Advertisement
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಅಗತ್ಯ ಪೂರ್ವಸಿದ್ಧತೆ ಮಾಡಲಾಗಿದ್ದು ಮತಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು ಇದಕ್ಕಾಗಿ 22 ಸೆಕ್ಟರ್ ಮಾಡಲಾಗಿದೆ. ಪ್ರತಿ ಸೆಕ್ಟರ್‌ನಲ್ಲಿ 10ರಿಂದ 15 ಮತಗಟ್ಟೆಗಳು, ಇದರ ವ್ಯಾಪ್ತಿಯಲ್ಲಿ ಬರಲಿದ್ದು ವಿವಿಧ ಇಲಾಖೆ ಅಧಿಕಾರಿಗಳು ಈ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿಯೊಂದು ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ಹಾಗೂ ವಿದ್ಯುತ್, ಶೌಚಾಲಯ, ಸೈನ್ ಬೊರ್ಡ್, ಅಂಗವಿಕಲರಿಗೆ ರ್‍ಯಾಂಪ್ ಸೇರಿದಂತೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
Related Articles
Advertisement
ಯಾವುದೆ ದೂರು ಅಥವಾ ಸಾರ್ವಜನಿಕರಿಗೆ ಬೇಕಾದ ಯಾವುದೆ ಮಾಹಿತಿ ಅಲ್ಲದೆ ಅಹಿತಕರ ಘಟನೆಗೆ ಸಂಬಂಧಿಸಿದಂತಹ ದೂರಿಗಾಗಿ ಇಂಡಿಯ ನಮ್ಮ ಕಚೇರಿಯಲ್ಲಿ ಹಾಗೂ ಜಿಲ್ಲಾ, ರಾಜ್ಯಮಟ್ಟದಲ್ಲಿ ಕೂಡಾ ಆನ್‌ಲೈನ್ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಚುನಾವಣೆಗೆ ಸಂಬಂಧಿಸಿದ ದೂರು ಅಥವಾ ಸಮಸ್ಯೆಗಳನ್ನು ಇದರ ಮೂಲಕ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ನಡೆಸುವ ಯಾವುದೆ ಸಭೆ, ಸಮಾರಂಭಗಳ ಮೇಲೆ ನಿಗಾ ಇಡುವ ಸಲುವಾಗಿ ವಿಡಿಯೋ ಚಿತ್ರಿಕರಣ ಮಾಡುವವರನ್ನು ನೇಮಕ ಮಾಡಲಾಗಿದ್ದು, ಇದಕ್ಕಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರಿಂದ ಆಗುವ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ನಾಮ ಪತ್ರ ಸಲ್ಲಿಸಲು ಕೇವಲ 5 ಜನರಿಗೆ ಮಾತ್ರ ಕಚೇರಿಯಲ್ಲಿ ಒಳ ಪ್ರವೇಶವಿದ್ದು ನಾಮಪತ್ರ ಸಲ್ಲಿಸಲು ಆಗಮಿಸಿದಾಗ ಕೇವಲ 3 ವಾಹನಗಳಿಗೆ ಮಾತ್ರ 100 ಮೀ. ಅಂತರದಲ್ಲಿ ನಿಲ್ಲಿಸಲು ಅವಕಾಶವಿರುತ್ತದೆ. ಬೇರೆಯಾವುದೆ ವಾಹನಗಳಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು. ತಹಶೀಲ್ದಾರ್ ಡಿ.ಎಂ. ಪಾಣಿ, ಕಂದಾಯ ನಿರೀಕ್ಷಕ ಬಿ.ಎ. ರಾವೂರ, ಪಿ.ಜೆ. ಕೊಡಹೊನ್ನ, ಸಂತೋಷ ಹೊಟಗಾರ ಇದ್ದರು.