Advertisement

Kedar Jadhav; ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಆಲ್ ರೌಂಡರ್ ಕೇದಾರ್ ಜಾಧವ್

04:02 PM Jun 03, 2024 | Team Udayavani |

ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಕೇದಾರ್ ಜಾಧವ್ ಅವರು ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಮಹಾರಾಷ್ಟ್ರದ ಬ್ಯಾಟರ್ ಜಾಧವ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

Advertisement

ಮಹೇಂದ್ರ ಸಿಂಗ್ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೊಂದುವಾಗ ಘೋಷಣೆ ಮಾಡಿದ ರೀತಿಯನ್ನು ಕೇದಾರ್ ಜಾಧವ್ ಅವರು ಅನುಸರಿಸಿದ್ದಾರೆ. ಕಿಶೋರ್ ಕುಮಾರ್ ಅವರ ಜಿಂದಗಿ ಕೆ ಸಫರ್ ಹಾಡನ್ನು ಬಳಸಿ ತನ್ನ ವೃತ್ತಿ ಜೀವನದ ಹಲವು ಫೋಟೊಗಳನ್ನು ಬಳಸಿದ ವಿಡಿಯೋವನ್ನು ಇನ್ಸ್ಟಾಗ್ರಾಮ್ ಗೆ ಜಾಧವ್ ಅಪ್ಲೋಡ್ ಮಾಡಿದ್ದಾರೆ.

“ನನ್ನ ವೃತ್ತಿಜೀವನದುದ್ದಕ್ಕೂ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. 15.00 ಗಂಟೆಯಿಂದ ನನ್ನನ್ನು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಎಂದು ಪರಿಗಣಿಸಿ” ಎಂದು ಕೇದಾರ್ ಜಾಧವ್ ಪೋಸ್ಟ್‌ ನಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ತಮ್ಮ ನಿವೃತ್ತಿಯನ್ನು ಖಚಿತಪಡಿಸಿದ್ದಾರೆ.

ಕೇದಾರ್ ಜಾಧವ್ 2014 ಮತ್ತು 2020 ರ ನಡುವೆ ಭಾರತಕ್ಕಾಗಿ 73 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. 39 ವರ್ಷ ವಯಸ್ಸಿನ ಜಾಧವ್ ಅವರು ಎಂ.ಎಸ್ ಧೋನಿ ಅವರ ನಾಯಕತ್ವದಲ್ಲಿ ಪ್ರವರ್ಧಮಾನಕ್ಕೆ ಬಂದರು. ಹ್ಯಾಂಡಿ ಆಫ್ ಸ್ಪಿನ್ನರ್ ಆಗಿದ್ದ ಜಾಧವ್ 2019 ರ ಏಕದಿನ ವಿಶ್ವಕಪ್ ಆಡಿದ್ದರು.

Advertisement

ಕೇದಾರ್ ಜಾಧವ್ 73 ಏಕದಿನ ಪಂದ್ಯಗಳಲ್ಲಿ 2 ಶತಕ ಮತ್ತು 6 ಅರ್ಧಶತಕ ಸೇರಿದಂತೆ 1389 ರನ್ ಗಳಿಸಿದ್ದಾರೆ. ಭಾರತ ಪರ 9 ಟಿ20 ಪಂದ್ಯಗಳಲ್ಲಿ 122 ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್ ನಲ್ಲಿ 5.15 ರ ಎಕಾನಮಿ ದರದಲ್ಲಿ 27 ವಿಕೆಟ್ಗಳನ್ನು ಪಡೆದರು.

93 ಐಪಿಎಲ್ ಪಂದ್ಯಗಳನ್ನು ಆಡಿರುವ ಕೇದಾರ್ 1196 ರನ್ ಗಳಿಸಿದ್ದಾರೆ. 2018ರಲ್ಲಿ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಡೆಲ್ಲಿ ಡೇರ್ ಡೆವಿಲ್ಸ್, ಕೊಚ್ಚಿ ಟಸ್ಕರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next