Advertisement

ಯೋಜನೆಗಳೆಲ್ಲವೂ ಉಡುಗೊರೆಯಲ್ಲ: ಡಿಎಂಕೆ

10:02 PM Aug 20, 2022 | Team Udayavani |

ನವದೆಹಲಿ: ಅಭಿವೃದ್ಧಿ ಕಾರ್ಯಗಳನ್ನು ಕೆಳವರ್ಗದ ಜನರ ಅಭಿವೃದ್ಧಿಗಾಗಿ ಮಾಡಲಾಗುತ್ತದೆಯೇ ಹೊರತು ಅದನ್ನು ಉಡುಗೊರೆಯ ರೂಪದಲ್ಲಿ ನೀಡಲಾಗುವುದಿಲ್ಲ ಎಂದು ತಮಿಳುನಾಡಿನ ಡಿಎಂಕೆ ಪಕ್ಷವು ಸುಪ್ರೀಂ ಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ.

Advertisement

ಪಕ್ಷಗಳು ಚುನಾವಣೆ ಸಮಯದಲ್ಲಿ ಜನರಿಗೆ ಉಚಿತ ಉಡುಗೊರೆಗಳ ಆಶ್ವಾಸನೆ ನೀಡದಂತೆ ತಡೆಯಬೇಕು ಎಂದು ಸುಪ್ರೀಂಗೆ ವಕೀಲ ಅಶ್ವಿ‌ನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿ ವಿಚಾರದಲ್ಲಿ ಡಿಎಂಕೆ ಈ ಮಾಹಿತಿ ಕೊಟ್ಟಿದೆ.

“ಸರ್ಕಾರ ನೀಡುವ ಉಚಿತ ಸೌಲಭ್ಯಗಳನ್ನೆಲ್ಲ ಉಚಿತ ಉಡುಗೊರೆ ಎಂದು ಪರಿಗಣಿಸುವುದಾದರೆ ಉಚಿತ ಶಿಕ್ಷಣ, ಆರೋಗ್ಯವನ್ನೂ ಹಾಗೆಯೇ ಪರಿಗಣಿಸಬೇಕಾಗುತ್ತದೆ.

ಈ ಸೌಲಭ್ಯಗಳನ್ನು ಸಮಾಜದಲ್ಲಿ ಕೆಳ ವರ್ಗದಲ್ಲಿರುವವರನ್ನು ಮೇಲೆತ್ತುವ ಉದ್ದೇಶದಿಂದ ಮಾಡಲಾಗುತ್ತದೆ’ ಎಂದು ಡಿಎಂಕೆ ಹೇಳಿದೆ.

ಹಾಗೆಯೇ ಅರ್ಜಿದಾರರು ರಾಜಕೀಯ ಪಕ್ಷವೊಂದಕ್ಕೆ ಸೇರಿದ್ದು, ರಾಜಕೀಯ ಕಾರಣಗಳಿಗೇ ಅರ್ಜಿ ಸಲ್ಲಿಸಿದ್ದಾರೆ ಎಂದೂ ಡಿಎಂಕೆ ದೂರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next