ಜೇವರ್ಗಿ: ಕಳೆದ ಐದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸುಭದ್ರ ಸರ್ಕಾರ ನೀಡಿದ ಸಿದ್ದರಾಮಯ್ಯ ನುಡಿದಂತೆ ನಡೆದು ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ರಾಜ್ಯವನ್ನು ಅಭಿವೃಥದತ್ತ ಕೊಂಡೊಯ್ದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ| ಅಜಯಸಿಂಗ್ ಹೇಳಿದರು.
ಪಟ್ಟಣದ ಕಟ್ಟಿಸಂಗಾವಿ ಹತ್ತಿರದ ಸರ್ಕಿಟ್ ಹೌಸ್ ಆವರಣದಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಹೀಗೆ ದೀನ, ದಲಿತ, ಹಿಂದುಳಿದ ವರ್ಗದವರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಠಾನಕ್ಕೆ ತಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮೇಲಿನ ಅಭಿಮಾನ ಪ್ರದರ್ಶಿಸಲು ಬರುವ ಆ.3ರಂದು ದಾವಣಗೆರೆ ನಗರದಲ್ಲಿ ಆಯೋಜಿಸಲಾಗಿರುವ ಸಿದ್ಧರಾಮೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಪ್ರತಿ ಹಳ್ಳಿಯಿಂದ ವಾಹನ ವ್ಯವಸ್ಥೆ ಮಾಡಿಕೊಂಡು ಬರಬೇಕು ಎಂದರು.
ತಾಲೂಕಿನಿಂದ ಕನಿಷ್ಟ ಐದು ಸಾವಿರ ಜನರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಕಾರ್ಯಕ್ರಮ ಯಶಸ್ವಿಗೆ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪಟೇಲ ಇಜೇರಿ, ಕಾಶಿಂ ಪಟೇಲ ಮುದಬಾಳ, ರಾಜಶೇಖರ ಸೀರಿ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ಗೌಡಪ್ಪಗೌಡ ಆಂದೋಲಾ, ಸಂಗನಗೌಡ ಗುಳಾಳ, ಬೈಲಪ್ಪ ನೆಲೋಗಿ, ಶೌಕತ್ ಅಲಿ ಆಲೂರ, ಮಲ್ಲಿಕಾರ್ಜುನ ಸಾಹು ಆಲೂರ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಮುನ್ನಾ ಪಟೇಲ ಯಾಳವಾರ, ಸಕ್ರೆಪ್ಪಗೌಡ ಹರನೂರ, ವಿಜಯಕುಮಾರ ಪಾಟೀಲ
ಕಲ್ಲಹಂಗರಗಾ, ಮೈಲಾರಿ ಬಣಮಿ, ನಾಗರಾಜ ಹಾಲಗೂರ, ಚಂದ್ರಶೇಖರ ನೇರಡಗಿ, ಲಿಂಗರಾಜ ಮಾಸ್ಟರ್, ರಾಜಶೇಖರ ಮುತ್ತಕೋಡ, ಮೈಲಾರಿ ಗುಡೂರ, ವಿರುಪಾಕ್ಷಯ್ಯಸ್ವಾಮಿ ನಂದಿಕೋಲಮಠ, ವಿಶ್ವರಾಧ್ಯ ಗಂವ್ಹಾರ, ಅಬ್ದುಲ್ ರಜಾಕ ಮನಿಯಾರ, ಮಹಿಬೂಬ್ ಮನಿಯಾರ ಮಳ್ಳಿ, ಮರೆಪ್ಪ ಸರಡಗಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.