Advertisement

ರಾಜಸ್ಥಾನ: ಇಂದು ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ 

11:48 PM Nov 20, 2021 | Team Udayavani |

ಜೈಪುರ: ರಾಜಸ್ಥಾನ ಸಚಿವ ಸಂಪುಟವನ್ನು ಪುನಾರಚಿಸಲು ಮುಂದಾಗಿರುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಶನಿವಾರದಂದು ತಮ್ಮ ಸಂಪುಟದ ಎಲ್ಲ ಸಚಿವರ ರಾಜೀನಾಮೆಯನ್ನು ಪಡೆದಿದ್ದಾರೆ.

Advertisement

ಗುಜರಾತ್‌ ಮಾದರಿಯಲ್ಲಿ ಇಡೀ ಸಂಪುಟವನ್ನು ವಿಸರ್ಜಿಸಿ, ಹೊಸ ಸಂಪುಟವನ್ನು ಅಸ್ತಿತ್ವಕ್ಕೆ ತರಲು ಅವರು ಮುಂದಾಗಿದ್ದಾರೆ. ಈಗಾಗಲೇ ಹೊಸ ಸಂಪುಟ ಸದಸ್ಯರ ಪಟ್ಟಿ ಸಿದ್ಧವಾಗಿದ್ದು, ರವಿವಾರ ಹೊಸ ಸಂಪುಟ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಹೇಳಲಾಗಿದೆ.

10 ಹೊಸಬರಿಗೆ ಅವಕಾಶ?:  ಗೆಹ್ಲೋಟ್‌ರ ಹೊಸ ಸಂಪುಟದಲ್ಲಿ ಒಟ್ಟು  10 ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಅವರಲ್ಲಿ ಆರು ಶಾಸಕರು ಗೆಹ್ಲೋಟ್‌ ಬಳಗದವ­ರಾಗಿದ್ದು, ಉಳಿದ ನಾಲ್ವರು ಕಾಂಗ್ರೆಸ್‌ನ ಯುವ ನಾಯಕ ಸಚಿನ್‌ ಪೈಲಟ್‌ ತಂಡದವರಾಗಿರಲಿದ್ದಾರೆ ಎಂದು “ನ್ಯೂಸ್‌ 18′ ವರದಿ ಮಾಡಿದೆ.

ಹೊಸ ಸಂಪುಟ ಅಸ್ತಿತ್ವಕ್ಕೆ ಬಂದ ಕೂಡಲೇ 15 ಸಂಸದೀಯ ಕಾರ್ಯದರ್ಶಿಗಳನ್ನು ಸೇರಿಸಿಕೊಳ್ಳ­ಲಾಗುವುದು. ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ರವಿವಾರ ಸಂಜೆ 4 ಗಂಟೆಗೆ ರಾಜ್ಯಪಾಲರ ನಿವಾಸದಲ್ಲಿ ನಡೆಯಲಿದೆ.

ಎರಡು ಸ್ಥಾನ ಖಾಲಿ?: ರಾಜಸ್ಥಾನದಲ್ಲಿ ಮುಖ್ಯ­ಮಂತ್ರಿ ಸೇರಿ ಒಟ್ಟು 30 ಸಚಿವ ಸ್ಥಾನಕ್ಕೆ ಅವಕಾಶವಿದ್ದು, ಅದರಲ್ಲಿ 2 ಸ್ಥಾನವನ್ನು ಖಾಲಿ ಬಿಡಲಾಗುವುದು ಎನ್ನಲಾಗಿದೆ. ಕಾಂಗ್ರೆಸ್‌ನ್ನು ಬೆಂಬಲಿಸಿದ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನವಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಲಾಗಿದ್ದು, ಬಿಎಸ್‌ಪಿ ತ್ಯಜಿಸಿ ಕಾಂಗ್ರೆಸ್‌ ಸೇರಿದ್ದ ಶಾಸಕರಿಗೆ ಹೊಸ ಸಂಪುಟದಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು  ಕಾಂಗ್ರೆಸ್‌ನ ಆಂತರಿಕ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next