Advertisement

ಎಲ್ಲ ಪ್ರಕರಣಗಳಿಗೂ ಮುಂಬೈನಿಂದ ಬಂದವರ ನಂಟು

05:38 AM May 23, 2020 | Team Udayavani |

ಹೊನ್ನಾವರ: ಮುಂಬೈನಿಂದ ಜಿಲ್ಲೆಗೆ ಬಂದು ಕ್ವಾರಂಟೈನ್‌ಗೆ ಒಳಗಾದವರಲ್ಲಿ ಶುಕ್ರವಾರ ಇನ್ನೊಂದು ಸೋಂಕಿನ ಪ್ರಕರಣ ವರದಿಯಾಗಿದೆ. ಹಾಸ್ಟೆಲ್‌ ಕ್ವಾರಂಟೈನ್‌ನಲ್ಲಿ ಇರುವ ಐವರಿಗೆ ಸೋಂಕು ಬಂದಿದ್ದು ಅವರು ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುತ್ತಿದ್ದಾರೆ.

Advertisement

ಹೊಟೇಲ್‌ ಕ್ವಾರಂಟೈನ್‌ನಲ್ಲಿದ್ದ ಮುಂಬೈನಿಂದ ಬಂದ ಮಂಕಿ ಮೂಲದ 44 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಒಂದೇ ಕೋಣೆಯಲ್ಲಿ ಇದ್ದ ಪತ್ನಿ, ಮಗನ ವರದಿ ಬರಬೇಕಾಗಿದೆ. ಇವರು ಉಳಿದುಕೊಂಡಿದ್ದ ಲಾಡ್ಜ್ನಲ್ಲಿ ಒಟ್ಟೂ 43 ಜನ ಇದ್ದಾರೆ. ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಈ ಲಾಡ್ಜ್ನ್ನು ಸೀಲ್‌ಡೌನ್‌ ಮಾಡಲಾಗಿದೆ. ಪಕ್ಕದಲ್ಲಿರುವ ಇನ್ನೆರಡು ಮೂರು ಹೋಟೆಲ್‌, ಬ್ಯಾಂಕ್‌, ಎಟಿಎಂ, ಗೋಡೌನ್‌ ಸಹಿತ 200 ಮೀಟರ್‌ ಸುತ್ತಳತೆ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಿದ್ದು ಇಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಐವರು ಸೋಂಕಿತರ ಹೊರತಾಗಿ ಇನ್ನೂ ಹಾಸ್ಟೆಲ್‌ನಲ್ಲಿ 39ಜನ ಇದ್ದಾರೆ. ಅವರ ವರದಿ ಬರಬೇಕಿದೆ. ಹಾಸ್ಟೆಲ್‌ ಮತ್ತು ಹೋಟೇಲ್‌ ಸೇರಿ ಒಟ್ಟೂ 271 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದ್ದು ಅದರಲ್ಲಿ 140 ಜನರ ವರದಿ ಬಂದಿದ್ದು 6 ಜನರ ಹೊರತಾಗಿ ಉಳಿದವರದು ನೆಗೆಟಿವ್‌ ಬಂದಿದೆ. ಇನ್ನೂ 131 ಜನರ ವರದಿ ಬರಬೇಕಾಗಿದೆ. ರಾಜ್ಯದ ಸುಮಾರು ಎಲ್ಲ ಜಿಲ್ಲೆಗಳಲ್ಲಿ ಸೋಂಕು ತಗಲಿರುವುದರಿಂದ ಗಂಟಲು ದ್ರವದ ವರದಿ ಬರಲು ವಿಳಂಬವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next