Advertisement

ನೇಪಾಲದಿಂದ ಎಲ್ಲ ಅಮರನಾಥ ಯಾತ್ರಿಕರ ಸುರಕ್ಷಿತ ಸ್ಥಳಾಂತರ

05:35 PM Jul 07, 2018 | udayavani editorial |

ಕಾಠ್ಮಂಡು : ಟಿಬೆಟ್‌ನಲ್ಲಿನ ಕೈಲಾಸ ಮಾನಸ ಸರೋವರ ದಿಂದ ಮರಳುವಾಗ ಪ್ರತಿಕೂಲ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ  ಎಲ್ಲ 1,430 ಭಾರತೀಯ ಯಾತ್ರಿಕರನ್ನು ವಿಮಾನ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. 

Advertisement

ಕೊನೇ ತಂಡದಲ್ಲಿದ್ದ 160 ಯಾತ್ರಿಕರನ್ನು ಇಂದು ಹಿಲ್ಸಾ ಮತ್ತು ಸಿಮಿಕೋಟ್‌ ಜಿಲ್ಲೆಗಳಿಂದ ನೇಪಾಲ್‌ಗ‌ಂಜ್‌ ಮತ್ತು ಸುರಖೇತ್‌ಗೆ ಕರೆತರಲಾಯಿತು. ಈ ಎರಡು ಪಟ್ಟಣಗಳು ಭಾರತೀಯ ಗಡಿಗೆ ಸನಿಹದಲ್ಲಿದ್ದು ಇಲ್ಲಿ ಯಾತ್ರಿಕರಿಗೆ ಉತ್ತಮ ವೈದ್ಯಕೀಯ ಮತ್ತು ಮೂಲ ಸೌಕರ್ಯಗಳು ಇವೆ ಎಂದು ವಕ್ತಾರರು ತಿಳಿಸಿದ್ದಾರೆ. 

ಭಾರತೀಯ ದೂತಾವಾಸದ ತಂಡವು ಈ ಎರಡು ಪಟ್ಟಣಗಳಲ್ಲಿ ಇದ್ದು ಯಾತ್ರಿಕರು ಹಾಗೂ ಅವರಿಗೆ ಅವಶ್ಯವಿರುವ ಸೌಕರ್ಯಗಳ ಬಗ್ಗೆ ನಿಗಾ ವಹಿಸುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next