Advertisement
ಮಾಳಗಡ್ಡೆಯಲ್ಲಿ ಬದುಕು ಸಾಗಿಸುವ ಅಲೆಮಾರಿಗಳಿಗೆ ಈಗಾಗಲೇ ಹಕ್ಕುಪತ್ರ ನೀಡಲಾಗಿದೆ. ರಾಜೀವ್ ಗಾಂಧಿ ನಿಗಮದಿಂದ 2 ಲಕ್ಷ ರೂ. ಪರಿಶಿಷ್ಟ ಜಾತಿ ಅಲೆಮಾರಿ ಕೋಶ 2 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಪ್ರಧಾನಿ ಮಂತ್ರಿ ಆವಾಸ್ ಯೋಜನೆಯಿಂದ 1.50 ಲಕ್ಷ ಸೇರಿ ಒಂದು ಕುಟುಂಬಕ್ಕೆ 5.50 ಲಕ್ಷ ರೂ. ಮನೆ ನಿರ್ಮಾಣಕ್ಕೆ ಹಣ ನಿಗದಿ ಮಾಡಲಾಗಿದೆ.
Related Articles
Advertisement
ಅಲ್ಲದೇ ಭೂಮಿ ಸಮತಟ್ಟು ಅನುದಾನದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಕೂಗು ಕೇಳಿಬಂದಿದೆ. ಬದುಕೇ ಅತಂತ್ರ: ಮಾಳಗಡ್ಡೆ ಪ್ರದೇಶದಲ್ಲಿ ಕಳೆದ 30 ವರ್ಷಗಳಿಂದ 250ಕ್ಕೂ ಹೆಚ್ಚು ಅಲೆಮಾರ ಕುಟುಂಬಗಳು ಹರಕು, ಮುರುಕು, ಗುಡಿಸಲಲ್ಲಿ ವಾಸಿಸುತ್ತಿದ್ದಾರೆ. ನಿವೇಶನ ಸಮತಟ್ಟು ಕೆಲಸದ ಹಿನ್ನೆಲೆ ಇದೀಗ ಖಾಸಗಿ ವ್ಯಕ್ತಿಗಳ ಜಾಗೆಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಕ್ಕುಪತ್ರಗಳನ್ನು ಕಾಯ್ದಿಟ್ಟುಕೊಳ್ಳುವಷ್ಟು ಸೂಕ್ತ ವ್ಯವಸ್ಥೆ ಇಲ್ಲದೇ ಚಳಿ, ಮಳೆ, ಗಾಳಿಗೆ ಸಿಲುಕಿ ಅತಂತ್ರ ಬದುಕು ಎದುರಿಸುತ್ತಿದ್ದಾರೆ. ವಿಷ ಜಂತುಗಳ ಭಯದಲ್ಲೇ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ ಅಲೆಮಾರಿಗಳು.
ವಿದ್ಯುತ್ ಸೌಲಭ್ಯವಿಲ್ಲ: ಅಲೆಮಾರಿ ಕುಟುಂಬಗಳಿಗೆ ಮನೆ ನಿರ್ಮಾಣವಾಗುವವರೆಗೂ ತಾತ್ಕಾಲಿಕವಾಗಿ ಎಲ್ಲೆಂದರಲ್ಲಿ ಖಾಸಗಿ ವ್ಯಕ್ತಿಗಳ ನಿವೇಶನದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ವಿದ್ಯುತ್ ಸೌಲಭ್ಯವಿಲ್ಲದೇ ಕತ್ತಲಲ್ಲೇ ಬದುಕು ಸಾಗಿಸಬೇಕು. ವಾಸಿಸುವ ಪ್ರದೇಶದ ಸುತ್ತಲೂ ಅವ್ಯವಸ್ಥೆ ಇದೆ. ಭೂಮಿ ಸಮತಟ್ಟು ಕೆಲಸ ಅಲ್ಪಸ್ವಲ್ಪ ಬಾಕಿ ಉಳಿದಿದೆ ಎಂಬುವುದು ಗಮನಕ್ಕೆ ಬಂದಿದೆ. ನಿವೇಶನ ಪರಿಶೀಲಿಸಿದ ನಂತರ ಮನೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ.
ಈಶ್ವರಪ್ಪ ಕಟ್ಟಿಮನಿ, ಡಾ| ಬಿ.ಆರ್. ಅಂಬೇಡ್ಕರ್ ನಿಗಮ, ಜಿಲ್ಲಾ ವ್ಯವಸ್ಥಾಪಕ
ನಾಗರಾಜ ತೇಲ್ಕರ್