Advertisement
ಸಿಆರ್‌ಝಡ್‌ನಲ್ಲಿ ಮರಳು ತೆಗೆಯಲು ಉಡುಪಿ- 26, ಬ್ರಹ್ಮಾವರ – 84, ಕುಂದಾಪುರ – 18 ಹಾಗೂ ಬೈಂದೂರು-5 ಹೀಗೆ ಒಟ್ಟು 133 ಪರ್ಮಿಟ್ ಕೊಡಲಾಗುವುದು. ಇನ್ನೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 407 ಟೆಂಪೋ, ಟಿಪ್ಪರ್‌ಗಳಲ್ಲಿ ಮರಳು ಸಾಗಾಟಕ್ಕೆ ಅವಕಾಶವಿದೆ. ಹೊರಜಿಲ್ಲೆಗಳಿಗೆ ದೊಡ್ಡ ಲಾರಿಯಲ್ಲಿ ಮರಳು ಸಾಗಾಟವಾಗುವ ಕಾರಣ ಅಂತಹ ಲಾರಿಗಳಲ್ಲಿ ಮರಳು ಸಾಗಿಸುವುದನ್ನು ನಿರ್ಬಂಧಿಸಲಾಗುವುದು. ನಾನ್‌ಸಿಆರ್‌ಝಡ್ ಮರಳುಗಾರಿಕೆ ಕುರಿತು ಸದನ ಉಪಸಮಿತಿ ಶೀಘ್ರವೇ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ ಸಚಿವರು, ಯಾವುದೇ ಖಾಸಗಿ ಲಾಬಿಗೆ ಮಣಿಯದೆ ಜನಪರವಾಗಿ ನರ್ಮ್ ಬಸ್ ಸೇವೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು.
ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝಡ್) ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಡ್ಡಿಯಾಗಿರುವ ಒಟ್ಟು 28 ಮರಳು ದಿಬ್ಬಗಳನ್ನು ಗುರುತಿಸಿದ್ದು, ಈ ದಿಬ್ಬಗಳಲ್ಲಿನ ಮರಳನ್ನು ಮಾನವ ಶ್ರಮದಿಂದ ತೆಗೆಯಲು ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರ ಅನುಮೋದನೆ ನೀಡಿದೆ. ಪಾರಂಪರಿಕ ಮರಳನ್ನು ತೆಗೆಯುವ ಕಸುಬಿನಲ್ಲಿ ತೊಡಗಿರುವವರು ಅರ್ಜಿ ಸಲ್ಲಿಸಬಹುದು. ಆ. 27ರೊಳಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಯವರ ಕಚೇರಿಯಿಂದ ನಮೂನೆ ಗಳನ್ನು ಪಡೆದು ಸಲ್ಲಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.