುತ್ತಿವೆ.

Advertisement

ಕಾರ್ಮಿಕರಿಗೆ ಕೆಲಸದ ಭದ್ರತೆಯನ್ನು ನೀಡಬೇಕಾದ ಸರ್ಕಾರ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತಂದು ಕಾರ್ಮಿಕರನ್ನು ಮಾಲೀಕರ ಗುಲಾಮರನ್ನಾಗಿಸಿದೆ. ಅಲ್ಲದೇ ದುಡಿದು ತಿನ್ನುವ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನಿಗದಿ ಮಾಡದೆ ಮಾಲೀಕರನ್ನು ಕೊಬ್ಬಿಸುತ್ತಿದ್ದಾರೆ.

ಮತ್ತೂಂದೆಡೆ ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ಇಲ್ಲದೆ ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ. ಎಲ್ಲದ್ದಕ್ಕೂ ರೈತ-ಕಾರ್ಮಿಕರ ಸಂಘಟಿತ ಹೋರಾಟವೇ ಪರಿಹಾರ ಎಂದರು.

ಸ್ಥಳೀಯ ಸಮಿತಿ ಕಾರ್ಯದರ್ಶಿ ಜಗದೀಶ್‌ ಸೂರ್ಯ, ಸಿಐಟಿಯು ಜಿಲ್ಲಾ ಮುಖಂಡರಾದ ವಿ.ಬಸವರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚಿಕ್ಕಣ್ಣೇಗೌಡ ಮಾತನಾಡಿದರು.

ಜಾಥಾದಲ್ಲಿ ಹುಣಸೂರು ಪ್ಲೆ„ವುಡ್‌ ಕಾರ್ಖಾನೆಯ ಕಾರ್ಮಿಕ ಮುಖಂಡರಾದ ಶ್ರೀಪತಿಗೌಡ, ಅಶೋಕ, ಜಗದೀಶ್‌, ರಾಜೇಂದ್ರ, ಲಕ್ಷ್ಮೀಕಾಂತ, ಮಾರಿಸ್‌ ಕಾರ್ಖಾನೆಯ ಕಾರ್ಮಿಕ ಮುಖಂಡರಾದ ಹಂಸ,

ಗ್ರಾಮ ಪಂಚಾಯ್ತಿ ನೌಕರ ಸಂಘದ ಮುಖಂಡರಾದ ದಿನೇಶ್‌, ತ್ಯಾಗರಾಜ್‌, ರಾಮಚಂದ್ರರೆಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘದ ಲೋಕೇಶ್‌, ಸಿದ್ದಯ್ಯ, ಸುಬ್ಬೇಗೌಡ, ಯುವ ಮುಖಂಡ ಮಹೇಶ್‌ಕುಮಾರ್‌, ಮನೋಜ್‌ ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next