Advertisement

ಕೋವಿಡ್ ಹಿಮ್ಮೆಟ್ಟಿಸಲು ಸರ್ವ ಸನ್ನದ್ಧ: ಸಿಎಂ ಬೊಮ್ಮಾಯಿ

11:23 PM Dec 24, 2022 | Team Udayavani |

ಹಾವೇರಿ: ಕೊರೊನಾ ಹಿನ್ನೆಲೆ ಯಲ್ಲಿ ಬೂಸ್ಟರ್‌ ಡೋಸ್‌ ಲಸಿಕಾ ಪ್ರಕ್ರಿಯೆ ಹೆಚ್ಚಿಸಲಾಗುವುದು. ಆಸ್ಪತ್ರೆಗಳಲ್ಲಿ ಆಕ್ಸಿಜನ್‌, ಬೆಡ್‌ಗಳು ಸೇರಿ ಮೂಲಭೂತ ಸೌಕರ್ಯ, ತಂತ್ರಜ್ಞಾನ ಅಳವಡಿಸಿ ಐಸಿಯು ಘಟಕಗಳನ್ನು ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶಿಗ್ಗಾವಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ಮಾಸ್ಕ್ ಧರಿಸಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು. ಏರ್‌ಪೋರ್ಟ್‌ ಹಾಗೂ ಬಸ್‌ನಿಲ್ದಾಣಗಳಲ್ಲಿ ನಿಗಾ ವಹಿಸಲು ಸೂಚನೆ ನೀಡಿ¨ªೇವೆ. ಮೊದಲು ಪಾಲಿಸುತ್ತಿದ್ದ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದರು.

ಸಮ್ಮೇಳನದಲ್ಲಿ ಮುಂಜಾಗ್ರತ ಕ್ರಮ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊರೊನಾ ಆತಂಕದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಸಮ್ಮೇಳನ ಬಯಲು ಪ್ರದೇಶದಲ್ಲಿ ಆಗುವುದರಿಂದ ತೊಂದರೆಯ ಸಾಧ್ಯತೆ ಇಲ್ಲ. ಆದರೂ, ಮುಂಜಾಗ್ರತ ಕ್ರಮಗಳ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದರು.

ರಾಜ್ಯದಲ್ಲಿ 16 ಕೋವಿಡ್‌ ಕೇಸ್‌ ಪತ್ತೆ
ಬೆಂಗಳೂರು: ಚೀನದಲ್ಲಿ ಕೋವಿಡ್‌ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಆತಂಕ ಸೃಷ್ಟಿಯಾಗಿದೆ.

ಶನಿವಾರ ಕರ್ನಾಟಕದಲ್ಲಿ 16 ಕೋವಿಡ್‌ ಪ್ರಕರಣ ವರದಿಯಾಗಿದ್ದು, ಏರಿಕೆ ಕಂಡು ಬಂದಿಲ್ಲ.

Advertisement

ಬೆಂಗಳೂರು ನಗರದಲ್ಲಿ 10, ಮೈಸೂರಿನಲ್ಲಿ 3, ಹಾಸನ, ಕೋಲಾರ, ವಿಜಯಪುರದಲ್ಲಿ ತಲಾ 1 ಕೋವಿಡ್‌ ಕೇಸ್‌ ಪತ್ತೆಯಾಗಿದೆ. ಇದನ್ನು ಹೊರತುಪಡಿಸಿದರೆ ತರ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಕೋವಿಡ್‌ನಿಂದ 13 ಮಂದಿ ಬಿಡುಗಡೆಯಾಗಿದ್ದು, 1,241 ಹೊಸ ಪ್ರಕರಣ ಸಕ್ರಿಯವಾಗಿದೆ. ಕಳೆದ 3 ದಿನಗಳಿಂದ ಶೂನ್ಯ ಕೋವಿಡ್‌ ಮರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next